ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವೈದ್ಯರ ಜೀವ ಕಾರುಣ್ಯದಿಂದ ಲೋಕದ ಜೀವಂತಿಕೆ: ಸಿದ್ಧಬಸವ ಕಬೀರ ಸ್ವಾಮೀಜಿ

ಬೀದರ್ /ಬಸವಕಲ್ಯಾಣ: ವೈದ್ಯರ ಜೀವ ಕಾರುಣ್ಯದಿಂದ ಲೋಕದ ಜೀವಂತಿಕೆ ಅಡಗಿದೆ. ವೈದ್ಯರಿಲ್ಲದ ಜಗತ್ತು ಭಾವಿಸಲು ಅಸಾಧ್ಯ ಎಂದು ಮರುಳ ಶಂಕರದೇವ ಗುರುಪೀಠದ ಪೂಜ್ಯ ಶ್ರೀ ಸಿದ್ಧಬಸವ ಕಬೀರ ಮಹಾಸ್ವಾಮಿಗಳು ಹೇಳಿದರು.

ನಗರದ ಶ್ರೀ ಬಸವೇಶ್ವರ ಪದವಿ ಪೂರ್ವ, ಪದವಿ ಮತ್ತು ಅಕ್ಕಮಹಾದೇವಿ ಕಾಲೇಜಿನಲ್ಲಿ ಬಸವ ಜಯಂತಿ ಮತ್ತು ಮಹಾತ್ಮಾ ಬಸವೇಶ್ವರರ 76ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ತಜ್ಞ ವೈದ್ಯರ ಪರಿಣಿತಯಿಂದ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದರಿಂದ ಜೀವ ಉಳಿಯುವುದು ಎಂದರು.

ಸೋಲಾಪುರದ ನರರೋಗ ತಜ್ಞ ಡಾ. ಅಶ್ವಿನ ವಳಸಂಗಕರ ಮಾತನಾಡಿ, ಬಸವಕಲ್ಯಾಣ ನನಗೆ ಅತ್ಯಂತ ಗೌರವದ ಸ್ಥಳ. ಬಸವಣ್ಣನವರ ಹೆಸರಿನಲ್ಲಿ ಇಲ್ಲಿ ಮಾಡುತ್ತಿರುವ ಸಮಾಜ ಸೇವೆ ಸ್ಮರಣೀಯ. ಇಡೀ ಬೀದರ್ ಜಿಲ್ಲೆಯ ಜನತೆ ನಮ್ಮ ಮೇಲೇ ಇಟ್ಟಿರುವ ನಂಬಿಕೆ ನನ್ನಲ್ಲಿ ಕೌಟುಂಬಿಕ ಭಾವನೆ ಮೂಡಿಸಿದೆ ಎಂದರು.

ಹೃದಯ ರೋಗ ತಜ್ಞ ಡಾ. ಶಂಕರಗೌಡ ಹೊಸಗೌಡ್ರು ಮಾತನಾಡಿ, ಚಟುವಟಿಕೆಯಿಂದ ಇರುವುದು ಮತ್ತು ಉತ್ತಮ ಜೀವನ ಶೈಲಿಯಿಂದ ಆರೋಗ್ಯಕರ ಬದುಕಿಗೆ ದಾರಿಯಾಗಿದೆ ಎಂದು ಹೇಳಿದರು.

ಪ್ರವೀಣ್‌ಕುಮಾರ್ ಎಸ್.ಮಹೇಂದ್ರಕರ್ ಆರೋಗ್ಯ ವಿಮೆ ಕುರಿತು ಮಾಹಿತಿ ನೀಡಿ, ಮೂರು ಕೋಟಿ ರೂಪಾಯಿ ವರೆಗೂ ಆರೋಗ್ಯ ವಿಮೆ ಯೋಜನೆ ಜಾರಿಗೆ ಬಂದಿದ್ದು ನೋಡಿದ್ದೇವೆ. ಆರೋಗ್ಯ ವಿಮೆ ಅನಾರೋಗ್ಯ ಕಾಲದ ಸಂಜೀವಿನಿ ಎಂದರು.

ಬಿಡಿವಿಸಿ ಉಪಾಧ್ಯಕ್ಷ ಡಾ. ಜಿ. ಎಸ್ ಭೂರಳೆ ಮಾತನಾಡಿ, ನಮ್ಮ ಭಾಗದ ಜನರಿಗೆ ಅನುಕೂಲ ಆಗಲು ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ, ಕೋಶಾಧ್ಯಕ್ಷ ಜಗನ್ನಾಥ ಖೂಬಾ, ಕಾರ್ಯದರ್ಶಿ ಅಶೋಕ ನಾಗರಾಳೆ ,
ಸಹ ಕಾರ್ಯದರ್ಶಿ ಸುನೀಲ ರಾಯವಾಡೆ , ನಿರ್ದೇಶಕರಾದ ಬಸವರಾಜ ಕೋರಕೆ,
ಈರಣ್ಣಾ ಹಲಶೆಟ್ಟೆ,
ಭದ್ರಿನಾಥ ಪಾಟೀಲ ,
ವಿವೇಕಾನಂದ ಹೊದಲೂರೆ
ಬಸವರಾಜ ತೊಂಡಾರೆ,
ಮಲ್ಲಿಕಾರ್ಜುನ ಚಿರಡೆ
ಸುನೀಲಕುಮಾರ ಹೊಳಕುಂದೆ,
ರಾಜಕುಮಾರ ಹೊಳಕುಂದೆ,
ಪುಷ್ಪಾವತಿ ಮಾಮಾ,
ಬಿಡಿವಿಸಿ ಕಾರ್ಯದರ್ಶಿ ನಾಗಯ್ಯಾ ಸ್ವಾಮಿ,
ಶಿವರಾಜ ಶಾಶೆಟ್ಟಿ , ಸೋಮಶೇಖರಯ್ಯಾ ವಸ್ತ್ರದ ಮೊದಲಾದವರಿದ್ದರು.
ತಜ್ಞ ವೈದ್ಯರಾದ ಡಾ. ನಾಗರಾಜ್ ಕೋಟ್ಲಿ, ಡಾ. ಕೈಲಾಶ್ ಬಿ ಬನ್ನಾಳೆ, ಡಾ.ಶ್ರೀನಿವಾಸ್ ಕಳ್ಳಿಗುಡ್ಡ,
ಡಾ. ಅಜಯ್ ಕುರಕೋಟೆ, ಡಾ. ಸದಾನಂದ ಪಾಟೀಲ್ ,ಡಾ. ಪ್ರಥ್ವಿರಾಜ್ ಬಿರಾದಾರ,
ಡಾ. ಸಂದೀಪ್ ರಂಗದಳ,
ಡಾ. ಶರಣ್ ಸುಲೇಪೆಟ್ ,
ಶ್ರೀಧರ್ ಎಂ.ಎಸ್.
ಡಾ. ಸ್ಮಿತಾ ಕಳ್ಳಿಗುಡಿ , ಡಾ . ಧನರಾಜ ಚಂದನಕೇರೆ ಮೊದಲಾದ ತಜ್ಞ ವೈದ್ಯರು ಹಲವಾರು ರೋಗಗಳಿಗೆ ತಪಾಸಣೆ ನಡೆಸಿದರು.

ಆರೋಗ್ಯ ತಪಾಸಣೆ :
109 ನರರೋಗ, 38 ಹೃದಯ, 85 ಕೀಲು ಮೂಳೆ , 71 ನೇತ್ರ, 16 ಮೂತ್ರ ಪಿಂಡ, 122ಜನ ಎಲುಬಿನ ಸಾಂದ್ರತೆಯು, 44 ಗ್ಯಾಸ್ಟ್ರಿಕ್ ತಪಾಸಣೆ ಮಾಡಲಾಯಿತು.
94 ಜನರು ರಕ್ತದಾನ ಮಾಡಿದರು.

ಸಹಕಾರ್ಯದರ್ಶಿ ಶ್ರೀ ಬಸವರಾಜ ಬಾಲಕೀಲೆ ಸ್ವಾಗತಿಸಿದರು. ಜ್ಯೋತಿ ತುಗಾವೆ ನಿರೂಪಿಸಿದರು.

ವರದಿ ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!