ಕೊಪ್ಪಳ: ತಾಲೂಕಿನ ಭಾಗ್ಯನಗರದ ರಸ್ತೆಗಳು ಹದೆಗೆಟ್ಟು ಹಳ್ಳ ಹಿಡಿದಿವೆ, ಮಳೆಯಿಂದ ರಸ್ತೆಗಳು ತಗ್ಗು ಗುಂಡಿಗಳಿಂದ ಕೆರೆಗಳಂತೆ ನಿರ್ಮಾಣವಾಗಿವೆ ಮತ್ತು ಕೃಷಿ ಹೊಂಡಗಳಾಗಿ ರಾರಾಜಿಸುತ್ತಿವೆ ಇದರಿಂದ ದ್ವಿ ಚಕ್ರ ವಾಹನ ಸವಾರರು, ಪಾದಚಾರಿಗಳಿಗೆ ,ಆಟೋ ಚಾಲಕರಿಗೆ, ಇತರ ವಾಹನ ಸವಾರರಿಗೆ , ರೈತ ವರ್ಗದವರಿಗೆ, ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಈ ರಸ್ತೆಗಳಿಗೆ ಕುರಿತು ಸ್ಪಂದಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣದ ಯಲಬುರ್ಗಾ ತಾಲೂಕು ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಭಾಗ್ಯನಗರದ ತಾಯಮ್ಮ ದೇವಸ್ಥಾನ ಹಾಗೂ ಸಾಯಿಬಾಬ ಮಂದಿರದ ಮುಂದೆ ಇರುವ ರೈಲು ಬ್ರಿಜ್ ಮುಂಭಾಗದಲ್ಲಿ ದೊಡ್ಡದಾದ ಕಂದಕಗಳು ನಿರ್ಮಾಣವಾಗಿವೆ ಈ ಮಾರ್ಗವಾಗಿ ವಿವಿಧ ಕಲ್ಯಾಣ ಮಂಟಪಗಳು, ದೇವಸ್ಥಾನಗಳು ಇರುವುದರಿಂದ ಜನದಟ್ಟಣೆ ಪ್ರಯಾಣ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ, ಹಗಲಿನಲ್ಲಿ ರಸ್ತೆಗಳ ಮೇಲೆ ನೀರು ನಿಂತರೆ ಕಾಣುವುದಿಲ್ಲ ಆದರೆ ರಾತ್ರಿಯಾದರೆ ಮರಣ ಮೃದಂಗ ಸಂಭವಿಸಬಹುದು ಆದಷ್ಟು ಬೇಗ ಕಾರ್ಯ ಪ್ರವೃತ್ತರಾಗಬೇಕು ಎಂದು ರೈತ ಮುಖಂಡ ಶರಣಬಸಪ್ಪ ದಾನಕೈ ಒತ್ತಾಯಿಸಿದ್ದಾರೆ.
- ಕರುನಾಡ ಕಂದ
