ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

​ಕವಿ ಸಮಯ ವೇದಿಕೆಯಿಂದ ನಾಳೆ ‘ ಯು.ಆರ್. ಅನಂತಮೂರ್ತಿ ಬದುಕು-ಬರಹ’ ಕುರಿತು ಸರಣಿ ಉಪನ್ಯಾಸ

​ಹುನಗುಂದ: ‘ಕವಿ ಸಮಯ ವೇದಿಕೆ’ಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ‘ಕನ್ನಡ ನಾಡಿನ ಹೆಮ್ಮೆಯ ಸಾಹಿತಿಗಳ ಬದುಕು-ಬರಹ’ ಸರಣಿ ಉಪನ್ಯಾಸ ಮಾಲಿಕೆ-೬ ಕಾರ್ಯಕ್ರಮವು ಅಕ್ಟೋಬರ್ 25ರ ಭಾನುವಾರ ಸಂಜೆ 7:00 ಗಂಟೆಗೆ ವರ್ಚುವಲ್ (ಝೂಮ್/ಗೂಗಲ್ ಮೀಟ್) ಮಾಧ್ಯಮದ ಮೂಲಕ ಜರುಗಲಿದೆ.
​ಸದರಿ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಸಹಾಯಕ ಪ್ರಾಧ್ಯಾಪಕರಾದ ಡಾ. ಬಸವರಾಜ ಕುಂಬಾರ ಅವರು ‘ಯು.ಆರ್. ಅನಂತಮೂರ್ತಿಯವರ ಬದುಕು ಮತ್ತು ಬರಹ’ ಎಂಬ ವಿಷಯದ ಕುರಿತು ಪ್ರಧಾನ ಉಪನ್ಯಾಸ ನೀಡಲಿದ್ದಾರೆ.
​ಕಾರ್ಯಕ್ರಮದ ಆರಂಭದಲ್ಲಿ ಹುನಗುಂದದ ಬಿ.ಆರ್.ಪಿ ಶ್ರೀಮತಿ ವಿಜಯಲಕ್ಷ್ಮೀ ನಾಗಲೋಟಿ ಅವರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಗಲಿದ್ದು, ಕಮತಗಿಯ ಸಾಹಿತಿ ಶ್ರೀ ಶ್ರೇಯಾಂಶ ಕೋಲಾರ ಅವರು ಎಲ್ಲರನ್ನೂ ಸ್ವಾಗತಿಸಲಿದ್ದಾರೆ. ಉಪನ್ಯಾಸದ ನಂತರ ವಿಷಯದ ಕುರಿತು ಇಬ್ಬರು ಸಾಹಿತ್ಯಾಸಕ್ತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
​ಸೂಳೇಭಾವಿಯ ಸಾಹಿತಿ ಶ್ರೀ ಅಶೋಕ ಬಳ್ಳಾ ಕಾರ್ಯಕ್ರಮ ನಿರೂಪಿಸಲಿದ್ದು, ಇಳಕಲ್ಲಿನ ಸಾಹಿತಿ ಶ್ರೀ ಬಸವರಾಜ ಬಲಕುಂದಿ ವಂದನಾರ್ಪಣೆ ನೆರವೇರಿಸಲಿದ್ದಾರೆ.
​ಸರ್ವ ಕನ್ನಡ ಕವಿ ಮನಸ್ಸುಗಳು ಹಾಗೂ ಸಾಹಿತ್ಯ ಪ್ರೇಮಿಗಳು ಸಂಜೆ 6:55ಕ್ಕೆ ಸಭೆಗೆ ಜಾಯಿನ್ ಆಗುವ ಮೂಲಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಂಘಟಕರು ಕೋರಿದ್ದಾರೆ.
​ಕಾರ್ಯಕ್ರಮದ ಲಿಂಕ್ : https://meet.google.com/xnk-eest-vmu

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!