ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಶಾಲೆಯಲ್ಲಿ ಕಲಿತಿರುವ ಹಳೆ ವಿದ್ಯಾರ್ಥಿಗಳು ಸೇರಿ ಶಾಲೆಯನ್ನೊಳಗೊಂಡ ಒಂದು ಹಳೆ ವಿದ್ಯಾರ್ಥಿಗಳ ಬಳಗ ಎಂದು ರಚನೆ ಮಾಡಿಕೊಂಡಿದ್ದು ಸರಕಾರಿ ಶಾಲೆ ಅಭಿವೃದ್ದಿಗೆ ಶ್ರಮವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿ
ಮಾರುತಿ ಮಾತನಾಡಿ ಶಾಲೆಯ ಏಳಿಗೆಗೆ ನಾವೆಲ್ಲರೂ ಸೇರಿ ಶಾಲೆ ಅಭಿವೃದ್ದಿಯೆಡೆಗೆ ಸಹಕರಿಸೋಣ ಈಗ ಸ್ವಚ್ಚತೆ ಹಾಗೂ ಸುಣ್ಣ ಬಣ್ಣ ಹಚ್ಚುವ ಮೂಲಕ ಪ್ರಾರಂಭಿಸಿದ್ದೀವಿ ಎಂದರು.
ಶಾಲೆಯ ಹಳೆ ವಿದ್ಯಾರ್ಥಿ ಗೂಡಪಾಷ ಮಾತನಾಡಿ ಸರಕಾರಿ ಶಾಲೆ ಮುಚ್ಚುವ ಹಂತದಲ್ಲಿ ಇದ್ದು ಸರಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ, ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹಳೆ ವಿದ್ಯಾರ್ಥಿಗಳ ತಂಡದಿಂದ ಸಣ್ಣ ಸಣ್ಣ ಅಭಿವೃದ್ಧಿ ಕಾರ್ಯಗಳನ್ನು ಈ ಪ್ರಾರಂಭಿಸಿದ್ದೀವಿ ಗ್ರಾಮಸ್ತರೆಲ್ಲರೂ ಸಹಕರಿಸಿದರೆ ಇನ್ನಷ್ಟೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ದಿ ಮಾಡಬಹುದೆಂದರು.
ಹಳೆ ವಿದ್ಯಾರ್ಥಿಗಳಾದ ವಿ.ಮಂಜುನಾಥ, ಎಂ.ಪಂಪಾಪತಿ ,ಗೂಡಪಾಷ , ಮಂಜುನಾಥ ಹೆಚ್ , ಮಾರುತಿ ಡೊಳ್ಳು , ಕೆ.ಬಸವರಾಜ , ಪಿ.ಶ್ರೀಕಾಂತ , ಕೆ.ಹನುಮೇಶ ,ಇಮ್ರಾನ್ , ಶಿವು , ಗುಂಡುರ್ ಹನುಮೇಶ , ಬಸುಭಾವಿ ,ರಾಘವೇಂದ್ರ ಆರ್ , ಶಗೀರ ಹಮ್ಮದ್ ಕೆ.ನಾಗರಾಜ ,ಹನುಭಾವಿ, ವಿ. ನಿಂಗರಾಜ ಸೇರಿದಂತೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಭಾಗಿ ಇದ್ದರು.
