ಯಲಬುರ್ಗಾ: ಪ್ರತಿ ವರ್ಷದ ಪದ್ದತಿಯಂತೆ ಈ ವರ್ಷವೂ ಶ್ರೀ ಮೊಗ್ಗಿ ಬಸವೇಶ್ವರನ ಪಂಚಕಳಸದ ರಥೋತ್ಸವ ಅದ್ದೂರಿಯಾಗಿ ಜರುಗಿತು. ಬೆಳಗಿನ ಜಾವ ಬಸವೇಶ್ವರನಿಗೆ ರುದ್ರಾಭೀಷೇಕ ಪೂಜಾ ವಿಧಾನಗಳು ಜರುಗಿ ಮಧ್ಯಾಹ್ನ 12.30 ಕ್ಕೆ ಸಾಮೂಹಿಕ ವಿವಾಹಗಳು ಜರುಗಿದವು. ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಅವರು ನವ ದಂಪತಿಗಳಿಗೆ ಶುಭಕೋರಿದರು.
ಈ ವೇಳೆ ಶ್ರೀ ಮೊಗ್ಗಿ ಬಸವೇಶ್ವರ ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಪಟ್ಟಣದ ಗುರು ಹಿರಿಯರು, ರೈತರು ಹಾಗೂ ಕೊಪ್ಪಳ, ಗದಗ ಧಾರವಾಡ ,ಹುಬ್ಬಳ್ಳಿ ಜಿಲ್ಲೆಗಳ ಭಕ್ತರು ಭಾಗವಹಿಸಿದ್ದರು.
- ಕರುನಾಡ ಕಂದ ಪತ್ರಿಕೆ




















