೧. ಸಾಯುತಿದೆ ನುಡಿ.
ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಸಿಕ್ಕು,
ಮಾಡುತ್ತಿದ್ದೇವೆ ನಾವು,
ನಾಡು ನುಡಿಗೆ ನೋವು,
ಅಂತೆಯೇ ಕನ್ನಡ ಭಾಷೆಗಿಲ್ಲಿ,
ನಿತ್ಯವೂ ಸಾವು!
೨. ಅಸಮಾನತೆ.
ಅಂದು ಬಸವಾದಿ ಶರಣರು
ಇವ ನಮ್ಮವ, ಇವ ನಮ್ಮವ,
ಎಂದು ಎಲ್ಲಾ ಜನ, ಸಮುದಾಯವನ್ನು,
ಒಂದೆಡೆ ಸೇರಿಸಿದರು,
ಆದರೆ, ಇಂದು ಆಧುನಿಕರು,
ಇವ ನಮ್ಮವ, ಇವ ಬೇರಯವ
ಎಂದು ವಿಂಗಡಿಸಿ, ವಿಭಜನೆಯ
ದಾರಿ ತೋರಿಸುತಿಹರು,!
ಇನ್ನೆಲ್ಲಿ ಬಂದೀತು ಸಮಾನತೆ?
ಶಾಶ್ವತವಾಗಿ ಉಳಿಯುತ್ತದೆ, ಅಸಮಾನತೆ!
೩. ಅಂದು -ಇಂದು.
ಅಂದಿನ ಕವಿಗಳ
ಕವನಗಳಲ್ಲಿ ಕಾಣುತ್ತಿತ್ತು,
ಮಣ್ಣಿನ ವಾಸನೆ,
ಇಂದಿನ ಕವಿಗಳ ಕವನಗಳಲ್ಲಿ?
ಕಾಣುತ್ತಿದೆ ಬರೀ
ಹೆಣ್ಣಿನ ವಾಸನೆ!
೪.ಹಣ – ಹಗರಣ.
ಇದ್ದರೆ ಕೈ ತುಂಬ ಹಣ
ಮುಚ್ಚಿ ಹಾಕಬಹುದು,
ಸುಲಭವಾಗಿ ಮಾಡಿದ
ಹಗರಣ!
- ಶಿವಪ್ರಸಾದ್ ಹಾದಿಮನಿ, ಕೊಪ್ಪಳ.
