ಪಾವಂಜೆ,ಹಳೆಯಂಗಡಿ,ಮಂಗಳೂರು,ಜನವರಿ ೨೩ : ನಿನ್ನೆ ಬ್ರಹ್ಮಕಲಶದ ಪೂರ್ವ ನಿಗಧಿತ ಕಾರ್ಯಕ್ರಮಗಳ ಐದನೆಯ ದಿನ ಪ್ರಾತಃ ಕಾಲ ೭:೩೦ ಗಂಟೆಯಿಂದ ಆದ್ಯ ಗಾನಯಾಗ, ಬಿಂಬ ಶುದ್ದಿಯಾಗ,ಬಿಂಬ ಶುದ್ದಿ ಪ್ರಕ್ರಿಯೆಗಳು,ಮಹಾಗಣಪತಿ ಗಾಯತ್ರಿ ಯಾಗ,ನವಕ ಪ್ರಧಾನ ಯಾಗ, ಕಲಶಾಭಿಷೇಕ, ಪ್ರಸನ್ನ ಪೂಜೆ, ಧ್ವಜ ಪೂಜೆ, ಮಧ್ಯಾಹ್ನ ಬಲಿ ಮತ್ತು ಗೋ ಪೂಜೆ ಜರುಗಿದವು. ಬಳಿಕ ಅಪರಾಹ್ನ ಎರಡೂವರೆ ಗಂಟೆಗೆ ಸರಿಯಾಗಿ ಕಲಾರತ್ನ ಶಂಕರ ನಾರಾಯಣ ಅಡಿಗರು ” ಭೂ ಕೈಲಾಸ ” ಎಂಬ ಹರಿಕಥಾ ಸತ್ಸಂಗ ವನ್ನು ಸಂಜೆ ನಾಲ್ಕು ವರೆ ಗಂಟೆಯ ವರೆಗೆ ನೆರವೇರಿಸಿ ಕೊಟ್ಟರು. ಭೂ ಕೈಲಾಸವು ಮಾತೃ ಪ್ರೇಮವನ್ನು ಆದರಿಸಿದ ಪೌರಾಣಿಕ ಸನ್ನಿವೇಶದಲ್ಲಿ ರಾವಣೇಶ್ವರನು ತನ್ನ ತಾಯಿಯ ಅಪೇಕ್ಷೆಯನ್ನು ಈಡೇರಿಸಲು ಕೈಲಾಸದಿಂದ ಶಿವಲಿಂಗವನ್ನು ಲಂಕೆಗೆ ತರುವ ಹಾದಿಯಲ್ಲಿ ಗೋ ಕರ್ಣದಲ್ಲಿ ನೆಲೆಯೂರಿದ ಘಟನೆಯನ್ನು ಆಧರಿಸಿದ್ದಾಗಿತ್ತು.
ಇನ್ನು ಪಾವಂಜೆಯಲ್ಲಿ ಸಂಜೆ ಗಂಟೆ ನಾಲ್ಕು ವರೆಯಿಂದ ಶ್ರೀ ಪ್ರಸಾದ್ ಆಚಾರ್ಯ ಮತ್ತು ಬಳಗ, ಬಜಪೆ ಯವರಿಂದ ನಿತ್ಯದ ಭಜನಾ ಸಂಕೀರ್ತನೆ,ಧಾರ್ಮಿಕ ಕಾರ್ಯಗಳಲ್ಲಿ ಒಂದು ಲಕ್ಷ ರುದ್ರ ಗಾಯತ್ರಿ ಜಪ ಪೂರ್ವಕ ರುದ್ರ ಗಾಯತ್ರಿ ಯಾಗ, ಬೆಳಗಿನ ಬಲಿ, ರಾತ್ರಿ ಪೂಜೆ, ರಾತ್ರಿ ಬಲಿ ಮರು ಆಯನ ಬಲಿ ಮತ್ತು ರಾತ್ರಿ ಗಂಟೆ ಒಂಬತ್ತರಿಂದ ಲವ ಕುಶ ಅಗ್ರ ಪೂಜೆ ಎಂಬ ಯಕ್ಷಗಾನವನ್ನು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಕೆತ್ತೆತ್ತೂರು ಇದರ ವಿದ್ಯಾರ್ಥಿಗಳು ಆಡಿಸಿ ತೋರಿಸಿದರು. ಇದರ ಪ್ರಾಯೋಜಕತ್ವವನ್ನು ಪಡುಪಣಂಬೂರು ವ್ಯವಸಾಯಿಕ ಸೇವಾ ಸಹಕಾರಿ ಸಂಘ ನಿಯಮಿತ, ಹಳೆಯಂಗಡಿ ವಹಿಸಿಕೊಂಡಿತ್ತು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ