
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗಂಜಿಗೇರಾ 5ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಜರುಗಿತು.
ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಗಂಜಗೇರಾ ಸರಕಾರಿ ಕಿರಿಯ ಪ್ರಾಥಮಿಕ ಶಾಲಾಯಲ್ಲಿ 5 ನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಇರುವ ಗಣ್ಯ ಮಾನ್ಯರ ವತಿಯಿಂದ ಸರಸ್ವತಿ ಫೋಟೋ ಪೂಜೆ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರ ವತಿಯಿಂದ 5ನೇ ತರಗತಿ ಮಕ್ಕಳಿಗೆ ಬರವಣಿಗೆ ಪ್ಯಾಡ್ ವಿತರಣೆ ಮಾಡಿದರು ಹಾಗೂ ವಿಜಯಕುಮಾರ್ ಅಂಬಲಗಿ ಅವರ ವತಿಯಿಂದ ಶಾಲೆಯ ಎಲ್ಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿದರು.
ಈ ಕಾರ್ಯಕ್ರಮ ಕುರಿತು ಪಲ್ಲವಿ ಎಮ್ ಹಾಗೂ ಅತಿಥಿ ಶಿಕ್ಷಕರು ಜೈಭೀಮ್ ಹೊಳ್ಕರ್ ಮಾತನಾಡಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಈ ಸಂಧರ್ಭದಲ್ಲಿ ಶಾಲೆಯ sdmc ಅಧ್ಯಕ್ಷರು ಸಂಗೀತ ಮಾನ ಕಾರ್, ಉಪ ಅಧ್ಯಕ್ಷರು ಆನಂದ್ ಗಂಜಗಿರಾ ಹಾಗೂ sdmc ಸದಸ್ಯರು ಊರಿನ ಗಣ್ಯ ಮಾನ್ಯರು ಅತಿಥಿ ಶಿಕ್ಷಕರಾದ ಅನಿಲ್ ಗಂಜಗಿರಾ ಜಗನಾಥ್ ತಾಡಪಳ್ಳಿ ಮಹಾದೇವಪ್ಪಾ, ಶಾಲೆಯ ಅಡುಗೆ ಸಿಬ್ಬಂದಿಗಳು ಶಾಲೆಯ ಮುದ್ದು ಮಕ್ಕಳು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್




















