ಪ್ರೇಮರಾಗ ಹಾಡುವ ಹಕ್ಕಿ ಮೂಕವಾಗಿದೆ
ಕ್ಷಣ ಕ್ಷಣವು ಅವಳ ನೆನಪು ಕಾಡುತ್ತಿದೆ
ಪ್ರತಿ ಅಕ್ಷರದಿ ಅವಳ ಪದ ಮೂಡುತಿದೆ
ಪ್ರತಿದಿನವೂ ಅವಳೆಡೆಗೆ ಮನ ಓಡುತಿದೆ II
ಹೃದಯದೊಳಗೆ ಅರಳಿದ ಪ್ರೀತಿ ಹೊರಗೆ ಮೌನದಿ ಕುಡಿಯುತಿದೆ
ಅವಳ ಹೃದಯ ನನ್ನ ಹೃದಯವನೆಕೆ ಕದಿಯುತ್ತಿದೆ| ನನ್ನ ಕಣ್ಣುಗಳೆರಡು ಏನೇನೋ ಹುಡುಕುತ್ತಿವೆ
ನೂರು ದಾರಿಯಿದ್ದರೂ ಯಾವುದು ಕಾಣದಾಗಿದೆ II
ಚೆಲುವೆ ನೆನಪು ನನ್ನ ಹೃದಯವನ್ನೇ ಬೇಯಿಸುತ್ತಿದೆ
ನನ್ನ ಬಾಯಲ್ಲಿ ಸಿಗರೇಟ್ ಸುಡುತ್ತಿದೆ |
ಅವಳ ನೆನಪಲಿ ಸುಟ್ಟ ಸಿಗರೇಟಿಗೆ ಲೆಕ್ಕವಿಲ್ಲ
ನನಗವಳಿಟ್ಟ ಮುತ್ತಿಗೆ ಪಕ್ಕ ಲೆಕ್ಕವಿಲ್ಲ II
ಚೆಲುವೆ ಮರೆಯಲು ಸೇದಿದ ಸಿಗರೇಟಿನ ಹೊಗೆ ಅವಳ ಚಿತ್ರವಾಗಿದೆ
ಆ ಚಿತ್ರವಾದ ಹೊಗೆಯಲ್ಲ ಮೋಡವಾಗಿದೆ 1
ಮೋಡಗಳೆಲ್ಲ ಸೇರಿ ಪ್ರೀತಿಯ ಮಳೆ ಸುರಿಸುತಿವೆ
ಸುರಿದ ಮಳೆಗೆ ಇಲೆ ತಂಪಾಗುತ್ತಿದೆ
ನನ್ನಲಿನ್ನು ಆ ಬಿಸಿ ಹಾಗೆ ಉಳಿದಿದೆ II
✍️ಜೆ ಕೆ ಬಸವರಾಜು ಜಯಪುರ




















