
ಕೊಪ್ಪಳ / ಗಂಗಾವತಿ: ದಿ. 16-೦2-2025 ರವಿವಾರ ಶ್ರೀ ಕೃಷ್ಣ ದೇವರಾಯ ಮನೆತನದ ಆನೆಗುಂದಿ ಶ್ರೀಮತಿ ಲಲಿತಾ ರಾಣಿ ರಾಜಮಾತೆ ಇವರ ಪತಿ ದೇವರು ಶ್ರೀರಂಗದೇವರಾಯಲು, ಮಾಜಿ ಕಾಂಗ್ರೆಸ್ ಪಕ್ಷದ ರಾಜ್ಯ ಸಚಿವರು ಮತ್ತು ಶ್ರೀಯುತ ವಿರುಪಾಕ್ಷಪ್ಪ ಸಿಂಗನಾಳರವರು ಭಾರತೀಯ ಜನತಾ ಪಕ್ಷದ ಮುಖಂಡರು ಮಾಜಿ ಕೊಪ್ಪಳ ಜಿಲ್ಲಾ ಅಧ್ಯಕ್ಷರು ಸಹ ಪ್ರಶಸ್ತಿ ವಿಜೇತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ರೂವಾರಿಗಳು ಶ್ರೀಯುತ ಎಂ,ಪರಶುರಾಮ ಪ್ರಿಯ ಪ್ರಕಾಶಕರು, ಶ್ರೀಯುತ ಕೃಷ್ಣ ಆಸೀಸ್ ಸಹ ಪ್ರಕಾಶಕರು, ಶ್ರೀಯುತ ರಗಡಪ್ಪ ಹೊಸಳ್ಳಿ, ಸಂಸ್ಥೆಯ ಅಧ್ಯಕ್ಷರು, ಎಲ್ಲ ಮಹನೀಯರು ಕಾರ್ಯಕ್ರಮದಲ್ಲಿ ಹಾಜರಿದ್ದ ಸವಿ ನೆನಪು ಎಲ್ಲರಿಗೂ ನನ್ನ ದೇಶ ಸೇವೆ, ಸಮಾಜ ಸೇವೆ, ಸಾಹಿತ್ಯ ಸೇವೆಯ, ಅಳಿಲು ಸೇವೆಯನ್ನು ಪರಿಗಣಿಸಿ ಎಲೆ ಮರೆ ಕಾಯಿ ಅಂತಿದ್ದ ನನ್ನನ್ನು ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿ ಗುರುತಿಸಿರುವ ಎಲ್ಲರಿಗೂ ಹೃದಯಪೂರ್ವಕ ಅಂತರಾಳದ ಶುಭ ದಿನದ ಶುಭ ವಂದನೆಗಳು ಎಂದು
ಹವ್ಯಾಸಿ ಬರಹಗಾರರು,ಕಾರ್ಗಿಲ್ ಯೋಧರು,ರಾಜ್ಯ ಪ್ರಶಸ್ತಿ ಪುರಸ್ಕೃತರು, ಶ್ರೀ ಚನ್ನಬಸಪ್ಪ ಬಳಗಾರ
ಇವರು ಪತ್ರಿಕಾ ಪ್ರಕಟಣೆ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.
