ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕು ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಒಂದಾಗಿದ್ದು, ಇದು ಅಕ್ಕಿ ಉತ್ಪಾದನೆಯಿಂದಾಗಿ ಪ್ರಮುಖವಾಗಿದೆ. ಕರ್ನಾಟಕದ ಅಕ್ಕಿಯ ಬಟ್ಟಲು ಆಗಿರುವ ಇಲ್ಲಿ ಹತ್ತಿರದಲ್ಲಿ 150 ಕ್ಕೂ ಹೆಚ್ಚು ಗಿರಣಿಗಳು ಇವೆ. ಈ ಗಿರಣಿಗಳಲ್ಲಿ
ಸುರಕ್ಷತಾ ಸಾಧನಗಳಿಲ್ಲದೆ ಕೆಲಸ ಮಾಡುತ್ತಿರುವ ಗಿರಣಿ ಕಾರ್ಮಿಕರು
ಹೌದು ನಗರದ ರಾಣಾ ಪ್ರತಾಪ್ ವೃತ್ತದ ರಾಯಚೂರು ರಸ್ತೆ ಬಳಿಯ ಎನ್.ಆರ್. ರೈಸ್ ಮಿಲ್ ನಲ್ಲಿ ಆಕಸ್ಮಿಕ ಅವಘಡ ಸಂಭವಿಸಿ ಕಾಮಿರ್ಕನೋರ್ವ ಮೃತಪಟ್ಟ ಘಟನೆ ಗುರುವಾರದಂದು ಸಂಭವಿಸಿದೆ. ಎನ್. ಆರ್. ರೈಸ್ ಮಿಲ್ ನಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಮೆಹಬೂಬ್ ನಗರದ ಗೌಸಿಯ ಕಾಲೋನಿಯ ನಿವಾಸಿ ಅಮ್ಜದ್ (26) ಎನ್ನುವ ಯುವಕ ಮೃತ ದುರ್ದೈವಿ. ನಿನ್ನೆ ಮಧ್ಯಾಹ್ನ ಅಕ್ಕಿ ಸ್ಟಾಕ್ ಮಾಡುವ ವೇಳೆ ರೈಸ್ ಕಂಟೇನರ್ ಒಡೆದು ಯುವಕನ ಮೇಲೆ ಅಕ್ಕಿ ರಾಶಿ ಬಿದ್ದು ಉಸಿರುಗಟ್ಟಿ ಸಾವನಪ್ಪಿದ್ದಾನೆ ಎನ್ನಲಾಗಿದೆ. ಈ ಕುರಿತ ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್.
