
ಕೊಪ್ಪಳದ ಸಮಾಜ ಸ್ನೇಹಿ, ಅಭ್ಯಾಸದಲ್ಲಿ ಹಿಂದುಳಿದ ಮಕ್ಕಳ ಕಲಿಕೆಗೆ ಶಕ್ತಿ ತುಂಬುವ ಹಾಗೂ ಉನ್ನತ ಅಧ್ಯಯನಕ್ಕೆ ಭದ್ರ ಬುನಾದಿ ಹಾಕುವ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ಅಮರ್ ಸ್ಟಡಿ ಸರ್ಕಲ್ ಕೊಪ್ಪಳ ನಗರದ 3ನೇ ಕ್ರಾಸ್ ಬಿ.ಟಿ ಪಾಟೀಲ್ ನಗರದಲ್ಲಿರುವ ಈ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ 2025-26ನೇ ಸಾಲಿನ 4ನೇ ಬ್ಯಾಚಿನ ವಿಶೇಷ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಇಂದು ಜರಗಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸರಕಾರಿ ಪದವಿ ಕಾಲೇಜಿನ ಕನ್ನಡ ಭಾಷೆ ಉಪನ್ಯಾಸಕರಾದ ಡಾ. ಮಹಾಂತೇಶ್ ನೆಲಾಗಣಿ ಅವರು ಭಾಗವಹಿಸಿ ಮುಂದಿನ ಶೈಕ್ಷಣಿಕ ಜೀವನಕ್ಕೆ 10ನೇ ತರಗತಿ ಎಷ್ಟು ಮುಖ್ಯ ಹಾಗೂ ಇದು ಭವಿಷ್ಯದ ಜೀವನಕ್ಕೆ ಅಡಿಪಾಯ ಅನ್ನೋದು ನಿಮಗೂ ತಿಳಿದ ವಿಷಯವಾಗಿದೆ ಅದನ್ನು ಅರಿತ ನಿಮ್ಮ ತಂದೆ ತಾಯಿ ಮುಂದಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಈಗಿನಿಂದಲೇ ತಯಾರಿ ನಡೆಸಿದ್ದಾರೆ ಅನ್ನುವುದಕ್ಕೆ ಇಷ್ಟು ಪ್ರಮಾಣದಲ್ಲಿ ನೀವು ಸೇರಿ ಇರೋದೆ ಕಾರಣ ಹಾಗೂ ಈ ಸಂಸ್ಥೆ ಹಿಂದಿನ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಅತೀ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದು ಕೈಗನ್ನಡಿಯಂತೆ ನಿಮ್ಮ ಮುಂದೆ ಇದೆ ನಗರದಲ್ಲಿ ಇಷ್ಟು ಕಡಿಮೆ ಶುಲ್ಕದಲ್ಲಿ ಗ್ರಾಮೀಣ ಮಕ್ಕಳಿಗೆ ಕೈಗೆಟಕುವ ಶುಲ್ಕದ ಜೊತೆಗೆ ಉತ್ತಮ ಅನುಭವಿ ಶಿಕ್ಷಕರ ಬಳಗದಿಂದ ಬೋಧನೆ ಮಾಡಿಸಿ ಹಾಗೂ ಅದೇ ಶುಲ್ಕದಲ್ಲಿ ಫ್ರೀ ಆಗಿ ಸ್ಟಡಿ ಮೆಟೀರಿಯಲ್ ಕೊಡುವ ಏಕೈಕ ಸಂಸ್ಥೆ ಅಂದ್ರೆ ಅದು ಈ ಅಮರ್ ಸ್ಟಡಿ ಸರ್ಕಲ್ ಸಂಸ್ಥೆ ಎಂದು ಪ್ರಶಂಸಿದರು. ಈ ಸಂಸ್ಥೆ ಇನ್ನು ಹೆಚ್ಚು ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿ ಇಲ್ಲಿ ಕಲಿತ ನೀವುಗಳು ಆತ್ಮವಿಶ್ವಾಸ ಹಾಗೂ ಶ್ರದ್ದೆಯಿಂದ ಓದಿ ತಂದೆ ತಾಯಿಗಳಿಗೆ ಸಂಸ್ಥೆಗೆ ಕೀರ್ತಿ ತರುವಂತಾಗಲಿ ಎಂದು ಹರಸಿದರು ತದ ನಂತರ ಈ ಸಂಸ್ಥೆಯ ನಿರ್ದೇಶಕರಾದ ಅಮರೇಶ್ ಶಶಿಮಠ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಅಮರ್ ಸಂಸ್ಥೆಯಲ್ಲಿ ಕಳೆದ ಸಾಲಿನಲ್ಲಿ ವಿಜಯ್ ಲಕ್ಷ್ಮಿ ಎಂಬ ವಿದ್ಯಾರ್ಥಿನಿ 625ಕ್ಕೆ 619 ಅಂಕಗಳನ್ನು ಪಡೆದು ನಮ್ಮ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾಳೆ ಹಾಗೂ 25ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ ಅಂತ ವಿದ್ಯಾರ್ಥಿಗಳಿಗೆ ಅತಿಥಿಗಳಿಂದ ಸನ್ಮಾನ ಕಾರ್ಯಕ್ರಮ ನಡೆಸಿ ಮುಂದಿನ ವರ್ಷ ಇನ್ನೂ ಹೆಚ್ಚು ವಿದ್ಯಾರ್ಥಿಗಳು ಪಾಸಾಗಲು ನಮ್ಮದೇ ಅದ ಒಂದು ಯೋಜನೆ ಹಾಕಿ ಕೊಂಡು ಈ ವರ್ಷ ತರಬೇತಿ ನೀಡಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಪೂರಕವಾದ ಮುದ್ರಿತ ಟಿಪ್ಪಣಿಗಳನ್ನು ನಾವೇ ತಯಾರಿಸಿ ಮಕ್ಕಳಿಗೆ ಫ್ರೀ ಆಗಿ ನೀಡುತ್ತಿದ್ದೇವೆ ಎಂದು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಮಾತನಾಡಿದರು.

ತದ ನಂತರ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ಲತಾ ಕೆ. (611 ಅಂಕಗಳು), ಪುಷ್ಪಾವತಿ (605) ಹಾಗೂ ವಿಕಾಸ್ ಜೆ (597) ಈ ವಿದ್ಯಾರ್ಥಿಗಳಿಗೆ ಅತಿಥಿಗಳಿಂದ ಸನ್ಮಾನಿಸಿ ಈ ವರ್ಷದ ತರಬೇತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಆದರ್ಶ ವಿದ್ಯಾರ್ಥಿ ಆಗಿ ವಿಜಯ ಕುಮಾರ ಹಾಗೂ ಆದರ್ಶ ವಿದ್ಯಾರ್ಥಿನಿ ಆಗಿ ಮೇಘಾ ಅವರಿಗೆ ಗೌರವಿಸಲಾಯಿತು.
ಕಾರ್ಯಕ್ರಮದ ಮದ್ಯದಲ್ಲಿ ಸಫಿಯಾ ಬೇಗಮ್, ಪ್ರಜ್ವಲ್, ರೂಪಶ್ರೀ ಎಂಬ ವಿದ್ಯಾರ್ಥಿಗಳು ಈ ತರಬೇತಿ ಸಂಸ್ಥೆಯ ಗುರುಗಳು ಅತ್ಯುತ್ತಮ ಬೋಧನೆ ಹಾಗೂ ಪ್ರೇರಣೆ ನೀಡಿದ್ದಾರೆ ಅ ಅವರ ಶ್ರಮಕ್ಕೆ ತಕ್ಕಂತೆ ನಾವು ಒಳ್ಳೆಯ ಫಲಿತಾಂಶ ತರುತ್ತೇವೆ ಅಂತ ಉತ್ತಮ ತರಬೇತಿ ನೀಡಿದ್ದಾರೆ ಎಂದು ಭಾವುಕರಾಗಿ ಮಾತನಾಡಿದರು.
ಕೊನೆಗೆ ಕಾರ್ಯಕ್ರಮದ ಗೌರವ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸಂಗಮೇಶ ಅವರು ಮಕ್ಕಳನ್ನು ಉದ್ದೇಶಿಸಿ ಕೊಪ್ಪಳದಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಾತ್ಮಕ ಬೋಧನೆ ನೀಡುವ ಸಂಸ್ಥೆ ಇದು ತಂದೆ ತಾಯಿಗಳ ಆಶಯದಂತೆ ವಿದ್ಯಾಭ್ಯಾಸ ಮಾಡಿಸಿ ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿ ಮಾಡಿಯಾಗಿದೆ ಉತ್ತಮ ಶ್ರೇಣಿಯಲ್ಲಿ ಪಾಸಾಗಲು ಸಾಕಷ್ಟು ಪ್ರಯತ್ನ ಇರಲಿ ಇದರ ಸದುಪಯೋಗ ಪಡೆದು ಈ ಸಂಸ್ಥೆಯ ಶಿಕ್ಷಕರ ಮಾರ್ಗದರ್ಶನ ಮತ್ತು ನಿಮ್ಮ ಪರಿಶ್ರಮ ಎರಡು ಒಟ್ಟುಗೂಡಿ ನಿಮ್ಮ ಪಯಣ ಯಶಸ್ವಿ ಆಗಲಿ ಎಂದು ಹಾರೈಸಿದರು ನಂತರ ಮಕ್ಕಳಿಗೆ ಮುದ್ರಿತ ಟಿಪ್ಪಣಿಗಳ ಅನಾವರಣ ಮಾಡಿ ಮಕ್ಕಳಿಗೆ ವಿತರಿಸಿ ಕಾರ್ಯಕ್ರಮದ ಕೊನೆಯ ಘಟ್ಟ ವಂದನಾರ್ಪಣೆಯನ್ನು ವಿದ್ಯಾರ್ಥಿನಿ ರಕ್ಷಾ ನೆರವೇರಿಸಿ ಕಾರ್ಯಕ್ರಮದ ನಿರೂಪಣೆಯನ್ನು ರೇಣುಕಾ, ರೂಪಶ್ರೀ, ಹಾಗೂ ರೋಹಿಣಿ ನೆರೆವೇರಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕರಾದ ದಾದಪೀರ್ , ವಿಜಯ ಕುಮಾರ್ ಉಪಸ್ಥಿತರಿದ್ದರು. ಮಕ್ಕಳ ಪಾಲಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
- ಕರುನಾಡ ಕಂದ
