
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು ಶ್ರೀ ಕ್ಷೇತ್ರ ಕೊಟ್ಟೂರಿನಲ್ಲಿ ಹೊಸದಾಗಿ ಶುರುವಾದ ವಿಸ್ಡಮ್ ವಿಂಗ್ಸ್ CBSE ಶಾಲೆ ಉದ್ಘಾಟನಾ ಸಮಾರಂಭಕ್ಕೆ ಶ್ರೀ ಮ. ನಿ. ಪ್ರ. ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಗವಿಮಠ ಸಂಸ್ಥಾನ ಕೊಪ್ಪಳ ಹಾಗೂ ಶ್ರೀ ಮ ನಿ ಪ್ರ. ಮರಿಶಾಂತವೀರ ಮಹಾಸ್ವಾಮಿಗಳು ಶಾಖಾ ಗವಿಮಠ ಕಡಲೆಬಾಳು ಇವರ ಸಾನಿಧ್ಯದಲ್ಲಿ ಯಶಸ್ವಿಯಾಗಿ ಶಾಲೆಯ ಉದ್ಘಾಟನೆ ಮಾಡಲಾಯಿತು.


ತಾತ ಎಜುಕೇಷನ್ ಟ್ರಸ್ಟ್ (ವಿಸ್ಡಮ್ ವಿಂಗ್ಸ್ CBSE) ಶಾಲೆಯ ಸಂಸ್ಥಾಪಕರಾದ ಹಸನ್ ಯು ಪಿ ಹಾಗೂ ತಾತ ಎಜುಕೇಷನ್ ಟ್ರಸ್ಟ್ ನ ಗೌರವಾಧ್ಯಕ್ಷರು ಕೆ ಸಣ್ಣ ವೀರಣ್ಣ ಮತ್ತು ಶಾಲೆಯ ಸಹ ಶಿಕ್ಷಕವೃಂದ ಹಾಗೂ ಅವರ ಸ್ನೇಹಿತರು, ಮುಖ್ಯ ಅತಿಥಿಗಳಾದ ಮಲ್ಲೇಶ್ ಬೇವೂರು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡ್ಲಿಗಿ ಮತ್ತು ಶ್ರೀ ಕ್ಷೇತ್ರ ಕೊಟ್ಟೂರಿನ ಗಣ್ಯ ಮಾನ್ಯರು ಉಪಸ್ಥಿತರಿದ್ದರು.
ವರದಿಗಾರರು – ಎನ್. ಚಂದ್ರಗೌಡ




















