ಶಿವಮೊಗ್ಗ : ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘ ನಿ, ಶಿವಮೊಗ್ಗ ವತಿಯಿಂದ 2026ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ, 10ನೇ ತರಗತಿ (ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ). ದ್ವಿತೀಯ ಪಿಯುಸಿ ಹಾಗೂ 12ನೇ ತರಗತಿ (ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ) ಪರೀಕ್ಷೆಯಲ್ಲಿ ಶೇಕಡಾ 90ಕ್ಕೂ ಅಧಿಕ ಅಂಕ ಪಡೆದ ಸಹಕಾರಿಯ ಸದಸ್ಯರ ಮಕ್ಕಳಿಗೆ ಮಾತ್ರ ಪ್ರತಿಭಾ ಪುರಸ್ಕಾರಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ: 15-06-2026ರೊಳಗೆ ಈ ಮುಂದಿನ ಲಿಂಕನ್ನು ಬಳಸಿ bit.ly/empsouhardashimoga ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಕಛೇರಿ ಮೊಬೈಲ್ ಸಂಖ್ಯೆ: 7676245604 ಹಾಗೂ ಎನ್.ಎಂ.ರಂಗನಾಥ: 9916278470 ಇವರನ್ನು ಸಂಪರ್ಕಿಸಲು ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಆರ್.ಮೋಹನ್ ಕುಮಾರ್ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್ , ಶಿವಮೊಗ್ಗ




















