
ಯಲಬುರ್ಗಾ: ರಾಜ್ಯ ಸರ್ಕಾರವು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕನ್ನು ತೀವ್ರ ಬರಗಾಲ ಬರಪೀಡಿತ ತಾಲೂಕು ಎಂದು ಅಧಿಕೃತವಾಗಿ ಘೋಷಿಸಿ, ವಿವಿಧ ಜಿಲ್ಲೇಯ ತಾಲೂಕುಗಳನ್ನು ಆದೇಶ ಹೊರಡಿಸಿದ್ದು ರೈತಾಪಿ ಜನರಿಗೆ ಸಂತಸವಾಗಿತ್ತು ಆದರೆ ರೈತರಿಗೆ ಒಂದು ಹೆಕ್ಟೇರಿಗೆ 2500 ಪರಿಹಾರ ಘೋಷಣೆ ಮಾಡಿದ್ದು, ಬರದಿಂದ ತತ್ತರಿಸಿ ಬಿಕ್ಕುತ್ತಿತುವ ರೈತರ ಬದುಕಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ,ರೈತರಿಗೆ ಎರಡೂವರೆ ಸಾವಿರ ಬರ ಪರಿಹಾರ ಮಾಡುವಲ್ಲಿ ಮುಂದಾಗಿರುವ ಇವರ ಸಾದನೆಗೆ ಇವರಿಗೆ ಅಪಮಾನವಾಗಿ ಮಾನಭಂಗವಾಗುತ್ತದೆ ಇದು ರಾಜ್ಯ ಸರ್ಕಾರದ ದುರ್ದೈವದ ಸಂಗತಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ( ವಾಸುದೇವ ಮೇಟಿ ಬಣದ) ಯಲಬುರ್ಗಾ ತಾಲೂಕು ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಅಸಮದಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಬರ ಘೋಷಣೆ ಪರಿಹಾರಕ್ಕಾಗಿ ಒಂದು ಎಕರೆಗೆ ಎಷ್ಟು ಪರಿಹಾರ ಕೊಡಬೇಕು? ಯಾವ ಮಾನದಂಡಗಳು ಇರಬೇಕು ಎಂಬುದನ್ನು ನಮಗೂ ಸಹಿತ ಮನವರಿಕೆ ಮಾಡಿ, ರೈತರ ಜಾಗದಲ್ಲಿ ನೀವು ನಿಮ್ಮ ಕುಟುಂಬದವರು ಇದ್ದರೆ ಅವರ ಪರಿಸ್ಥಿತಿ ನಿಮಗೂ ಅರ್ಥವಾಗುತ್ತಿತ್ತು, ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದ ಬೆಳೆಗಳು ಹಾನಿಗೊಳಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ , ಹಾಗೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ರೈತರ ಪರಿಸ್ಥಿತಿ ಹದಗೆಟ್ಟು ಹಳ್ಳ ಹಿಡಿದು ಬದುಕು ಬರದಿಂದ ಬರ್ಬಾದ ಆಗಿತ್ತು,ಇದರಿಂದ ರೈತರು ಸಾಲದಲ್ಲಿ ಹುಟ್ಟಿ ಸಾಲದಲ್ಲಿ ಸಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು, ದಲಾಲಿ ಅಂಗಡಿಯಲ್ಲಿ ,ಖಾಸಗಿ ಸಾಲ ಹೀಗೆ ಮೀಟರ ಬಡ್ಡಿ ಕಟ್ಟಿ ರೈತರು ಸುಸ್ತಾಗಿ,ಸರಿಯಾಗಿ ಊಟ, ನಿದ್ರೆ ಮಾಡಲಾರದೆ, ಸಂಸಾರದ ಬಂಡಿ ಹೇಗೆ ಸಾಗಿಸಬೇಕು ಎಂದು ಚಿಂತೆಯಲ್ಲಿ ಕಾಲ ಕಳೆಯುತ್ತಿದ್ದಾರೆ !
ಬರ ಘೋಷಣೆ ನೆಪದಲ್ಲಿ ಒಬ್ಬ ರೈತನಿಗೆ 2500 ಕೊಟ್ಟರೆ? ಇದು ಪರಿಹಾರವಲ್ಲ ! ಒಬ್ಬ ರೈತ ಒಂದು ಎಕರೆ ಉಳುಮೆ ಮಾಡಬೇಕಾದರೆ ಮಡಿಕೆ ಹೊಡೆಯುವದು, ಹರಗುವದು ಬಿತ್ತನೆ ಮಾಡುವದು, ಬೀಜ, ರಸ ಗೊಬ್ಬರ ,ರಾಶಿ ಮಾಡುವಾಗ ಮಿಷನ್ ಬಾಡಿಗೆ, ಆಳು, ರಾಶಿ ಮಾಡಬೇಕಾದರೆ ತಾಡಪಾಲ್, ಪುಟ್ಟಿ, ಕಸಬರಿಗೆ ಇತರ ಸಾಮಗ್ರಿಗಳ ಖರ್ಚುಗಳು ಸೇರಿ ಅಂದಾಜು ಒಂದು ಎಕರೆಗೆ 15 ಸಾವಿರ ಖರ್ಚಾಗುತ್ತದೆ ,ಆದರೆ ನೀವು ಕೊಡುವದು 2500 ರೂ.ಇದರಿಂದ ಧೂಪ ಹಾಕಬೇಕೆಂದರೆ ಅದು ಸಹಿತ ಬರಲ್ಲ, ಎಲಿ, ಅಡಿಕೆ ತಿಂದು ಉಗುಳಿದರೂ ಸಹಿತ ನಿಮ್ಮ ಬರ ಘೋಷಣೆಯ ಬರಿಹಾರ ಸಾಲದು ಆದ್ದರಿಂದ ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿ, ಕಂದಾಯ ಸಚಿವರು, ಶಾಸಕರು, ಸಚಿವರು,ಸಂಸದರು ರೈತರ ಪರಿಸ್ಥಿತಿ ಅರ್ಥಮಾಡಿಕೊಂಡು ,ರೈತರ ಜಾಗದಲ್ಲಿ ನಾವುಗಳು ಇದ್ದೆವೆ ಎಂದು ಅರಿತುಕೊಂಡು ರೈತರಿಗೆ ಒಂದು ಎಕರೆಗೆ 30 ಸಾವಿರ ಬರ ಘೋಷಣೆಯ ಪರಿಹಾರ ನೀಡಬೇಕು ಇದರ ಜೊತೆಗೆ ಸರ್ಕಾರದ ವಿವಿಧ ಸೌಲಭ್ಯಗಳು ದೊರೆಯುವಂತೆ ಕ್ರಮ ತೆಗೆದುಕೊಂಡು ರೈತರ ಹಿತ ಕಾಪಾಡುವಲ್ಲಿ ಮುಂದಾಗಬೇಕು ಎಂದು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಲಬುರ್ಗಾ ತಾಲೂಕು ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ತಾಲೂಕಿನ ರೈತರ ಪರವಾಗಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.




















