ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಮ್ಮ ಭಾಗದ ಲೇಖಕರ ಪುಸ್ತಕಗಳನ್ನು ಓದಿ ಅವರನ್ನು ಗೌರವಿಸಬೇಕು : ಎಚ್. ಎಸ್. ಪಾಟೀಲ್

ಕೊಪ್ಪಳ : ನಮ್ಮ ಭಾಗದ ಸಾಹಿತಿಗಳ ಪುಸ್ತಕಗಳನ್ನು ಓದಿ ಅವರನ್ನು ನಾವು ಗೌರವಿಸಬೇಕು ಎಂದು ಕೊಪ್ಪಳದ ಹಿರಿಯ ಸಾಹಿತಿ ಎಚ್. ಎಸ್. ಪಾಟೀಲ್ ಹೇಳಿದರು.

ನಗರದಲ್ಲಿ ಮಂಗಳವಾರದಂದು ಮುಜುಮದಾರ ಫೌಂಡೇಶನ್ ಮತ್ತು ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ. ಪಂಚಾಕ್ಷರಿ ಹಿರೇಮಠ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ದೇಶದಲ್ಲಿ ಬದುಕಿದ್ದಾಗ ಅವರ ಬಗ್ಗೆ ಆಲೋಚನೆ ಮಾಡುವುದಿಲ್ಲ, ಅವರು ಮರಣ ಹೊಂದಿದ ನಂತರ ಅವರ ಕುರಿತು ಹೆಚ್ಚು ಚರ್ಚೆ ಮಾಡುತ್ತೇವೆ. ಈ ರೀತಿ ಪದ್ಧತಿ ಹೋಗಬೇಕು. ಪಂಚಾಕ್ಷರಿ ಹಿರೇಮಠ ಅವರು 1947 ಆಗಸ್ಟ್ 15 ರಂದು ಕೊಪ್ಪಳ ಕೋಟೆಯ ಮೇಲೆ ತ್ರಿವರ್ಣ ದ್ವಜ ಹಾರಿಸಿದ್ದರು. ಆಗ ಅವರು 7 ನೇ ತರಗತಿ ಓದುತ್ತಿದ್ದರು. ಇವರು ಧಾರವಾಡದಲ್ಲಿ ಪಾಟೀಲ್ ಪುಟ್ಟಪ್ಪ ಅವರ ಪ್ರಪಂಚ ಪತ್ರಿಕೆಯಲ್ಲಿ ಕೆಲಸ ಮಾಡಿದ್ದಾರೆ. ಇವರು ಕಥೆ, ಕಾದಂಬರಿ ಮತ್ತು ಬಹಳಷ್ಟು ಕಥಾ ಸಂಕಲನಗಳನ್ನು ಬರೆದಿದ್ದಾರೆ. ಬಹಳಷ್ಟು ಪುಸ್ತಕಗಳನ್ನು ಅನುವಾದ ಮಾಡಿದ್ದಾರೆ. 250 ಪುಸ್ತಕಗಳನ್ನು ಬರೆದಿದ್ದಾರೆ. ಇವರಿಗೆ 1985 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಇವರು ಬಹು ಭಾಷೆ ಪಂಡಿತರು. ಬಹಳಷ್ಟು ದೇಶಗಳನ್ನು ಸುತ್ತಾಡಿದ್ದರು. ಅವರು ಬಿಸರಳ್ಳಿ ಊರಿಗೆ ಬಂದಾಗ ಬಹಳಷ್ಟು ಯುವಕರಿಗೆ ವಿದ್ಯಾಭ್ಯಾಸ ಮಾಡುವುದಕ್ಕೆ ಪ್ರೋತ್ಸಾಹಿಸುತ್ತಿದ್ದರು. ಅಂತಾರಾಷ್ಟ್ರೀಯ ಕವಿ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾರೆ. ತೆಲುಗು, ತಮಿಳು ಮತ್ತು ಮಲೆಯಾಳಿ ಈ ಮೂರು ಭಾಷೆಗಳನ್ನು ಕಲಿತು, ಈ ಮೂರೂ ಭಾಷೆಗಳ ಪ್ರಮುಖ ಕವಿಗಳ ಕವಿ, ಕಲ್ಪನೆ ಮತ್ತು ಚಿತ್ರಗಳನ್ನು ಸಂಗ್ರಹಣೆ ಮಾಡಿ ಬರೆದಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ ಅವರು ಮಾತನಾಡಿ ಕಬೀರ್ ದಾಸ್ ಬರೆದಿರುವ ರಾಂಗೆ ರಾಘವ ಕಾದಂಬರಿ ಕುರಿತು ಮಾತನಾಡುತ್ತಾ ಈ ರೀತಿಯ ಕವಿಗಳ ಕುರಿತು ಅನೇಕ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಪಂಚಾಕ್ಷರಿ ಹಿರೇಮಠ ಅವರ ಜ್ಞಾನ, ಹೋರಾಟಗಳು ಇಂದಿನ ಯುವ ಜನಾಂಗಕ್ಕೆ ತಿಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕವಯತ್ರಿ ಅರುಣಾ ನರೇಂದ್ರ ಅವರು ಮಾತನಾಡುತ್ತಾ ಪಂಚಾಕ್ಷರಿ ಹಿರೇಮಠ ಅವರು ಮಗುವಿನ ತರಹ ಮನಸ್ಸುವುಳ್ಳವರು. ಇವರು ನಮ್ಮ ಭಾಗದ ಪ್ರಮುಖ ಕವಿ. ಇವರು 500 ಕ್ಕೂ ಹೆಚ್ಚು ಮುಕ್ತಕಗಳನ್ನು ಬರೆದಿದ್ದಾರೆ. ಇವರು ಒಬ್ಬ ಶ್ರೇಷ್ಠ ಕವಿ ಮತ್ತು ಪಂಡಿತರು ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಹಿರಿಯ ಕವಿ ಮತ್ತು ವಕೀಲರು ವಿಜಯ್ ಅಮೃತ್ ರಾಜು ಅವರು ಮಾತನಾಡುತ್ತಾ ನಾವು ಬೇರೆ ದೇಶ, ಬೇರೆ ರಾಜ್ಯದ ಕವಿಗಳ ಮತ್ತು ಸಾಹಿತಿಗಳ ಪುಸ್ತಕಗಳನ್ನು ಓದಿ ಅವರ ಕುರಿತು ತಿಳಿದುಕೊಳ್ಳುತ್ತೇವೆ. ಆದರೆ ನಮ್ಮ ಪಕ್ಕದ ಊರಿನ ಸಾಹಿತಿಗಳ ಕುರಿತು ನಮಗೆ ಪರಿಚಯವೇ ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರೊ. ಅಲ್ಲಮ ಪ್ರಭು ಬೆಟ್ಟದೂರು ಡಾ. ಪಂಚಾಕ್ಷರಿ ಹಿರೇಮಠ ಅವರು ಕರ್ನಾಟಕ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿದ್ದರು. ಇವರು ತರಗತಿ ಮತ್ತು ಮನೆಯಲ್ಲಿ ಸಮಾಜದಲ್ಲಿರುವ ಸಮಸ್ಯೆಗಳ ಕುರಿತು ಸಂವಾದ ಮಾಡುತ್ತಿದ್ದರು. ಇವರು ನಯ, ವಿನಯ ಉಳ್ಳವರಾಗಿದ್ದರು. ಇವರು ಸಾಹಿತ್ಯದಲ್ಲಿ ಪ್ರಾವೀಣ್ಯತೆ ಹೊಂದಿದ್ದರು. ಆಶಾವಾದಿ ದೃಷ್ಟಿಕೋನವನ್ನು ಹೊಂದಿದ್ದರು. ಭಿನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು. ಸರಳ, ಸೌಜನ್ಯ ಶೀಲತೆ ಉಳ್ಳವರಾಗಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಜಾಮದಾರ ಫೌಂಡೇಶನ್ ನ ಶ್ರೀ ಮತಿ ಸಾವಿತ್ರಿ ಮುಜಾಮದಾರ, ರವಿ ಕಾಂತನವರು, ಮಹಾಂತೇಶ್ ಕೊತಬಾಳ, ಡಾ.ಮಹಾಂತೇಶ ನೆಲಾಗಣಿ, ನರೇಂದ್ರ ಪಾಟೀಲ್, ಲಕ್ಷ್ಮಣ್ ಪೀರಗಾರ್, ಶರಣು ಶಟ್ಟರ್, ಡಾ. ನರಸಿಂಹ ಹಾಗೂ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಡಾ. ಸುಧಾಕರ್ ವಂದಿಸಿದರು. ರಾಮಣ್ಣ ಹಾಲ್ಮೋಸುರುಕೇರಿ ನಿರೂಪಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ