ರಾಜ್ಯ ಸರ್ಕಾರದ ಮನವಿಯ ಹಿನ್ನೆಲೆಯಲ್ಲಿ ತೊಗರಿ ಮತ್ತು ಕಡಲೆಯನ್ನು ಬೆಂಬಲ ಬೆಲೆಯಡಿ ಖರೀದಿ ಮಾಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಕೃಷಿ ಸಚಿವರಾದ ಶಿವಾನಂದ್ ಪಾಟೀಲರು ತಿಳಿಸಿದ್ದಾರೆ.
ಪ್ರತಿ ಕ್ವಿಂಟಲ್ ತೊಗರಿಗೆ 7.550/- ರೂ ಹಾಗೂ ಕಡಲೆಗೆ 5,650/- ರೂ. ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಆದರೆ, ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ತೊಗರಿಗೆ 10,000 -14,000 ರೂ. ಇದೆ. ಮಾರುಕಟ್ಟೆಯಲ್ಲಿ ಕಡಲೆ ಪ್ರತಿ ಕ್ವಿಂಟಲ್ 5,000 /- ಇದೆ. ತೊಗರಿ ಹಾಗೂ ಕಡಲೆಯ ಮೇಲಿರುವ ಬೆಂಬಲ ಬೆಲೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಇರುವುದು ಅವೈಜ್ಞಾನಿಕ ಹಾಗೂ ತರ್ಕ ರಹಿತವಾಗಿದೆ.
ಈ ಬಾರಿ ತೊಗರಿ ಬೆಳೆದಿರುವ ಕಲ್ಬುರ್ಗಿ ಹಾಗೂ ವಿಜಯಪುರದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕಳಪೆ ಬೀಜ ಹಾಗೂ ವ್ಯತಿರಿಕ್ತ ಹವಾಮಾನದಿಂದ ಇಳುವರಿ ಕುಸಿದಿದೆ. ಇಷ್ಟು ಸಾಲದಂತೆ, ಕೂಲಿ, ಬೀಜ, ಔಷಧಿ/ಗೊಬ್ಬರ ಬೆಲೆ 2 ಪಟ್ಟು ಜಾಸ್ತಿ ಆಗಿದೆ.
ಈ ಸಂದರ್ಭದಲ್ಲಿ, ಸರ್ಕಾರ ರೈತರಿಗೆ ನೆರವಾಗುವ ಬದಲಿಗೆ ಮಾರುಕಟ್ಟೆಯಲ್ಲಿರುವ ದರದಿಂದ ಕಡಿಮೆ ದರವನ್ನು ಬೆಂಬಲ ಬೆಲೆಯೆಂದು ಘೋಷಿಸಿದೆ. ಈ ರೀತಿಯಾದ ಅವೈಜ್ಞಾನಿಕ ದರ ನಿಗದಿ ಮಾಡುವುದರಿಂದ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಜೀವನ ನಡೆಸುವದೇ ಕಷ್ಟಕರವಾಗಿದೆ. ಬೆಂಬಲ ಬೆಲೆ ನಿಗದಿ ಮಾಡುವಾಗ ಕೃಷಿ ತಜ್ಞರನ್ನು, ಮಾರುಕಟ್ಟೆಯಲ್ಲಿರುವ ಬೇಡಿಕೆ ಮತ್ತು ಪೂರೈಕೆಯ ವಾತಾವರಣ, ಹವಾಮಾನ, ಒಟ್ಟು ಇಳುವರಿಯನ್ನು ಪರಿಗಣಿಸಿ ಯಾರಿಗೂ ಸಹ ಅನ್ಯಾಯವಾಗದಂತೆ ಕೇಂದ್ರ ಬೆಂಬಲ ಬೆಲೆಯನ್ನು ರೂಪಿಸಬೇಕು. ಕಾಟಾಚಾರಕ್ಕೆ ಬೆಂಬಲ ಬೆಲೆ ರೂಪಿಸಿ ಅದನ್ನು ಅಧಿಕೃತವಾಗಿ ಘೋಷಿಸಿದರೆ ರೈತ ಹೊಲ ಮಾರಿಕೊಳ್ಳುವ ಪರಿಸ್ಥಿತಿ ಬರುತ್ತದೆ.
-ಪವನ್.ಎಸ್,.ಬೆಂಗಳೂರು
