ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಾಮ್‌ಕೋಸ್ ಅಡಿಕೆ ಬೆಳೆಗಾರರ ಹಿತರಕ್ಷಣೆ ಕಾರ್ಯಕ್ಕೆ ಅಭಿನಂದನೆ

ಶಿವಮೊಗ್ಗ: ಸಂಸ್ಥೆಯ 2025-26 ನೇ ಸಾಲಿನ 86ನೇ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಮಾನ್ಯ ಅಧ್ಯಕ್ಷರು ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಶ್ರೀ ಪ್ರಭುಲಿಂಗ ಕವಳಿಕಟ್ಟಿ. ಐ.ಎ.ಎಸ್. ಇವರ ಅಧ್ಯಕ್ಷತೆಯಲ್ಲಿ ಪೆಸಿಟ್‌ ಕಾಲೇಜು ಆವರಣದಲ್ಲಿನ ಪ್ರೇರಣಾ ಸಭಾಂಗಣದಲ್ಲಿ ನಡೆದಿರುತ್ತದೆ. ಈ ಸಭೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿರುತ್ತಾರೆ.

ಮಾಮ್‌ಕೋಸ್ ಸಂಸ್ಥೆಯು ಈ ಸಾಲಿನಲ್ಲಿ ರೂ.9.53 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಡ್ ಅನ್ನು ಘೋಷಣೆ ಮಾಡಲಾಯಿತು. ಈ ಸಾಲಿನಲ್ಲಿ 3,45,285 ಮೂಟೆಗಳ ಅಡಿಕೆ ಮತ್ತು 1,462 ಮೂಟೆಗಳ ಕಾಳುಮೆಣಸು ಆವಕವಾಗಿದ್ದು, ಸಂಘದ ಒಟ್ಟು ವ್ಯವಹಾರವು ರೂ.1636.33 ಕೋಟಿಗಳಾಗಿರುತ್ತದೆ.

ಶಿವಮೊಗ್ಗ ಜಿಲ್ಲಾಧಿಕಾರಿಗಳು ಮತ್ತು ಸಂಘದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಪ್ರಭುಲಿಂಗ ಕವಳಿಕಟ್ಟಿ ಐ.ಎ.ಎಸ್ ಇವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಸಂಸ್ಥೆಯು 2025-26ರ ಆರ್ಥಿಕ ಸಾಲಿನಲ್ಲಿ ಲಾಭವನ್ನು ಗಳಿಸಿ ಆಡಿಟ್ ವರ್ಗೀಕರಣದಲ್ಲಿ ‘ಎ’ ಶ್ರೇಣಿಯಲ್ಲಿಯೇ ಮುಂದುವರೆದಿರುವುದಕ್ಕೆ ಹಾಗೂ ಕಳೆದ ಬಾರಿಗಿಂತ ರೂ.4.0 ಕೋಟಿಗೂ ಅಧಿಕ ಲಾಭ ಗಳಿಸಿರುವುದಕ್ಕೆ ಸದಸ್ಯರೆಲ್ಲರೂ ನೀಡಿರುವ ಬೆಂಬಲ ಹಾಗೂ ಅವರ ಸಹಕಾರವೇ ಕಾರಣವಾಗಿರುತ್ತದೆ. ಇದಕ್ಕಾಗಿ ಧನ್ಯವಾದಗಳನ್ನು ಹೇಳಿದರು.

ಸಂಘದಲ್ಲಿನ `ಗುಂಪು ವಿಮಾ ಯೋಜನೆ’ ಯ ಪ್ರಯೋಜನವನ್ನು ಬಹಳಷ್ಟು ಸದಸ್ಯರು ಪಡೆದುಕೊಂಡಿದ್ದು, ಇನ್ನೂ ಹೆಚ್ಚಿನ ಸದಸ್ಯರು ಈ ಯೋಜನೆ ಅಡಿ ನೋಂದಾಯಿಸಿಕೊಂಡು ಸೌಲಭ್ಯವನ್ನು ಉಪಯೋಗಿಸಿಕೊಳ್ಳುವಂತೆ ಹಾಗೂ ಮಾಮ್‌ಕೋಸ್ ಸಂಸ್ಥೆಯು ಸದಸ್ಯರ ಹಿತರಕ್ಷಣೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸೌಲಭ್ಯವನ್ನು ಪಡೆಯುವಂತೆ ಕೋರಿದರು.

ಈ ಸಂದರ್ಭದಲ್ಲಿ ಸಂಘದ ನವೀಕೃತ ವೆಬ್‌ಸೈಟ್‌ಗೆ ಚಾಲನೆ ನೀಡಿದ ಮಾಮ್‌ಕೋಸ್‌ ಸದಸ್ಯರು ಹಾಗೂ ಶಿವಮೊಗ್ಗ ಲೋಕಸಭಾ ಸದಸ್ಯರು ಆದ ಸನ್ಮಾನ್ಯ ಶ್ರೀ ರಾಘವೇಂದ್ರ ಬಿ.ವೈ ಇವರು ಮಾತನಾಡುತ್ತಾ ಸಂಘದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಸ್ತುತ ಅಡಿಕೆಯ ತೇವಾಂಶದ ಬಗ್ಗೆ ನಿಗದಿಪಡಿಸಲಾಗಿರುವ ಶೇ.7ರ ಮಾನದಂಡವನ್ನು ಶೇ.11 ಕ್ಕೆ ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ, ಹೆಚ್ಚಳಕ್ಕೆ ಪ್ರಯತ್ನಿಸಲಾಗುವುದೆಂದು ಹಾಗೂ ಹವಾಮಾನ ಆಧಾರಿತ ಬೆಳೆವಿಮೆ ಸಮಸ್ಯೆಗೆ ಪರಿಹಾರ ಒದಗಿಸುವ ಕುರಿತು ಭರವಸೆ ನೀಡಿದರು.

ಸಂಘದ ಮಾನ್ಯ ಉಪಾಧ್ಯಕ್ಷರಾದ ಶ್ರೀ ಹೆಚ್.ಎಸ್.ಮಹೇಶ್ ಇವರು ಸದಸ್ಯರು ನಮ್ಮ ಸಂಘಕ್ಕೆ ಅಡಿಕೆಯನ್ನು ಹಾಕಿ ಸಂಘದಲ್ಲಿ ವ್ಯವಹರಿಸಿ ಸಂಘದ ಸೌಲಭ್ಯಗಳ ಪ್ರಯೋಜನವನ್ನು ಪಡೆಯುವಂತೆ ತಿಳಿಸಿದರು.
ಸಭೆಯಲ್ಲಿ ಮಾನ್ಯ ಉಪಾಧ್ಯಕ್ಷರು, ಇತ್ತೀಚೆಗೆ ಪತ್ರಿಕೆ ಮತ್ತು ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾದ ತೀರ್ಥಹಳ್ಳಿ ನಿವೇಶನದ ಖರೀದಿ ಬಗೆಗಿನ ಸಂದೇಹಗಳಿಗೆ ವಿಸ್ತೃತವಾಗಿ ಉತ್ತರಿಸಿದರು.

ಅವರು ತಮ್ಮ ಸ್ಪಷ್ಟನೆಯಲ್ಲಿ ತೀರ್ಥಹಳ್ಳಿ ಶಾಖೆಗೆ ಪ್ರತೀ ವರ್ಷ ಸರಾಸರಿ 48000-50000 ಅಡಿಕೆ ಮೂಟೆಗಳು ಆವಕವಾಗುತ್ತದೆ. ಆದರೆ ಪ್ರಸ್ತುತ ಎಪಿಎಂಸಿ ಆವರಣದಲ್ಲಿರುವ ಕಛೇರಿಯು ಕೇವಲ 8000 ಮೂಟೆಗಳ ದಾಸ್ತಾನು ಸಾಮರ್ಥ್ಯ ಹೊಂದಿರುತ್ತದೆ. ಹೆಚ್ಚುವರಿ ಮೂಟೆಗಳ ಸಂಗ್ರಹಕ್ಕಾಗಿ ಗೋದಾಮುಗಳನ್ನು ಬಾಡಿಗೆ ಪಡೆಯಲಾಗಿದ್ದು, ಸಹಕಾರ ಸಂಘಗಳಿಗೆ ಬಾಡಿಗೆ ದರದಲ್ಲಿ ಶೇ 50 ರಷ್ಟು ರಿಯಾಯಿತಿ ಇರುತ್ತದೆ. ಆದಾಗ್ಯೂ ಸಂಘವು ಪಾವತಿಸುತ್ತಿರುವ ಬಾಡಿಗೆಯು ವಾರ್ಷಿಕವಾಗಿ 45-50 ಲಕ್ಷವಾಗಿರುತ್ತದೆ.

ಒಟ್ಟಾರೆಯಾಗಿ ಹೆಚ್ಚವರಿಯಾಗಿ ಗೋದಾಮುಗಳನ್ನು ಬಾಡಿಗೆಗೆ ಪಡೆದ ಕಾರಣ ಸಂಘಕ್ಕೆ ಸಿಬ್ಬಂದಿ ವೆಚ್ಚ, ಹಮಾಲಿ ವೆಚ್ಚ, ಭದ್ರತಾ ಸಿಬ್ಬಂದಿ ವೆಚ್ಚ ಈ ಎಲ್ಲಾ ಕಾರಣಗಳಿಂದ ವಾರ್ಷಿಕವಾಗಿ ಸರಿಸುಮಾರು ಒಂದು ಕೋಟಿಗಳಷ್ಟು ಹೊರೆಯಾಗುತ್ತಿದೆ. ಸಂಘವು 2015 ನೇ ಸಾಲಿನಿಂದಲೂ ಎಪಿಎಂಸಿ ಆವರಣದಲ್ಲಿ ನಿವೇಶನವನ್ನು ಹೊಂದಲು ಸಾಕಷ್ಟು ಬಾರಿ ಸಂಬಂಧಿಸಿದ ಸಚಿವರುಗಳಿಗೂ ಖುದ್ದಾಗಿ ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದ್ದರೂ ಈವರೆಗೂ ನಿವೇಶನ ಲಭ್ಯವಾಗಿರುವುದಿಲ್ಲ. ಆದ್ದರಿಂದ ಖಾಸಗಿ ನಿವೇಶನವನ್ನು ಖರೀದಿಸಲಾಗಿರುತ್ತದೆ.

ಮುಂದುವರೆದು, ಅತ್ಯಂತ ಪಾರದರ್ಶಕವಾಗಿ ನಿವೇಶನವನ್ನು ಖರೀದಿಸಿದ್ದು, ಈ ನಿವೇಶನ ಖರೀದಿಯಲ್ಲಿ ಯಾವುದೇ ಲೋಪವಾಗಲಿ, ಅವ್ಯವಹಾರವಾಗಲೀ ನಡೆದಿರುವುದಿಲ್ಲವೆಂದು ಸ್ಪಷ್ಟಪಡಿಸಿದರು.

ಈ ಮಹಾಸಭೆಯಲ್ಲಿ ಕಸ್ತೂರಿರಂಗನ್‌ ವರದಿಗೆ ಮಾಮ್‌ಕೋಸ್‌ ವತಿಯಿಂದ ಆಕ್ಷೇಪಣೆ ಸಲ್ಲಿಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.

ಆಡಳಿತ ಮಂಡಲಿಯ ಎಲ್ಲಾ ಸದಸ್ಯರು ಈ ಮಹಾಸಭೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಪಲ್ಲವಿ ಆರ್. ಮತ್ತು ಶ್ರೀಮತಿ ರಂಜಿತಾ ಸಿ.ಎ ಇವರು ಪ್ರಾರ್ಥಿಸಿದರು.
ಸಂಸ್ಥೆಯ ಸಿಬ್ಬಂದಿಗಳು ರೈತ ಗೀತೆ ಮತ್ತು ಸಹಕಾರ ಗೀತೆಯನ್ನು ಹಾಡಿದರು. ಸಂಘದ ಉಪಾಧ್ಯಕ್ಷರಾದ ಶ್ರೀ ಹೆಚ್.ಎಸ್.ಮಹೇಶ್ ಇವರು ಎಲ್ಲರನ್ನೂ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶ್ರೀಕಾಂತ ಬರುವೆ ಇವರು ಸಭಾ ಸೂಚನಾ ಪತ್ರವನ್ನು ಓದಿದರು. ನಿರ್ದೇಶಕರಾದ ಶ್ರೀ ಕೃಷ್ಣಮೂರ್ತಿ ಕೆ ವಿ ಇವರು ಅಗಲಿದ ಸದಸ್ಯರು ಮತ್ತು ಗಣ್ಯರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುವ ಬಗೆಗೆ ಮಂಡಿಸಿದರು. ಶ್ರೀ ಸುರೇಶ್ಚಂದ್ರ ಎ ಇವರು ವಂದಿಸಿದರು ಮತ್ತು ಶ್ರೀ ವಿರೂಪಾಕ್ಷಪ್ಪ ಜಿ ಈ ಇವರು ಕಾರ್ಯಕ್ರಮವನ್ನು ನಿರೂಪಿಸಿದರು ಎಂದು ವರದಿ ತಿಳಿಸಿದೆ.

ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ / ಬೆಂಗಳೂರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!