ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪುಸ್ತಕ ಪತ್ತಾಯ ಸ್ಥಾಪನೆ ಹಾಗೂ ದುಡಿ ವಿತರಣೆ ಸಮಾರಂಭ

ಶ್ರೀಮಂಗಲ :ಯಾವುದೇ ಒಂದು ಜನಾಂಗದ ಭಾಷೆ ಹಾಗೂ ಸಾಹಿತ್ಯ ನಾಶವಾದರೆ ಆ ಜನಾಂಗದ ಸಂಸ್ಕೃತಿ ನಾಶವಾಗುತ್ತದೆ. ಸಂಸ್ಕೃತಿ ನಾಶವಾದರೆ ಆ ಜನಾಂಗವೇ ನಾಶವಾಗಿಹೋಗುತ್ತದೆ. ಆದ್ದರಿಂದ ಕೊಡವ ಭಾಷೆ ಹಾಗೂ ಸಾಹಿತ್ಯವನ್ನು ಉಳಿಸುವುದರೊಂದಿಗೆ ಕೊಡವ ಸಂಸ್ಕೃತಿ ಹಾಗೂ ಜನಾಂಗವನ್ನು ಉಳಿಸುವ ಸಲುವಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಪ್ರತೀ ಕೊಡವ ಸಮಾಜ, ಸಂಘ ಸಂಸ್ಥೆ, ಇನ್ ಮನೆಗಳಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದು 21ನೆ ಪುಸ್ತಕ ಪತ್ತಾಯವನ್ನು ಟಿ.ಶೆಟ್ಟಿಗೇರಿಯಲ್ಲಿರುವ ತಾವಳಕೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ಸ್ಥಾಪಿಸಲಾಗಿದೆ. ಹಾಗೂ ಕೊಡವ ಜಾನಪದ ಕಲೆಯನ್ನು ಪೋಷಿಸುವ ಉದ್ದೇಶದಿಂದ ನಾಲ್ಕು ದುಡಿಗಳನ್ನೂ ನೀಡಲಾಗಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯ ಕೊಂಡಿಂಜಮ್ಮನ ಎಂ. ಬಾಲಕೃಷ್ಣ ಮಾಹಿತಿ ನೀಡಿದರು.

ದೇಶ ಸುತ್ತಬೇಕು ಕೋಶ ಓದಬೇಕೆಂಬ ಅರ್ಥಪೂರ್ಣ
ನಾಣ್ಣುಡಿಯಲ್ಲಿ ಪುಸ್ತಕ ಓದುವುದರಿಂದ ಜ್ಞಾನವನ್ನು
ವೃದ್ಧಿಸಬಹುದೆಂಬುದನ್ನು ತಿಳಿಸಲಾಗಿದೆ. ಆದರೆ ಜ್ಞಾನ
ವೃದ್ಧಿಸಲು ಬೇಕಾದ ಪುಸ್ತಕಗಳನ್ನು ಎಲ್ಲರಿಗೂ
ಒದಗಿಸಿಕೊಡದಿದ್ದರೆ ಜ್ಞಾನ ವೃದ್ಧಿಸಿಕೊಳ್ಳುವ
ಅವಕಾಶಗಳು ಕೈ ತಪ್ಪಿಹೋಗುತ್ತದೆ.
ಆದ್ದರಿಂದ ಎಲ್ಲರಿಗೂ ಸಮೀಪದಲ್ಲೇ ಪುಸ್ತಕ ಸಿಗುವಂತೆ ಮಾಡುವುದೇ ಈ ಪುಸ್ತಕ ಪತ್ತಾಯದ ಉದ್ದೇಶವಾಗಿದ್ದು ತಾವಳಗೇರಿ
ಮೂಂಡ್ ನಾಡ್ ಸಮಾಜದಲ್ಲಿ ಸ್ಥಾಪಿಸಲಾದ ಪುಸ್ತಕ ಪತ್ತಾಯವನ್ನು ಎಲ್ಲರೂ ಉಪಯೋಗಿಸಿಕೊಳ್ಳಲು ಕರೆ ನೀಡುವುದರೊಂದಿಗೆ ಕೊಡವ ಅಕಾಡೆಮಿಯ ಇತರ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾವಳಗೆರೆ
ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ
ಹರೀಶ್ ಅಪ್ಪಯ್ಯ ಸಮಾಜದಲ್ಲಿ ಪುಸ್ತಕ ಪತ್ತಾಯ
ಸ್ಥಾಪಿಸಿರುವುದಕ್ಕೆ ಹಾಗೂ ದುಡಿ ನೀಡಿದುದಕ್ಕೆ ಕೊಡವ
ಅಕಾಡೆಮಿಗೆ ಧನ್ಯವಾದ ಸಮರ್ಪಿಸಿ ಅಕಾಡೆಮಿಯ
ಪುಸ್ತಕದೊಂದಿಗೆ ಕೊಡವ ತಕ್ಕ್ ಎಳ್ತ್ ಕಾರಡ ಕೂಟವು
ಈಗಾಗಲೇ ನಮ್ಮ ಸಮಾಜಕ್ಕೆ ಹತ್ತು ಸಾವಿರ ರೂ. ಮೌಲ್ಯದ ಪುಸ್ತಕಗಳನ್ನು ನೀಡಿದ್ದು, ಈ ಎರಡೂ ಸಂಸ್ಥೆಯ
ಪುಸ್ತಕಗಳನ್ನು ಸದಸ್ಯರು ಪಡೆದು ಓದಿ ತಮ್ಮ ಜ್ಞಾನ
ವೃದ್ಧಿಸಿಕೊಳ್ಳಬಹುದೆಂದು ಸಲಹೆ ನೀಡಿದರು.

ಈ ಸಂದರ್ಭ ಕೊಡವ ಸಮಾಜದಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸಲು ಹಾಗೂ ನಾಲ್ಕು
ದುಡಿಗಳನ್ನು ನೀಡಲು
ಶ್ರಮಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಹಾಜರಾಗಿ
ವೇದಿಕೆಯಲ್ಲಿ ಉಪಸ್ಥಿತರಿದ್ದ ಕೊಡವ ಸಾಹಿತ್ಯ
ಅಕಾಡೆಮಿಯ ಸದಸ್ಯರಾದ ಚೊಟ್ಟೆಯಂದ ಸಂಜು
ಕಾವೇರಪ್ಪ, ಕೊಂಡಿಂಜಮ್ಮನ ಬಾಲಕೃಷ್ಣ, ಮೊಳ್ಳಕುಟ್ಟಡ
ದಿನು ಬೋಜಣ್ಣ ಹಾಗೂ ನಾಯಮಂಡ
ಶಿವಾಜಿಯವರನ್ನು ಕೊಡವ ಸಮಾಜ ವತಿಯಿಂದ
ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಡವ ಸಮಾಜ ಆಡಳಿತ ಮಂಡಳಿ ಹಾಗೂ ಸದಸ್ಯರು ಭಾಗವಹಿಸಿದ್ದರು.

ವರದಿ : ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!