೧. ಪ್ರೀತಿ.
ಸ್ಫೂರ್ತಿ, ಕೀರ್ತಿ
ಆರತಿ,ಭಾರತಿ
ರತಿ,ಹೆಸರಾವುದಾದರೇನು
ಒಂದೇ ಅಲ್ಲವೇ ಪ್ರೀತಿ!
೨. ಪ್ರೇಮ ವಿವಾಹ.
ಆಗಬೇಕೆಂದರೆ
ಪ್ರೇಮ ವಿವಾಹ,
ಒಪ್ಪುತ್ತಿಲ್ಲ ಈ
ಜನ ಪ್ರವಾಹ! (ಸಮಾಜ)
೩. ಪ್ರೀತಿಗೆ ಸಾವಿಲ್ಲ.
“ಪ್ರೇಮಕ್ಕೆ ಕಣ್ಣಿಲ್ಲ “
ಎಂಬುದೆಷ್ಟು ನಿಜವೋ,
ಪ್ರೀತಿಗೆ ಸಾವಿಲ್ಲ,
ಎಂಬುದೂ ಅಷ್ಟೇ ನಿಜ!
೪. ದಂಗು.
ಪ್ರಿಯೆ,ಕಂಡು
ನಿನ್ನ ತುಟಿಗಳ ರಂಗು,
ನಾನಾಗಿ ಹೋದೆ,
ನಿಜವಾಗಿಯೂ ದಂಗು!
– ಶಿವಪ್ರಸಾದ್ ಹಾದಿಮನಿ
ಕನ್ನಡ ಉಪನ್ಯಾಸಕರು.
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ -ಕೊಪ್ಪಳ
