ಕೊಪ್ಪಳ ಜ. ೨೬: ಭಾರತದ ಸಂವಿಧಾನ ನಮಗೆ ನಿಜವಾದ ನ್ಯಾಯವನ್ನು ಒದಗಿಸಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಸಂವಿಧಾನ ರಚನೆಯಲ್ಲಿ ತೊಡಗಿಕೊಂಡಿದ್ದ ಪ್ರತಿಯೊಬ್ಬರಿಗೂ ನಾವೆಲ್ಲ ಋಣಿಯಾಗಬೇಕಿದೆ ಎಂದು ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಕೆ ಲಮಾಣಿ ಅಭಿಪ್ರಾಯಪಟ್ಟರು.
ರವಿವಾರದಂದು ಕಾಲೇಜಿನ ಮೈದಾನದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಧ್ವಜಾರೋಹಣ ಮಾಡಿ ಬಳಿಕ ಅವರು ಮಾತನಾಡಿದರು. ಸ್ವಾತಂತ್ರ್ಯಕ್ಕೆ ಮೊದಲು ಹಿಂದುಳಿದಿದ್ದ ಅದೆಷ್ಟೋ ಜಾತಿಗಳು ಇಂದು ಸಮಾನತೆಯನ್ನು ಪಡೆದು ಮೇಲೆ ಬಂದಿವೆ. ಆರ್ಥಿಕ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸಮಾನತೆಯನ್ನು ಸಂವಿಧಾನ ಕೊಟ್ಟಿರುವುದು ನಮಗೆಲ್ಲಾ ನಿಜವಾದ ನ್ಯಾಯ ಸಿಕ್ಕಂತಾಗಿದೆ ಎಂದರು.
ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ವಿಠೋಬ ಎಸ್. ಅವರು ಮಾತನಾಡಿ
ಸಂವಿಧಾನ ರಚನೆಯ ಬಳಿಕ ಅದನ್ನು ಅಂಗೀಕಾರ ಮಾಡಿದ ದಿನವನ್ನೇ ನಾವು ಗಣತಂತ್ರ ದಿನೋತ್ಸವ ಅಥವಾ ಪ್ರಜಾರಾಜ್ಯ ದಿನಾಚರಣೆಯಾಗಿ ಸಂಭ್ರಮಿಸುತ್ತಿದ್ದೇವೆ. ಡಾ. ಅಂಬೇಡ್ಕರ್ ಅವರನ್ನು ನಾವು ಸ್ಮರಿಸುತ್ತಾ ಜೀವನದಲ್ಲಿ ಹೆಜ್ಜೆ ಇಡಬೇಕಿದೆ. ಭ್ರಷ್ಟಾಚಾರ ಇನ್ನೂ ಸಮಾಜದಲ್ಲಿ ಉಳಿದಿದೆ. ಅದನ್ನು ಬೇರು ಸಮೇತ ಕಿತ್ತೆಸೆಯಬೇಕಿದೆ. ಇಂದು ನಮ್ಮ ಸಮಾಜದಲ್ಲಿ ಬಹುತ್ವ ಕಡಿಮೆ ಆಗುತ್ತಿದೆ. ನಾವೆಲ್ಲರೂ ಪ್ರಮಾಣಕವಾಗಿ ಕರ್ತವ್ಯ ಮಾಡಬೇಕು ಎಂದು ಹೇಳಿದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ನರಸಿಂಹ ಗುಂಜಹಳ್ಳಿ ಮಾತನಾಡಿ ಸಂವಿಧಾನ ಜಗತ್ತಿಗೆ ಬಹುದೊಡ್ಡ ಕೊಡುಗೆಯಾಗಿದೆ. ಸಂವಿಧಾನದ ಆಶಯಗಳನ್ನು ತಿಳಿದುಕೊಂಡು ಅವುಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಸಾಮಾಜಿಕ ನ್ಯಾಯ ಅಂದರೇನು ಅನ್ನುವುದೇ ಪ್ರಜಾಪ್ರಭುತ್ವದ ಮೊದಲ ಪಾಠವಾಗಿದೆ. ನಮ್ಮ ಸಂವಿಧಾನವು ಸಮಾಜದ ಎಲ್ಲಾ ಸ್ತರದ ವ್ಯಕ್ತಿಗಳನ್ನು ಎತ್ತಿ ಹಿಡಿದಿದೆ.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಹುಲಿಗೆಮ್ಮ ಬಿ, ಭೂಗೋಳ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅಶೋಕ್ ಕುಮಾರ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗವಿಸಿದ್ದಪ್ಪ ಮುತ್ತಾಳ,
ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರದೀಪಕುಮಾರ ಯು, ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ. ನಾಗರತ್ನ ತಮ್ಮಿನಾಳ, ಗ್ರಂಥಪಾಲ ಡಾ. ಮಲ್ಲಿಕಾರ್ಜುನ ಬಿ, ಕಾಲೇಜಿನ ಎಫ್. ಡಿ. ಎ ಶ್ರೀ ಮತಿ ಸೌಮ್ಯ ಹಿರೇಮಠ, ಶ್ರೀ ಮತಿ ನಂದಾ, ಅತಿಥಿ ಉಪನ್ಯಾಸಕರಾದ ಶಿವಪ್ರಸಾದ್ ಹಾದಿಮನಿ, ಶಿವಪ್ಪ ಬಡಿಗೇರ, ಕಲ್ಲಯ್ಯ ಪೂಜಾರ್, ಉಮೇಶ್ ಕಾತರಕಿ ಹಾಗೂ ಕಾಲೇಜಿನ ಬೋಧಕೇತರ ಸಿಬ್ಬಂದಿಗಳಾದ ತಾರಾಮತಿ, ಲಕ್ಷ್ಮಿ ಎ.ಕೆ, ರುಕ್ಕಮ್ಮ, ಗವಿಸಿದ್ದಪ್ಪ ಅಜ್ಜ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಡಾ. ಪ್ರದೀಪ್ ಕುಮಾರ ನಿರ್ವಹಿಸಿದರು. ಡಾ. ಹುಲಿಗೆಮ್ಮ ಸ್ವಾಗತಿಸಿದರು.
ಡಾ. ನರಸಿಂಹ ವಂದಿಸಿದರು.
