ನಂಬಬ್ಯಾಡ ಯಾವತ್ತೂ ಅಷ್ಟು ಸರಳ ಯಾರನ್ನೂ
ಇಷ್ಟದಲಿ ಜೊತೆಗಿರುವರು ಕಷ್ಟದಲಿ ಕೈಕೊಡುವರು
ಸ್ಪಷ್ಟತೆಯಲಿ ನಡಿಯುವಂತೆ
ಮುಷ್ಟಿಯಲಿ ಎಲ್ಲಾ ಮುಚ್ಚಿಡುವವರು….!!
ನಂಬಬ್ಯಾಡ ಯಾವತ್ತೂ ಅಷ್ಟು ಸರಳ ಯಾರನ್ನೂ
ಬಂಧುಗಳಾಗಿ ಬರುವರು ಬೆನ್ನಹಿಂದೆ ಮಾತನಾಡುವರು
ಸ್ನೇಹ ಸಂಬಂಧವ ಬೆಸೆದು ಕತ್ತಿ ಕುಡುಗೋಲು ಮಸೆಯುವರು
ಕಣ್ಣೆದುರಿಗೆ ಬಂದಾಗ ಮಾತ್ರ ಮುತ್ತಿನಂತ ಮಾತನಾಡುವರು…!!
ನಂಬಬ್ಯಾಡ ಯಾವತ್ತೂ ಅಷ್ಟು ಸರಳ ಯಾರನ್ನೂ
ಕೊರಳಿಗೆ ಹಾರ ಹಾಕಿ ಬೆರಳ ಹಿಡಿದು ಬರುವರು
ಮರುಳ ಮಾಡಿ ನೆರಳ ಹಿಂದೆ ಬಂದು ನರಳುವಂತೆ ಮಾಡುವರು
ಸರಳವಾಗಿ ತಿರುಳ ತಿಳಿದು ಮುರುಳಿ ಲೋಲನಂತೆ ನಟಿಸುವರು…!!
ನಂಬಬ್ಯಾಡೋ ಯಾವತ್ತೂ ಅಷ್ಟು ಸರಳ ಯಾರನ್ನೂ
ಮುಂದೆ ಒಂದು ಹಿಂದೆ ಇನ್ನೊಂದು ತರ ಇರುವವರು
ನೆರೆದ ಮಂದಿಯೊಳಗ ಮಾತ್ರ ಕರೆದು ಕೂಡಿಸುವವರು
ಬರಿದಾದ ಬದುಕಿಗೆ ಬಣ್ಣ ಹಚ್ಚಿ ಬದುಕಿ ಸಾಗುವವರು….!!
ನಂಬಬ್ಯಾಡೋ ಯಾವತ್ತೂ ಅಷ್ಟು ಸರಳ ಯಾರನ್ನೂ
ತಲೆ ಸವರಿ ಬೆನ್ನು ತಟ್ಟಿ ಗಟ್ಟಿಯಾಗಿ ಬಿಗಿದಪ್ಪುವವರ
ಹಣ ಐಶ್ವರ್ಯವಿದ್ದಾಗ ಮಾತ್ರ ಹಿಂಬಾಲಿಸುವವರ
ಬರಿದಾದ ಬದುಕಿಗೆ ಆಸರೆಯಾಗಿ ಸಹಕರಿಸದವರ….!!
- ಹನುಮಂತ ದಾಸರ ಹೊಗರನಾಳ
ಮೊ : 9945246234




















