ನನ್ನದೇ ಸರಿ ಎಂಬ ಮೊಂಡು ವಾದ
ಸಹಿಸದ ಮನಸ್ಥಿತಿ
ಅನಗತ್ಯ ವಿಚಾರವೇ
ಸಾಂಗತ್ಯ ಮರೆತು ಹೋಗಿ
ಅಗತ್ಯತೆಯ ಬಳುವಳಿ
ಸತ್ಯಾ ಸತ್ಯದ ಅರಿವಿಲ್ಲದೆ
ನಾನೆಂಬ ಮೇರು ಪರ್ವತ ಹತ್ತಿ
ಅಂತರಂಗ ಮೃದಂಗ ಮರೆತು
ಭವಾಂತರಂಗದಿ ಬೆರೆತು
ದ್ವೇಷದ ಕಿಚ್ಚು ಹಚ್ಚಿ
ಪ್ರೇಮ ಪ್ರಣತಿ ಮುಚ್ಚಿ
ಮೋಹದ ಮದದಿ ಚುಚ್ಚಿ
ಪ್ರತೀಕಾರದ ಕೂಗು
ಭೀತಿಯ ಹುಟ್ಟಿಸುತ
ನೀತಿ ನಿಯಮ ಮೀರಿ.
- ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರು.




















