ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ತಹಶೀಲ್ದಾರ್ ಗೈರುಹಾಜರಿ ಖಂಡಿಸಿ ಅಮಾನತ್ತು ಮಾಡಲು ದಲಿತ ಸಂಘಟನೆಗಳ ಮನವಿ

ಮಧುಗಿರಿ : ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗೈರು ಹಾಜರಾಗಿರುವ ಹಿನ್ನೆಲೆ ದಲಿತಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಏಪ್ರಿಲ್ 1, 2026 ರಂದು ನಡೆದ ಪೂರ್ವಭಾವಿ ಸಭೆಯಲ್ಲಿಯೂ ತಹಶೀಲ್ದಾರ್ ಹಾಜರಾಗಿರಲಿಲ್ಲ. ಇದಲ್ಲದೆ, ಏಪ್ರಿಲ್ 5ರಂದು ನಡೆದ ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮಕ್ಕೂ ಗೈರು ಹಾಜರಾಗಿರುವುದನ್ನು ಖಂಡಿಸಿ, ಅವರನ್ನು ಅಮಾನತ್ತು ಮಾಡುವಂತೆ ಎಲ್ಲಾ ದಲಿತಪರ ಸಂಘಟನೆಗಳ ಮುಖಂಡರು ಒಟ್ಟಾಗಿ ಉಪವಿಭಾಗಾಧಿಕಾರಿ (ಎ. ಸಿ.) ಗುಟೂರು ಶಿವಪ್ಪ ಅವರಿಗೆ ಮನವಿ ಸಲ್ಲಿಸಿದರು.
ನಂತರ ದಲಿತಪರ ಸಂಘಟನೆಗಳ ಸದಸ್ಯರು ಮಧುಗಿರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೇರಿ ಬಾಬು ಜಗಜೀವನ್ ರಾಮ್ ಜಯಂತಿಯನ್ನು ಆಚರಿಸಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳಾದ ನರಸಿಂಹಮೂರ್ತಿ (ವಕೀಲರು), ಐ ಡಿ ಹಳ್ಳಿ ದೊಡ್ಡೇರಿ ಕಣಿಮಯ್ಯ, ತೊಂಡೋಟಿ ರಾಮಾಂಜಿನಪ್ಪ (ಮಾದಿಗ ದಂಡೂರ ರಾಜ್ಯ ಉಪಾಧ್ಯಕ್ಷರು), ಶಿವಕುಮಾರ್ ಎಂ. ವೈ, ಬಾಣದ ರಂಗಯ್ಯ, ನರಸಿಯಪ್ಪ (ದಲಿತ ಮುಖಂಡರು), ಡಿ.ಹೆಚ್. ನರಸಿಂಹಮೂರ್ತಿ (ಕರ್ನಾಟಕ ದಲಿತ ಸರ್ವೋದಯ ಸಮಿತಿ, ಮಧುಗಿರಿ ತಾಲೂಕು ಅಧ್ಯಕ್ಷರು), ದೊಡ್ಡ ಹೊಸಳ್ಳಿ ರಾಮಣ್ಣ (ಡಿಎಸ್‌ಎಸ್), ಸಂಜೀವಯ್ಯ (ಕಲಾವಿದರು), ಜೀವಿಕ ಮಂಜುನಾಥ್, ಗರಣಿ ಶ್ರೀನಿವಾಸ್, ಎಸ್.ಕೆ. ರಂಗನಾಥ್, ಹನುಮಂತರಾಯಪ್ಪ (ಬಡವನಹಳ್ಳಿ), ಮರಿಯಪ್ಪ, ದೊಡ್ಡೇರಿ ರಮೇಶ್, ದಾಸಪ್ಪ, ಚಿಕ್ಕಮ್ಮ (ಜೀವಿಕ), ರಾಜು (ಕೊಡ್ಲಾಪುರ), ಹರಿ ಗಣೇಶ್, ಗರಣಿ ರಂಗರಾಜು, ರಂಗನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ ರಂಗರಾಜು ಎಂ. ಗರಣಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!