ಮೂರು ದಿನದ ಸಂತೆಯಲ್ಲಿ
ತೊಡಗಿದರ ಹ್ಯಾಂಗ ಚಿಂತೆಯಲ್ಲಿ
ಬಂದಿದ್ದು ಅರಿವಿಲ್ಲದೆ ತಲೆಯಲ್ಲಿ
ಸುಖಿಸದೆ ಅಳಿವೆವು ಅಜ್ಞಾನದಲ್ಲಿ
ಅಮೃತವನ್ನೇ ಮಾರಿ ಹಣಕ್ಕಿಲ್ಲಿ
ವಿಷವ ಹಾಕಿ ಬಾಯಿಯಲ್ಲಿ
ಅದೇ ಸುಖವೆಂದು ಮತ್ತಿನಲ್ಲಿ
ಅರಿಯದೆ ಅಳಿವೆವು ಅಜ್ಞಾನದಲ್ಲಿ
ಹಣವಿಲ್ಲದೆ ಬದುಕುತಾವ ಜೀವಿಗಳಿಲ್ಲಿ
ಅವುಗಳ ಆನಂದ ನಮಗೆಲ್ಲಿ
ಅನ್ನ ನೀರಿದ್ದರ ಪ್ರಕೃತಿಯಲ್ಲಿ
ಜಗವನ್ನೇ ಜಯಿಸುವವು ಖುಷಿಯಲ್ಲಿ
ಅನ್ನವನ್ನೇ ಕಡಿದು ಕೊಡಲಿಯಲ್ಲಿ
ಹೊಳೆಗಳನ್ನೇ ಅಳೆದು ಆಸೆಗಿಲ್ಲಿ
ದುಡ್ಡೇ ಸಂಪತ್ತೆಂದು ಬದುಕಿಗಿಲ್ಲಿ
ಸುಖವನ್ನೇ ಕಳೆದುಕೊಳ್ಳುವೆವು ಅಜ್ಞಾನದಲ್ಲಿ
ಪ್ರಕೃತಿ ಅನುಭವಿಸುವುದೇ ಸುಖವಿಲ್ಲಿ
ನಗುನಗುತ ಬಾಳುವುದೇ ಬದುಕಿಲ್ಲಿ
ಆಸೆಗಳ ಆಡಂಬರದ ಗಳಿಕೆಯಲ್ಲಿ
ತೃಪ್ತಿ ಅಸಾಧ್ಯ ಅರಿಬೇಕಿಲ್ಲಿ
- ಕಲ್ಲಪ್ಪ ಕವಳಕೇರಿ ಮಂಗಳೂರು✍️
(ಕೊಪ್ಪಳ ಜಿಲ್ಲೆ )




















