ಕೊಪ್ಪಳ : ಪತ್ರಿಕೋದ್ಯಮದಲ್ಲಿ ವಿಫುಲ ಅವಕಾಶಗಳು ಇವೆ ಅವುಗಳನ್ನು ಉಪಯೋಗ ಮಾಡಿಕೊಳ್ಳಬೇಕು ಎಂದು ಹೊಸಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುಂಕಣ್ಣ .ಟಿ ತಿಳಿಸಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು ಪತ್ರಿಕೋದ್ಯಮ ವಿಭಾಗದಿಂದ ಹಮ್ಮಿಕೊಂಡಿದ್ದ ದಿನ ಪತ್ರಿಕೆಗಳ ಪುಟ ವಿನ್ಯಾಸ ಮಾಡುವುದು ಹೇಗೆ ಎಂಬ ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವುದರಿಂದ ಜ್ಞಾನ ಹೆಚ್ಚಳ ಆಗುತ್ತದೆ. ತಂತ್ರಜ್ಞಾನ ಅರಿವು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ತುಂಭಾ ಅಗತ್ಯವಾಗಿದ್ದು, ಪುಟ ವಿನ್ಯಾಸ ಮಾಡಲು ವಿವಿಧ ಸಾಫ್ಟವೇರ್ ತಿಳಿದುಕೊಳ್ಳಬೇಕು. ಒಂದು ಫೋಟೋ ಸಾವಿರ ಪದಗಳಿಗೆ ಸಮ, ಪತ್ರಿಕೆಗಳಲ್ಲಿ ಸುದ್ದಿಗಳ ಜೊತೆಗೆ ಉತ್ತವಾದ ಫೋಟೋ ಹಾಕಬೇಕು, ಸಾಮಾಜಿಕ ಜಾಲತಾಣಗಳಲ್ಲಿರುವ ಒಳ್ಳೆಯ ವಿಷಯಗಳನ್ನು ತೆಗೆದುಕೊಳ್ಳಬೇಕು, ಪತ್ರಿಕೋದ್ಯಮ ವಿಷಯ ಕಲಿಯುವುದರಿಂದ ನಿಮಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಪಡೆಯಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪತ್ರಿಕೋದ್ಯಮದ ಉಪನ್ಯಾಸಕ ಡಾ. ನರಸಿಂಹ ಮಾತನಾಡಿ, ಈ ರೀತಿಯ ವಿಶೇಷ ಉಪನ್ಯಾಸಗಳಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ಬರುತ್ತದೆ, ಎಲ್ಲಾ ವಿದ್ಯಾರ್ಥಿಗಳು ಪ್ರತಿ ದಿನ ಪತ್ರಿಕೆಗಳನ್ನು ಓದಬೇಕು, ಪ್ರಚಲಿತ ಘಟನೆಗಳ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಹುಲಿಗೆಮ್ಮ ಮಾತನಾಡುತ್ತಾ, ಪತ್ರಿಕೋದ್ಯಮ ಉತ್ತಮವಾದ ವಿಷಯ. ಈ ವಿಷಯವನ್ನು ಓದುವುದರಿಂದ ವಿವಿಧ ಪ್ರಕಾರದ ಜ್ಞಾನ ಬರುತ್ತದೆ. ನೀವು ಬಹಳ ಆಸಕ್ತಿಯಿಂದ ಮತ್ತು ಶ್ರದ್ದೆಯಿಂದ ಈ ವಿಷಯವನ್ನು ಅಭ್ಯಾಸ ಮಾಡಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಚಾರ್ಯ ಡಾ. ಗಣಪತಿ ಲಮಾಣಿ, ಐ ಕ್ಯೂ ಎ ಸಿ ಸಂಚಾಲಕರಾದ ಡಾ. ಅಶೋಕ ಕುಮಾರ, ಭೂಗೋಳ ಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀ ಕಾಂತ್ ಸಿಂಗಾಪುರ್ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಭವ್ಯ ಮತ್ತು ಜಯಶ್ರೀ ಪ್ರಾರ್ಥನೆ ಹಾಡಿದರು, ಲಲಿತ ನಿರೂಪಿಸಿದರು, ಭವ್ಯ ವಂದಿಸಿದರು, ಪವಿತ್ರ ಸ್ವಾಗತಿಸಿದರು.
- ಕರುನಾಡ ಕಂದ
