ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹಸಿರು ಕ್ರಾಂತಿ ಹರಿಕಾರ,ಕಾರ್ಮಿಕರ ಬಂದು ಬಾಬೂಜೀ

ನಾನಿರುತ್ತೇನೋ ಬಿಡುತ್ತೇನೋ ನಾವು ಇರುತ್ತೇವೋ ಬಿಡುತ್ತೇವೋ ಭಾರತವಂತೂ ಇದ್ದೇ ಇರುತ್ತದೆ.ದೇಶದ ಒಗ್ಗಟ್ಟು ಅಖಂಡತೆಯ ವಿಚಾರ ಬಂದಾಗ ಜಾತಿಯಾಗಲಿ,ಧರ್ಮವಾಗಲಿ,ಭಾಷೆಯಾಗಲಿ ದೊಡ್ಡ ವಿಚಾರವಾಗುವುದಿಲ್ಲ.ದೇಶದೊಂದಿಗೆ ಹೋಲಿಸಿದಾಗ ಅವೆಲ್ಲ ಅಗಣ್ಯ.ಅವಕ್ಕೆ ಅಸ್ತಿತ್ವವಿರುವುದೇ ದೇಶದಿಂದ ಎಂದು ಹೇಳಿದ ದೇಶಕಂಡ ಧೀಮಂತ ನಾಯಕ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ರವರ ಜಯಂತಿ.

1908 ಏಪ್ರಿಲ್ 5 ರಂದು ಬಿಹಾರ್ ರಾಜ್ಯದ ಚಂದ್ವಾ ಗ್ರಾಮದಲ್ಲಿ ತಂದೆ ಶೋಬಿರಾಮ್,ತಾಯಿ ವಾಸಂತಿದೇವಿ ಯವರ ಮಗನಾಗಿ ಜನಿಸಿದರು.ದೇವರ ಅನುಗ್ರಹದಿಂದ ಮಾತ್ರ ಆಧ್ಯಾತ್ಮಿಕ ಸಿದ್ದಿಯನ್ನು ಪಡೆಯಬಹುದು.ಪರಿಶುದ್ಧ ಜೀವನವೇ ಧಾರ್ಮಿಕ ಜೀವನದ ಸಾರ ಹಾಗೂ ಪ್ರೀತಿಯ ಮೂಲಕ ಹಿಂದೂ ಮುಸ್ಲಿಮರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ್ದ ಈ ಎಲ್ಲವೂ ಸಂತ ಹಿನ್ನಲೆಯ ಶೋಬಿರಾಮ್ ದಂಪತಿಗಳ ಮೇಲೆ ಪ್ರಭಾವ ಬೀರಿ “ಜಗಜೀವನರಾಮ್” ಎಂಬ ಹೆಸರಿಟ್ಟರು.

1914ರಲ್ಲಿ ಪ್ರಾಥಮಿಕ ಶಾಲೆಗೆ ಸೇರಿದರು ತಂದೆಯ ಸಾವಿನ ನಂತರ ತಾಯಿಯ ಆರೈಕೆಯಲ್ಲಿ ಬೆಳೆದರು.ಪ್ರೌಢ ಶಾಲೆಯಲ್ಲಿ ಓದುವಾಗ ಜಗಜೀವನರಾಮರವರ ಚತುರತೆ ಕಂಡು ರಾಷ್ಟ್ರ ನಾಯಕರಾದ ಪಂಡಿತ್ ಮದನ್ ಮೋಹನ್ ಮಾಳ್ವಿಯರವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬನಾರಸ್ ನ ಹಿಂದೂ ವಿಶ್ವವಿದ್ಯಾಲಯಕ್ಕೆ ಬರುವಂತೆ ತಿಳಿಸಿದರು.ಮುಂದೆ ಪದವಿಯನ್ನು ಕಲ್ಕತ್ತಾದಲ್ಲಿ ಗಣಿತ ಹಾಗೂ ವಿಜ್ಞಾನದ ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆಯುವುದರ ಮೂಲಕ ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವ ಗುಣವನ್ನು ಬೆಳೆಸಿಕೊಂಡರು.

1935 ಅಕ್ಟೋಬರ್ 19 ರಂದು ರಾಂಚಿಯಲ್ಲಿ ನಡೆದ ಹ್ಯೂಮಂಡ್ ಆಯೋಗದ ಮುಂದೆ ಹಾಜರಾಗಿ ದಲಿತರಿಗೆ ಮೊದಲ ಬಾರಿಗೆ ಮತದಾನದ ಹಕ್ಕನ್ನು ಕೋರಿದರು.1936 ರಲ್ಲಿ ತಮ್ಮ 28ನೇ ವಯಸ್ಸಿಗೆ ಬಿಹಾರದ ವಿಧಾನ ಪರಿಷತ್ ಚುನಾವಣೆಯಲ್ಲಿ ನಾಮ ನಿರ್ದೇಶಿತ ಸದಸ್ಯರಾಗಿ ಶಾಸಕರಾದರು.ಮಹಾತ್ಮ ಗಾಂಧೀಜಿ ಅವರಿಂದ ಪ್ರೇರೇಪಿತರಾಗಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ 1942 ಅಕ್ಟೋಬರ್ 19ರಂದು ಸೆರೆಮನೆಯ ಬಂಧನಕ್ಕೆ ಒಳಗಾದರು.ಹೀಗೆ 1946ರಲ್ಲಿ ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ತಮ್ಮದೇ ಆದ ಕೊಡುಗೆ ನೀಡಿದರು.ಅಂಬೇಡ್ಕರ್ ಮತ್ತು ಬಾಬುಜಿ ಅವರ ನಡುವೆ ಉತ್ತಮ ಬಾಂಧವ್ಯ ಬೆಳೆಯಿತು.ಮುಂದೆ 1956 ಡಿಸೆಂಬರ್ 6 ರಂದು ಅಂಬೇಡ್ಕರ್ ಅವರ ಸಾವಿನ ಸುದ್ದಿ ಕೇಳಿ ಅಲಿಪುರ್ ರಸ್ತೆಯ ಮನೆಗೆ ತಲುಪಿದ ವ್ಯಕ್ತಿಗಳಲ್ಲಿ ಬಾಬೂಜಿ ಅವರೇ ಮೊದಲಿಗರು.ಬಾಬೂಜೀಯವರೇ ಮುಂದೆ ನಿಂತು ಅಂಬೇಡ್ಕರ್ ರವರ ಅಂತಿಮ ಯಾತ್ರೆಗೆ ವ್ಯವಸ್ಥೆ ಮಾಡಿ ಮುಂಬೈನ ರಾಜಗೃಹಕ್ಕೆ ತಲುಪಿಸುವ ವ್ಯವಸ್ಥೆ ಮಾಡಿದರು ನಂತರ ಬಾಬೂಜಿಯವರು ಹೋಗುತ್ತಿದ್ದ ಸಭೆ ಸಮಾರಂಭಗಳಿಗೆ ಹೋದಲ್ಲೆಲ್ಲಾ ಮೊದಲು ಬಾಬಾ ಸಾಹೇಬರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದರು.
1940 ರಲ್ಲಿ ಮೊದಲ ಬಾರಿಗೆ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿಗೆ ಸದಸ್ಯತ್ವ ಪಡೆದು ಕಾಂಗ್ರೆಸ್ಸನ್ನು ಸಶಕ್ತಗೊಳಿಸಿದರು.1946 ರಲ್ಲಿ ನೆಹರುರವರ ಸಂಪುಟದಲ್ಲಿ ಕಾರ್ಮಿಕ ಮಂತ್ರಿಯಾಗಿ ಸೇವೆ ಸಲ್ಲಿಸುವುದರ ಮೂಲಕ ದುಡಿಯುವ ಜನರಿಗೆ ಭದ್ರತೆ,ಸಾಮಾಜಿಕ ವಿಮೆ,ವೈದ್ಯಕೀಯ ಸೌಲಭ್ಯ ಹಾಗೂ ಕನಿಷ್ಠಕೂಲಿ ಕಾಯ್ದೆ ಹೀಗೆ ಹಲವಾರು ಕೊಡುಗೆಗಳನ್ನು ನೀಡುವುದರ ಮೂಲಕ ಕಾರ್ಮಿಕ ಕಾಯ್ದೆಗಳ ಶಿಲ್ಪಿ ಎನಿಸಿದರು.ಸಾರಿಗೆ ಸಂಪರ್ಕ ಇಲಾಖೆ ಸಚಿವರಾಗಿ ಅಂಚೆ ಇಲಾಖೆಯಲ್ಲಿ ಮುಂತಾದ ಕಾರ್ಯಗಳನ್ನು ಕೈಗೊಂಡರು.1967 ರಲ್ಲಿ ಕೃಷಿ ಮತ್ತು ಆಹಾರ ಸಚಿವಾಲಯದ ಜವಾಬ್ದಾರಿ ತೆಗೆದುಕೊಂಡು ಭಾರತ ಕಂಡ ಧೀಮಂತ ಕೃಷಿ ಸಚಿವರಾಗಿ ಕೃಷಿಯ ಬೆಳವಣಿಗೆಗೆ ಶ್ರಮಿಸಿದರು.ಕೃಷಿಯಲ್ಲಿನ ಉತ್ಪನ್ನ ಹೆಚ್ಚಿಸುವುದಕ್ಕೆ ಹಸಿರು ಕ್ರಾಂತಿ ಎಂಬ ಹೆಸರಿಟ್ಟು ಅದನ್ನು ಯಶಸ್ವಿಗೊಳಿಸಿ “ಹಸಿರು ಕ್ರಾಂತಿಯ ಹರಿಕಾರ”ಎನಿಸಿಕೊಂಡರು.ಮುಂದೆ 1971ರಲ್ಲಿ ರಕ್ಷಣಾ ಮಂತ್ರಿಯಾಗಿದ್ದಾಗ ಅನಿರೀಕ್ಷಿತವಾಗಿ ಇಂಡೋ-ಪಾಕ್ ಯುದ್ಧ ಪ್ರಪಂಚದ ಅತಿ ಎತ್ತರದ ಯುದ್ಧ ಭೂಮಿಯನ್ನಲಾಗುವ ಸಿಯಾಚಿನ್ ಗೆ ಖುದ್ದಾಗಿ ತಾವೇ ಯುದ್ಧ ಭೂಮಿಗೆ ತೆರಳಿ ಅಲ್ಲಿನ ಭಾರತೀಯ ಯೋಧರಿಗೆ ಆತ್ಮಸ್ಥೈರ್ಯ ತುಂಬಿ ಪಾಕಿಸ್ತಾನವನ್ನು ಯುದ್ಧದಲ್ಲಿ ಸೋಲಿಸಿದ ಕೀರ್ತಿಗೆ ಬಾಬೂಜಿಯವರು ಭಾಜನರಾದರು.ಮುಂದೆ ರಾಜಕೀಯ ಕೆಟ್ಟ ಪರಿಸ್ಥಿತಿಗಳ ನಿಲುವಿನಿಂದ ಕಾಂಗ್ರೆಸ್ ತೊರೆದು ಹೊರಗೆ ಬಂದು,1977ರಲ್ಲಿ ಸಸಾರಾಮ್ ಕ್ಷೇತ್ರದಿಂದ ಎರಡು ಲಕ್ಷಗಳ ಮತಗಳ ಅಂತರದಿಂದ ಗೆದ್ದರು ಮುಂದೆ ಡಾ.ಬಾಬು ಜಗಜೀವನರಾಮ್ ರವರು ಉಪಪ್ರಧಾನಿಯಾದರು.ದೇಶ ಕಂಡ ಮೇರುನಾಯಕ ಹಲವಾರು ದುಃಖ ದುಮ್ಮಾನಗಳನ್ನು ಎದುರಿಸಿ ದಕ್ಷತೆ ಪ್ರಾಮಾಣಿಕತೆಗೆ ಹೆಸರಾಗಿದ್ದ ಬಾಬೂಜಿಯವರು ಅಸ್ತಮಾದಿಂದ ನರಳುತ್ತಿದ್ದರು.ಅವರ ಆರೋಗ್ಯ ಸುಧಾರಿಸಲೆಂದು ದೇಶಾದ್ಯಂತ ಪ್ರಾರ್ಥನೆ ಸಲ್ಲಿಸಿದರು.ಆದರೆ 1986 ಜುಲೈ 6ರಂದು ಬಾಬೂಜಿಯವರು ನಿಧನರಾದರು.

ಇಂತಹ ಮಹಾನ್ ನಾಯಕರನ್ನು ನಾವು ಇಂದು ಮುಂದೆ ಎಂದೆಂದಿಗೂ ಪ್ರತಿಯೊಬ್ಬರು ಈ ಮಹಾನ್ ವ್ಯಕ್ತಿಯ ಸಾಧನೆಗಳನ್ನು ಮತ್ತು ದೇಶಕ್ಕಾಗಿ ಇವರ ಕೊಡುಗೆಗಳನ್ನು ನಾವು ಸ್ಮರಿಸಬೇಕು.ನಮ್ಮೆಲ್ಲರ ಬದುಕಿನಲ್ಲಿ ಅವರ ಆದರ್ಶಗಳನ್ನುಅಳವಡಿಸಿಕೊಳ್ಳುವುದರ ಮೂಲಕ ಭಾರತವನ್ನು ಸಮೃದ್ಧ,ಶಾಂತಿ,ಶಿಸ್ತು ಮತ್ತು ಸಮಾನತೆಯ ರಾಷ್ಟ್ರವನ್ನಾಗಿ ಮಾಡುವಲ್ಲಿ ನಮ್ಮೆಲ್ಲರ ಕಾರ್ಯ ಮಹತ್ವದ್ದಾಗಿದೆ.

-ಅಮೇಶ ಪರಪ್ಪಗೊಳ್,ಮುದ್ದೇಬಿಹಾಳ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ