
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೆನಕನಾಳ ಗ್ರಾಮದಲ್ಲಿ ಶ್ರೀ ವೀರಾಂಜನೇಯ ಕಿರಿಯ ಪ್ರಾಥಮಿಕ ಶಾಲೆಯ 14 ನೇ ವರ್ಷದ ಶಾಲಾ ವಾರ್ಷಿಕೋತ್ಸವ, ಪಾಲಕರ ದಿನಾಚರಣೆ, ಮಹಾಸರಸ್ವತಿ ಪೂಜೆ ಹಾಗೂ 2024 – 25 ನೇ ಶೈಕ್ಷಣಿಕ ವರ್ಷದ 5 ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಕೊಪ್ಪಳದ ಸರಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ. ಮಹಾಂತೇಶ .ಬಿ. ನೆಲಾಗಣಿ ಮುಖ್ಯ ಅತಿಥಿಯಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ಶ್ರದ್ದೆಯಿಂದ ಕಲಿತರೆ ಜ್ಞಾನ ಪಡೆದುಕೊಳ್ಳಬಹುದು ಹಾಗೂ ಮಾನವೀಯ ಮೌಲ್ಯಗಳಾದ ಸತ್ಯಂ ಶಿವಂ ಸುಂದರಂ, ಸಮಯ ಪರಿಪಾಲನೆ ಮತ್ತು ವಿಧೇಯತೆಯನ್ನು ಇಂದಿನ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಹಾಗೂ ಭಾಷಾಕೌಶಲಗಳಾದ ಆಲಿಸುವಿಕೆ, ಮಾತನಾಡುವಿಕೆ, ಓದುವಿಕೆ ಮತ್ತು ಬರೆಯುವಿಕೆ ಇವುಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪಾತ್ರ ಗಣನೀಯವಾದುದು, ವಿದ್ಯಾರ್ಥಿಗಳು ಪರೀಕ್ಷೆಯನ್ನು ಹಬ್ಬದಂತೆ ಎಂದು ತಿಳಿದು ಆಸಕ್ತಿಯಿಂದ ಅಭ್ಯಾಸ ಮಾಡಬೇಕು ಎಂದರು.

ಇನ್ನೋರ್ವ ಅತಿಥಿ ಶ್ರೀ ಲೆಂಕಪ್ಪ ವಾಲಿಕಾರ ವಲಯ ಸಂಪನ್ಮೂಲ ವ್ಯಕ್ತಿ ಹಾಗೂ ಕುಷ್ಟಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಮಾತನಾಡಿ ಶಿಸ್ತು ಶಿಕ್ಷಣದ ಮೊದಲ ಹಂತ. ಅಂತಹ ಶಿಸ್ತನ್ನು ಮತ್ತು ಗುಣಾತ್ಮಕ ಶಿಕ್ಷಣವನ್ನು ಈ ಸಂಸ್ಥೆಯ ಮಕ್ಕಳಲ್ಲಿ ನಾವು ಕಂಡಿದ್ದೇವೆ ಎಂದರು ಇನ್ನೋರ್ವ ಅತಿಥಿಯಾದ ಚಳಗೇರಿ ವಲಯದ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಶೇಖರಪ್ಪ ಕುರಿ ಮಾತನಾಡಿ ಈ ಶಾಲೆ 14 ವಸಂತಗಳನ್ನು ಯಶಸ್ವಿಯಾಗಿ ಪೂರೈಸಿ 15 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ಫು ನಿಜಕ್ಕೂ ಉತ್ತಮ ಬೆಳವಣಿಗೆ, ಈ ಸಂಸ್ಥೆಯ ಮೇಲೆ ಪಾಲಕರ ಸಹಾಯ, ಸಹಕಾರ ಹೀಗೆ ಇರಲಿ ಎಂದರು ಇನ್ನೋರ್ವ ಅಥಿತಿಗಳಾದ ಶ್ರೀ ನಾಗರಾಜ್ ಹಕ್ಕಿ ಹನುಮಸಾಗರದ ಕೆ ಡಿ ಪಿ ಸದಸ್ಯರು ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರು ಮಾತನಾಡಿ ಭೂಮಿಗೆ ಬಿದ್ದ ಬೀಜ, ಎದೆಗೆ ತಾಗಿದ ಅಕ್ಷರ ಇಂದಲ್ಲ ನಾಳೆ ಫಲ ನೀಡುತ್ತದೆ, ಈ ಸಂಸ್ಥೆ ಇನ್ನೂ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು, ಇನ್ನೋರ್ವ ಅತಿಥಿಯಾದ ಶ್ರೀ ಹನಮಂತಪ್ಪ ಕೊಪ್ಪಳ ಮುಖ್ಯ್ಯೊಪಾಧ್ಯಾಯರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನರಸಾಪುರ ಅವರು ಮಾತನಾಡಿ ವಿದ್ಯಾರ್ಥಿಗಳು ಗುಣಾಕಾರ, ಭಾಗಾಕಾರ, ಕೂಡಿಸುವುದು ಮತ್ತು ಕಳೆಯುವುದು, ಈ ಮೊದಲಾದವುಗಳನ್ನು ಸರಿಯಾಗಿ ಕಲಿಯಬೇಕು ಎಂದರು ಮತ್ತು ಈ ಸಂಸ್ಥೆಯ ಅಧ್ಯಕ್ಷರು ವಿದ್ಯಾರ್ಥಿಗಳ ಬಗ್ಗೆ ಬಹಳ ಕಾಳಜಿಹೊಂದಿದ್ದಾರೆ. ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಮೈಲಾರಪ್ಪ ಬಿಲಕಾರ, ನಮ್ಮ ಶಾಲೆಯಲ್ಲಿ 110 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಅದರಲ್ಲಿ 25 % ಮಕ್ಕಳು ಉಚಿತ ಮತ್ತು ಕಡ್ಡಾಯ ಶಿಕ್ಷಣದ ಅಡಿಯಲ್ಲಿ ದಾಖಲಾತಿ ಪಡೆದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಮತ್ತು ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡುವ ಸಂಕಲ್ಪ ನಮ್ಮದಾಗಿದೆ ಎಂದು ತಿಳಿಸಿದರು, ವೇದಿಕೆಯ ಮೇಲೆ ಶ್ರೀ ವೇ. ಮೂ. ಭೀಮಯ್ಯ ಮಂಟಗೇರಿ, ನೀಲಪ್ಪ ಮೇಟಿ, ತಿಮ್ಮನಗೌಡ ಪೋಲಿಸ್ ಪಾಟೀಲ್, ಬಸವರಾಜ್ ಬಂಡಿ, ಹನುಮಪ್ಪ ಮುಗಳಿ, ಹನಮಪ್ಪ ಚೂರಿ, ಡಾ. ಪ್ರಕಾಶ್, ಮತ್ತು ಶ್ರೀ ಮತಿ ಹನಮವ್ವ ಡಗ್ಗಿ ಮೊದಲಾದವರು ಇದ್ದರು. ಪ್ರಾರ್ಥನಾ ಗೀತೆಯನ್ನು ಕು. ಸ್ನೇಹಾ ಹಾಗೂ ಸಂಗಡಿಗರು, ಸ್ವಾಗತವನ್ನು ಶ್ರೀ ಮತಿ ಯಲ್ಲಮ್ಮ ಕಾಡದ್, ನಿರೂಪಣೆಯನ್ನು ಶ್ರೀಮತಿ ಕವಿತಾ ಎಂ. ಬಿಲಕಾರ, ಬಹುಮಾನ ವಿತರಣೆಯನ್ನು ಶ್ರೀ ಮತಿ ಶಿಲ್ಪಾ ಪೂಜಾರ್ ಹಾಗೂ ವಂದನಾರ್ಪಣೆಯನ್ನು ಶ್ರೀ ಮತಿ ವಿದ್ಯಾಶ್ರೀ ದೊಣ್ಣೆಗುಡ್ಡ ಅವರು ನೆರವೇರಿಸಿದರು. ನಂತರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ತದನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
- ಕರುನಾಡ ಕಂದ