ಕಲಬುರಗಿ : ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ (VNEC) ಎನ್ಸಿಸಿ ಅಧಿಕಾರಿ ಶ್ರೀ ಬಾಬು ದೊಡ್ಡಮನಿ ಕೋಳಕುರ ಅವರು ಭಾರತೀಯ ಸೇನೆಯ ಎನ್ಸಿಸಿ ವಿಭಾಗದಿಂದ ಲೆಫ್ಟಿನೆಂಟ್ ಹುದ್ದೆಗೆ ಭಾಜನರಾಗಿದ್ದಾರೆ.
ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ನಡೆದ ಪಿಆರ್ಸಿಎನ್ ಸೀನಿಯರ್ ಡಿವಿಷನ್ ಕೋರ್ಸ್ ಸಂಖ್ಯೆ 174ರಲ್ಲಿ ಜನವರಿ 05ರಿಂದ ಏಪ್ರಿಲ್ 04, 2026ರವರೆಗೆ ಮೂರು ತಿಂಗಳ ಕಠಿಣ ಸೈನಿಕ ತರಬೇತಿಯನ್ನು ಅವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಏಪ್ರಿಲ್ 04ರಂದು ಕ್ಯಾಂಪ್ಟಿಯ ಚುನ್ನಿ ಲಾಲ್ ಪೆರೇಡ್ ಮೈದಾನದಲ್ಲಿ ನಡೆದ ಪಾಸಿಂಗ್ ಔಟ್ ಪೆರೇಡ್ ನಂತರ ಪೈಪಿಂಗ್ ಸಮಾರಂಭದಲ್ಲಿ ಅವರ ಹೆಗಲ ಮೇಲೆ ನಕ್ಷತ್ರಗಳನ್ನು ಅಳವಡಿಸುವ ಮೂಲಕ ಲೆಫ್ಟಿನೆಂಟ್ ಹುದ್ದೆಯನ್ನು ಅಧಿಕೃತವಾಗಿ ಪ್ರದಾನ ಮಾಡಲಾಯಿತು.
ಈ ಸಾಧನೆಯ ಹಿನ್ನೆಲೆಯಲ್ಲಿ ಮಹಾವಿದ್ಯಾಲಯದ ವತಿಯಿಂದ ಶ್ರೀ ಬಾಬು ದೊಡ್ಡಮನಿ ಅವರಿಗೆ ಅಭಿನಂದನೆಗಳೊಂದಿಗೆ ಸನ್ಮಾನಿಸಲಾಯಿತು.
ಈ ಸಮಾರಂಭದಲ್ಲಿ ಮಹಾವಿದ್ಯಾಲಯದ ಜಂಟಿ ಕಾರ್ಯದರ್ಶಿ ಶ್ರೀ ದೊಡ್ಡಪ್ಪ ಎಸ್. ನಿಷ್ಠಿ, ಪ್ರಾಂಶುಪಾಲರಾದ ಡಾ. ಶರಣಬಸಪ್ಪ ಸಾಲಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ




















