ಹಣ್ಣುಗಳ ರಾಜ ಎಂಬ ಪ್ರತೀತಿಯ ಹಣ್ಣು
ವಿಭಿನ್ನ ಹೆಸರು ಆಕಾರ ಬಣ್ಣಗಳ ಹಣ್ಣು
ಎಲ್ಲರನು ಆಕರ್ಷಿಸಿ ಮನಸೆಳೆವ ಹಣ್ಣು
ಚಪ್ಪರಿಸಿ ತಿನ್ನಲೇಬೇಕೆನಿಸುವ ವಿಶೇಷ ಹಣ್ಣು
ಕಲಾಸಕ್ತರಿಗೆ ಸಿಪ್ಪೆ ಓಟೆಗಳ ಮೇಲೆ ಸದಾ ಕಣ್ಣು
ಕ್ರಿಯಾಶೀಲ ಚಿಂತನೆಯ ತುರಿಯಲಿ ವೃತ್ತವು
ಕಿರೀಟದಲಿ ಕತ್ತರಿಸಿದ ತಲೆಯ ಭಾಗವು
ಕೆಳಗೆ ತೂಗಾಡಿದೆ ಸವಿದ ಓಟೆಯು
ಸಿಪ್ಪೆಯ ಗರಿಗಳಲಿ ಸರಳ ಅಲಂಕಾರವು
ಸುಲಲಿತ ಕಾವ್ಯ ಚಿತ್ತಾರದಲಿ ಸುಪ್ರಭಾತವು
- ಲಲಿತಾ ಕೆ ಆಚಾರ್, ಬೆಂಗಳೂರು




















