- ರಕ್ಷಣೆ?!.
ಎಷ್ಟು ಕೊಟ್ಟರೇನು
ವರನಿಗೆ ದಕ್ಷಿಣೆ?
ಸಿಗುತ್ತಿಲ್ಲವಲ್ಲ ,
ವಧುವಿಗೆ ರಕ್ಷಣೆ! - ಇಲ್ಲದ ದೇವರು.
ಸಮಯಕ್ಕಾದವರೇ,
ನಿಜವಾದ ಸ್ನೇಹಿತರು,
ದೇವರು,
ಕಷ್ಟಗಳಿಗೆ ಸ್ಪಂದಿಸದವರು
ಎಷ್ಟಿದ್ದರೇನು ಬಂಧು
ಬಾಂಧವರು?..
ಇಂಥವರು ಇದ್ದೂ
ಇಲ್ಲದ ದೇವರು! .
- ಮಡೇಸ್ನಾನ.
ಸವೆದರೂ ಶತಮಾನಗಳು,
ಸದಾ ಜೀವಂತ ವಾಗಿರುತ್ತವೆ
ಕೆಲವು ಮೌಢ್ಯ ಸಂಪ್ರದಾಯಗಳು,
ಇಲ್ಲಿದೆ ನೋಡಿ,ತಾಜಾ
ಉದಾಹರಣೆ, ಮಡೆ ಮಡೆ ಸ್ನಾನ,ಎಡೆ ಎಡೆ ಸ್ನಾನ,
ಅಯ್ಯೋ ಭಾರತಿಯೇ,
ಎಲ್ಲಿ ಹೋಯ್ತೇ ನಿನ್ನ ಮಾನ?
- ಹೀಗಿರು.
ಅಂದು ಕುವೆಂಪು ಹೇಳಿದ್ದರು
“ಎಲ್ಲಾದರೂ ಇರು, ಎಂತಾದರೂ ಇರು,ಎಂದೆಂದಿಗೂ ನೀ ಕನ್ನಡವಾಗಿರು,”
ಇಂದಿನವರು ಹೇಳುತ್ತಾರೆ, “ಎಲ್ಲಾದರೂ ಇರು,ಹೇಗಾದರೂ ಇರು,
ಎಂದಿಗೂ ನೀ ಕಂಗ್ಲೀಷ್ ನಾಗಿರು”
- ಶಿವಪ್ರಸಾದ್ ಹಾದಿಮನಿ ✍️
ಕೊಪ್ಪಳ.೫೮೩೨೩೧.
ಮೊಬೈಲ್ ಸಂಖ್ಯೆ.೭೯೯೬೭೯೦೧೮೯.
