೧.
ಪ್ರಾಣಿಗಳ ಹಿಂಸಿಸಿ
ಪ್ರಾಣಾಯಾಮವ
ಮಾಡಿದರೇನು ಪ್ರಯೋಜನವಯ್ಯ!
ಒಲ್ಲದ ದೇವರುಗಳಿಗೆ
ಕುರಿ,ಕೋಳಿ,ಕೋಣಗಳ
ಬಲಿ ಕೊಟ್ಟರೇನು ಪ್ರಯೋಜನವಯ್ಯ..!
ಇಂಥ ಮನುಜ ಪ್ರಾಣಿಗಳನೇನೆಂಬೆ ಶಿವ ಶಿವಾ!
೨.
ಕಾಯವನು ದಂಡಿಸಿ
ಕಾಯಕವ ಮಾಡಿ
ಕೈಲಾಸವನು ಕಾಣಿರೆಂದರು,
ಬಸವಾದಿ ಪ್ರಮಥರು,
ಕಾಯವನು ದಂಡಿಸದೇ
ಕೈಲಾಸ ಬಯಸುತಿಹರು
ಆಧುನಿಕರು ಎಂದ ಶಿವ ಶಿವಾ!
೩.
ನೋಡಿ ನೋಡಿ ಸಾಕಾಗಿದೆ
ಅಯ್ಯ,ಈ ಸಮಾಜದ ಜನರ
ನಡೆ -ನುಡಿಗಳನು,ಅದಕ್ಕೇ
ಅಲ್ಲವೇನಯ್ಯ, ಅಣ್ಣ ಬಸವಣ್ಣ ಹೇಳಿದ್ದು, ಕಣ್ಣು ಕಾಣದ
ಅಂಧಕನ ಮಾಡೆಂದು,!
ಇದೆಂಥ ಕಾಲ ಶಿವ ಶಿವಾ!
೪.
ಕೇಳಲು ಹೋದರೇನು
ನಿತ್ಯ ಪ್ರವಚನ,
ಪಾಲಿಸದಿದ್ದರೆ ಬಸವಾದಿ
ಪ್ರಮಥರ ವಚನ,
ಏನು ಪ್ರಯೋಜನ?
ಎಂದ ಶಿವ ಶಿವಾ!
- ಶಿವಪ್ರಸಾದ್ ಹಾದಿಮನಿ. ಕೊಪ್ಪಳ.
