ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅದ್ದೂರಿಯಾಗಿ ಜರುಗಿದ ಶ್ರೀ ಭೀಮಾಂಬಿಕಾದೇವಿಯ ಪಂಚಕಳಸದ ರಥೋತ್ಸವ

ಕೊಪ್ಪಳ/ ಕುಕನೂರ : ತಾಲೂಕಿನ ಭಟಪನಹಳ್ಳಿಯ ಶ್ರೀ ಭೀಮಾಂಬಿಕಾದೇವಿಯ ಪಂಚಕಳಸದ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಶ್ರೀ ಭೀಮಾಂಬಿಕಾದೇವಿಯ ಮಠದಲ್ಲಿ 29 ನೇ ಜಾತ್ರಾ ಮಹೋತ್ಸವ ಅಂಗವಾಗಿ ಪುರಾಣ ಕಾರ್ಯಕ್ರಮ ಸಾಗಿ ಬಂದವು. ಪ್ರತಿದಿನ ಬೆಳಗಿನ ಜಾವ ಶ್ರೀ ಭೀಮಾಂಬಿಕಾದೇವಿಗೆ ಪೂಜಾ ವಿಧಾನಗಳು ಜರುಗಿ ಮಧ್ಯಾಹ್ನ 12.30 ಕ್ಕೆ ಸಾಮೂಹಿಕ ವಿವಾಹಗಳು ಜರುಗಿದವು.
ಕಾಗಿನೆಲೆಯ ಜಗದ್ಗುರು ನಿರಂಜನಾನಂದಾಪುರಿ ಸ್ವಾಮೀಜಿ, ಶಿರಹಟ್ಟಿಯ ಫಕೀರಸ್ವಾಮೀಜಿ, ಕುಕನೂರಿನ ಡಾ.ಮಹಾದೇವ ಸ್ವಾಮೀಜಿ, ಯಲಬುರ್ಗಾದ ಬಸವಲಿಂಗೇಶ್ವರ ಸ್ವಾಮೀಜಿ ,ಮಂಗಳೂರಿನ ಸಿದ್ದಲಿಂಗ ಸ್ವಾಮೀಜಿ, ತುರ್ವಿಹಾಳದ ಮಾದಯ್ಯ ಸ್ವಾಮೀಜಿ, ದಮ್ಮೂರಿನ ಹನುಮಂತಪ್ಪಜ್ಜ ಧರ್ಮರ, ಮಲ್ಲನಕೇರಿಯ ಚೆನ್ನಬಸವ ಸ್ವಾಮೀಜಿ, ಕಂಪಸಾಗರದ ನಾಗಭೂಷಣ ಸ್ವಾಮೀಜಿ ಸೇರಿದಂತೆ ಗುರು ಹಿರಿಯರು ನವ ದಂಪತಿಗಳಿಗೆ ಶುಭಕೋರಿದರು.
ಈ ವೇಳೆ ಭಟಪನಹಳ್ಳಿಯ ಶ್ರೀ ಭೀಮಾಂಬಿಕಾದೇವಿಯ ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಗುರು ಹಿರಿಯರು,ರೈತರು ಹಾಗು ಕೊಪ್ಪಳ, ಬಳ್ಳಾರಿ, ಗದಗ, ಧಾರವಾಡ ,ಹುಬ್ಬಳ್ಳಿ ಜಿಲ್ಲೆಯ ಸುತ್ತಮುತ್ತಲಿನ ಭಕ್ತರು ಭಾಗವಹಿಸಿದ್ದರು. ನಂತರ ಅನ್ನಸಂತರ್ಪಣೆ ಜರುಗಿತು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!