ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ನೇಹ ಮಿಲನ ಕಾರ್ಯಕ್ರಮ

ಬೆಂಗಳೂರು: ಬೆಂಗ್ಳೂರ್‌ ಹೈಸ್ಕೂಲ್‌ ಹೈಕ್ಳು ಟ್ರಸ್ಟ್‌ (ರಿ.) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ನೇಹಮಿಲನ ಕಾರ್ಯಕ್ರಮವನ್ನು ಸ್ವಾಮಿ ವೀರೇಶಾನಂದ ಸರಸ್ವತೀಯವರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.

ಬಿ ಹೆಚ್‌ ಎಸ್‌ ಶಾಲೆಯ ಹಿರಿಯ ವಿದ್ಯಾರ್ಥಿಗಳ ಈ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀ ಬಿ ವಿ ನಾಗರಾಜ್‌ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ನಾಡಿನ ಜನಪ್ರಿಯ ವ್ಯಕ್ತಿಗಳು, ಶಾಲೆಯ ಹಿರಿಯ ವಿದ್ಯಾರ್ಥಿಗಳೂ ಆದಂತಹ ವಿ ಟಿ ಯು ಕುಲಪತಿ ಡಾ. ಎಸ್‌ ವಿದ್ಯಾಶಂಕರ್.‌ ನಟ ನಿರ್ದೇಶಕ ಬಿ ಸುರೇಶ, ಶಿಲ್ಪಿ ಶ್ರೀ ಎನ್ ಶಿವದತ್ತ,‌ ಹೆಸರಾಂತ ಸಂಗೀತಗಾರರಾದ ವಿದ್ವಾನ್‌ ಡಿ ಎಸ್‌ ಶ್ರೀವತ್ಸ, ಸಮಾಜಸೇವಕರಾದ ಪಿ ಎನ್‌ ಸದಾಶಿವ, ಆರಕ್ಷಕ ಅಧಿಕಾರಿ ಶ್ರೀ ಕೃಷ್ಣಪ್ಪ, ಜಿ ಎಸ್‌ ಟಿ ಸಹಾಯಕ ಆಯುಕ್ರ ಪ್ರಸನ್ನ ಕುಮಾರ್‌ ಅವರನ್ನು ಸ್ವಾಮಿ ವೀರೇಶಾನಂದ ಸರಸ್ವತಿ, ಶ್ರೀ ಬಿ ವಿ ನಾಗರಾಜ ಹಾಗೂ ರಾ ಸು ವೆಂಕಟೇಶ ಅವರು ಸೇರಿ ಸನ್ಮಾನಿಸಿದರು.

ಇದಕ್ಕೆ ಮುನ್ನ ಸವಿಗಾನ ಮಂಜುನಾಥ ಹಾಗೂ ರಾಜೀವ ಅಗಳಿ ತಂಡದವರಿಂದ ಕವಿಕಾವ್ಯ ಆಧಾರಿತ ಗೀತೆಗಳ ಗಾಯನ ಇತ್ತು, ಪ್ರಾಸ್ತಾವಿಕ ನುಡಿಗಳಲ್ಲಿ ಟ್ರಸ್ಟ ನ ಅಧ್ಯಕ್ಷರಾದ ರಾ ಸು ವೆಂಕಟೇಶ ಅವರು ಟ್ರಸ್ಟ್‌ ನಡೆದು ಬಂದ 11 ವರ್ಷಗಳ ಹಾದಿಯನ್ನು ವಿವರಿಸಿ, (2016ರ ಗುರುನಮನ, ಬಿ ವಿ ಎನ್‌ 75, ರಸಮಂಜರಿ) ಇನ್ನೂ ಇಂತಹ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಟ್ರಸ್ಟ್‌ ಮುಂದೆಯೂ ಮಾಡಲಿದೆ ಎಂದು ತಿಳಿಸಿದರು.

  • ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!