ಪೊನ್ನಂಪೇಟೆ : ಪಿ.ಸಿ. ಕ್ಲಬ್, ರೋಟರಿ ಗೋಣಿಕೊಪ್ಪಲು ಹಾಗೂ ಸೀನಿಯರ್ ಚೇಂಬರ್ ಗೋಣಿಕೊಪ್ಪಲು ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯು ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲು ಪ್ರೌಢಶಾಲೆಯ ಆವರಣದಲ್ಲಿ ನಡೆಯಿತು.
ಪಂದ್ಯಾವಳಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಹಾಗೂ ಮುಕ್ತ ವಿಭಾಗ ಸೇರಿದಂತೆ ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 192 ಮಂದಿ ಚೆಸ್ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಹಾಗೂ ಕೌಶಲ್ಯವನ್ನು ಪ್ರದರ್ಶಿಸಿದರು.
ಪಂದ್ಯಾವಳಿಯನ್ನು ಹಿರಿಯ ವಕೀಲ ಕಳ್ಳಿಚಂಡ ಅಪ್ಪಣ್ಣ ಉದ್ಘಾಟಿಸಿದರು. ಗೋಣಿಕೊಪ್ಪಲು ಅನುದಾನಿತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
192 ಮಂದಿ ಸ್ಪರ್ಧಿಗಳ ಪೈಕಿ ಮುಕ್ತ ವಿಭಾಗದಲ್ಲಿ 47, ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ 41, ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ 13, ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ 68 ಹಾಗೂ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ 23 ಮಂದಿ ಸೇರಿದಂತೆ ಒಟ್ಟು 192 ಸ್ಪರ್ಧಿಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.
ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ವಿವಿಧ ವಿಭಾಗಗಳ ವಿಜೇತರು ಮುಕ್ತ ವಿಭಾಗ : ಪ್ರಥಮ ಶ್ರೀನಿವಾಸ್ ಪಿ.ವಿ, ಗೋಣಿಕೊಪ್ಪಲು ದ್ವಿತೀಯ ಲಿತೋ ಜೇಮ್ಸ್ ಪೊನ್ನಂಪೇಟೆ ತೃತೀಯ ಸೋಜಿತ್ ಎಂ.ಎಚ್., ಸಿ.ಸಿ.ಜಿ., ಗೋಣಿಕೊಪ್ಪಲು. ಪ್ರೌಢಶಾಲಾ ಬಾಲಕರ ವಿಭಾಗ: ಪ್ರಥಮ ಉನ್ನತ್ ಸಾರಥ್ಯ ಪಿ.ಎಸ್., ಜ್ಞಾನಗಂಗಾ, ಹಾರಂಗಿ ದ್ವಿತೀಯ ರೋಹನ್ ಆರ್. ನಾಯಕ್, ಸೇಂಟ್ ಆನ್ಸ್ ವಿರಾಜಪೇಟೆ ತೃತೀಯ
ಪ್ರೌಢಶಾಲಾ ಬಾಲಕಿಯರ ವಿಭಾಗ : ಪ್ರಥಮ ಅದಾ ಅಯ್ಯಪ್ಪ ಕೆಎಲ್‌ಎಸ್ ಗೋಣಿಕೊಪ್ಪಲು, ದ್ವಿತೀಯ ಪ್ರಣಿತಾ ರಾಘವನ್, ರೂಟ್ಸ್ ತೃತೀಯ ಗಾಯತ್ರಿ ಎಚ್. ಬಂಗಲೆ ಶಾಲೆ ಗೋಣಿಕೊಪ್ಪಲು.
ಪ್ರಾಥಮಿಕ ಶಾಲಾ ಬಾಲಕರ ವಿಭಾಗ : ಪ್ರಥಮ ಅದಾನ್ ಬೇಗ್ ವಿರಾಜಪೇಟೆ ವೈಭವ್ ಚೇತನ್, ಕೆಎಲ್‌ಎಸ್, ಗೋಣಿಕೊಪ್ಪಲು.
ವರದಿ : ಪ್ರಿತುನ್ ಪೂವಣ್ಣ




















