ಬಳ್ಳಾರಿ / ಕಂಪ್ಲಿ : ತಾಲೂಕಿನ ನಂಬರ್ 10 ಮುದ್ದಾಪುರ ಗ್ರಾಮದಲ್ಲಿ ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಅವರ 119ನೇ ಜಯಂತಿಯನ್ನು ಅದ್ದೂರಿಯಾಗಿ ಕಂಪ್ಲಿ ತಾಲೂಕು ಭೀಮ ಆರ್ಮಿ ವತಿಯಿಂದ ಆಚರಿಸಲಾಯಿತು.
ತಾಲೂಕು ಅಧ್ಯಕ್ಷ ಎ ಎಸ್ ಯಲಪ್ಪ ಮಾತನಾಡಿ,
ಹಸಿರು ಕ್ರಾಂತಿಯ ಮೂಲಕ ಆಹಾರ ಕೊರತೆಯನ್ನು ನೀಗಿಸುವಲ್ಲಿ ನಾಯಕ ನೀಡಿದ ಅಪಾರ ಕೊಡುಗೆಯನ್ನು ಶ್ಲಾಘಿಸಿದರು. ಅವರಿಂದ ಪ್ರೇರಿತರಾಗಿ, ಆಹಾರ ಉತ್ಪಾದನೆಯು ಬಹಳವಾಗಿ ಹೆಚ್ಚಾಗಿದೆ.
ಭಾರತೀಯ ಸಂವಿಧಾನ ಶಿಲ್ಪಿ ಬಿ. ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರು ಭಾರತದ ಇಬ್ಬರು ಮಹಾನ್ ನಾಯಕರಾಗಿದ್ದು, ಅವರ ಆಲೋಚನೆಗಳು ಯಾವಾಗಲೂ ರಾಷ್ಟ್ರವನ್ನು ಮುನ್ನಡೆಸಲು ಸಹಾಯ ಮಾಡಿದ್ದವು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಎಚ್. ರಾಜಶೇಖರ್, ಉಪ್ಪಾರಹಳ್ಳಿ ಮಾರೇಶ್, ಎಚ್, ಹುಲುಗಪ್ಪ, ಬಸವರಾಜ ಎಸ್, ಪ್ರಕಾಶ ಎಚ್, ಮಹೇಶ ಕೆ. ಮಾಂತಮ್ಮ ಎಚ್, ಮಾರಮ್ಮ ಎಚ್, ಮಲ್ಲಮ್ಮ ಎಚ್, ಮಾರುತಿ ಬಿ. ಶ್ರೀಧರ ಕೆ ಸೇರಿದಂತೆ ನಂಬರ್ 10 ಮುದ್ದಾಪುರ ಗ್ರಾಮದ ಸ್ಥಳೀಯರು ಭಾಗವಹಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















