ಕಂಪ್ಲಿ: ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಜನ್ಮದಿನದ ಅಂಗವಾಗಿ ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ನೇತೃತ್ವದಲ್ಲಿ ಮುಖಂಡರು, ಪದಾಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಗೂ ಬಾಣಂತಿಯರಿಗೆ ಹಾಲು, ಹಣ್ಣು, ಬ್ರೆಡ್ ಭಾನುವಾರ ವಿತರಿಸಿದರು.
ನಂತರ ಹೊಸಕೋಟೆ ಜಗದೀಶ ಮಾತನಾಡಿ, ಜನಪ್ರಿಯ ಹಾಗೂ ಅಭಿವೃದ್ಧಿ ಹರಿಕಾರ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ನಿರಂತರವಾಗಿ ಜನಪರ ಅಭಿವೃದ್ಧಿ ಕಾರ್ಯಗಳೊಂದಿಗೆ ಸಾಕಷ್ಡು ಜನಪರ ಸೇವೆ ಸಲ್ಲಿಸುತ್ತಿದ್ದಾರೆ. ಬಡವರು, ಮಧ್ಯಮ ವರ್ಗದವರು ಸೇರಿದಂತೆ ಪ್ರತಿಯೊಬ್ಬರ ಕಷ್ಟ ಸುಖದಲ್ಲಿ ಭಾಗಿಯಾಗಿ, ಆಶಾಕಿರಣರಾಗಿದ್ದಾರೆ. ಜನರ ನಾಡಿಮಿಡಿತ ಆಲಿಸಿ, ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಬಳ್ಳಾರಿ ನಗರದಲ್ಲಿ ಜನರ ಪಾಲಿಗೆ ಆಪತ್ಭಾಂಧವರಾಗಿ ಹೊರ ಹೊಮ್ಮಿದ್ದಾರೆ. ಇವರ ಜನ್ಮದಿನದ ನಿಮಿತ್ಯ ಕಂಪ್ಲಿ ನಗರದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಹಂಪಲು ವಿತರಿಸಿದ್ದು, ಆ ದೇವರು ಭರತ್ ರೆಡ್ಡಿ ಅವರಿಗೆ ಆಯಸ್ಸು, ಆರೋಗ್ಯ, ಸಮೃದ್ಧಿ ದಯಪಾಲಿಸಲಿ ಎಂದರು.
ಈ ಸಂದರ್ಭದಲ್ಲಿ ಆಯುಷ್ ವೈದ್ಯ ಡಾ.ಮಲ್ಲೇಶಪ್ಪ, ವೀರಶೈವ ಲಿಂಗಾಯತ ಮಹಾ ವೇದಿಕೆಯ ಕಂಪ್ಲಿ ತಾಲೂಕು ಅಧ್ಯಕ್ಷ ಬಳೇ ಮಲ್ಲಿಕಾರ್ಜುನ, ಮುಖಂಡರಾದ ಅರವಿ ಬಸವನಗೌಡ, ಬಿ.ನಾರಾಯಣಪ್ಪ, ಕೇಶವರೆಡ್ಡಿ, ಕರಿಬಸವನಗೌಡ, ಬಟಾರಿ ಪ್ರಮೋದ್, ವಿ.ಬಿ.ನಾಗರಾಜ, ಬಳ್ಳಾಪುರ ಲಿಂಗಪ್ಪ, ಹಂಪಾರೆಡ್ಡಿ, ಹೆಚ್.ಗಂಗಾಧರ, ಮೆಟ್ರಿ ರಾಜ, ನಾಯಕರ ತಿಮ್ಮಯ್ಯ, ಗೌಡ್ರು ನಾಗರಾಜ, ಹೆಚ್.ಗಾಳೆಪ್ಪ, ಬಳ್ಳಾಪುರ ಮೌನೇಶ್, ಯಲ್ಲಪ್ಪ ಸೇರಿದಂತೆ ಯುವಕರು ಪಾಲ್ಗೊಂಡಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















