ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.

ಆಸ್ತಿ15 .

ನಮ್ಮ ತಂದೆಯವರಿಗೆ ಅವರ ಪ್ರಥಮ ಸಂಬಳವು 1938 ಜನೆವರಿ ಮೊದಲ ತಾರೀಕಿನಂದು ಬಂದಿತು, ಒಟ್ಟು ರೂಪಾಯಿ 18 /- ( ಅವರ ಸ್ಕೇಲ್ 18-½-28. ) ಅದನ್ನು ಅವರು ಒಯ್ದು ಅವರ ತಾಯಿಗೆ ಕೊಟ್ಟರು. ಅವರ ತಾಯಿಯವರು ಹಣವನ್ನು ಇಸಿದುಕೊಂಡು, ಕೂಡಲೇ ಅದನ್ನು ನಮ್ಮ ತಂದೆಗೆ ಕೊಟ್ಟು, ಆ ಹಣವನ್ನು ತಮ್ಮ ಹತ್ತಿರ ಇಟ್ಟುಕೊಳ್ಳಲು ಬಯಸುವದಿಲ್ಲವೆಂದು ತಿಳಿಸಿದರು. ಅವರು ಮಗನಿಗೆ ಹಣದ ಖರ್ಚು ವೆಚ್ಚದ ವಿವರಗಳನ್ನು ಬರೆದಿಡಲು ತಿಳಿಸಿದರು. ನಮ್ಮ ತಂದೆಯವರು ಇದಕ್ಕೆ ಒಪ್ಪಿದರು, ಆದರೆ ಸ್ವಲ್ಪ ಹಣವನ್ನು ತಾಯಿ ತಮ್ಮ ಸ್ವಂತದ ಖರ್ಚಿಗೆ ಇಟ್ಟುಕೊಳ್ಳಬೇಕೆಂದು ವಿನಂತಿಸಿಕೊಂಡರು. ಹೀಗೆ ಅವರು ಪ್ರತಿ ತಿಂಗಳೂ ಎಂಟಾಣೆ ಯನ್ನು ಅವರಿಗೆ ಕೊಡುತ್ತಿದ್ದರು. ಸ್ವಲ್ಪ ಸಮಯದ ನಂತರ ಅದು ಒಂದು ರೂಪಾಯಿ ಆಗಿ ಮುಂದೆ ಅದು ಎರಡು ರೂಪಾಯಿ ಆಯಿತು. ಅವರು ಅದರಲ್ಲಿ ಸ್ವಲ್ಪ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿ ಅಥವಾ ಮೊಮ್ಮಕ್ಕಳಿಗೆ ಉಡುಗೊರೆಯಾಗಿ ಕೊಡಲು ಉಪಯೋಗಿಸುತ್ತಿದ್ದರು.

ತಮ್ಮ ಮೊದಲ ಸಂಬಳದಲ್ಲಿ ನಮ್ಮ ತಂದೆಯವರು ರೂಪಾಯಿ 5/- ನ್ನು ಅವರ ಹಿರಿಯ ಅಣ್ಣನಿಗೆ ಕಳುಹಿಸಿ ಕೊಟ್ಟರು. ಅವರ ಅಣ್ಣನು ಇವರಿಗಿಂತ ಕಡಿಮೆ, ಅಂದರೆ ರೂಪಾಯಿ 12/- ( ಶಾಲಾ ಶಿಕ್ಷಕರಾಗಿ) ಸಂಬಳ ಪಡೆಯುತ್ತಿದ್ದರು.

ತಮ್ಮ ಮೊದಲ ಸಂಬಳವನ್ನು ಪೋಷಕರಿಗೆ ಕೊಡಬೇಕೆನ್ನುವ ಆಲೋಚನೆಯೇ ಒಂದು ದೊಡ್ಡ ಆಸ್ತಿ. ಈ ಪರಂಪರೆಯು ದೊಡ್ಡ ಮಟ್ಟದಲ್ಲಿ ಈಗ ಇಲ್ಲದಿದ್ದರೂ ಇನ್ನೂ ಆಚರಣೆಯಲ್ಲಿದೆ. ತಮ್ಮ ಪ್ರಥಮ ಸಂಬಳದಲ್ಲಿ ಪೋಷಕರಿಗೆ ಏನಾದರೂ ಉಡುಗೊರೆ ಕೊಡುವ ಸಂಪ್ರದಾಯವಿದೆ.

Asset 15

ಒಳ್ಳೆಯ ಸಂಸ್ಕಾರವೂ ದೊಡ್ಡ ಅಸ್ತಿ. ಅದು‌ ನಮ್ಮ ಮಾತಾಪಿತೃಗಳಿಂದ ನಮಗೆ ದೊರೆತಿದೆ.

  • Smt. Ratnamurthy.

· ಆಸ್ತಿ 15. ಉಳಿತಾಯದ ನಂತರ ಖರ್ಚು ಮಾಡಲು ಯಾವಾಗಲೂ ನನ್ನ ತಂದೆಯವರು ಹೇಳುತ್ತಿದ್ದರು ಹಾಗೂ ಅದನ್ನು ಈಗಲೂ ಪಾಲಿಸಿಕೊಂಡು ಬಂದಿದ್ದೇನೆ.

  • ವಾದಿರಾಜ ಎ ಅಥಣಿಕರ ಧಾರವಾಡ.

· ಆಸ್ತಿ 15.
ಈಗಿನ ದಿನಮಾನಗಳಲ್ಲಿ ಇಂಥ ಸಂಗತಿಗಳನ್ನು ಊಹಿಸುವದೂ ಕಷ್ಟ.

  • ಲಕ್ಷ್ಮಿಕಾಂತ ಆರ್ ದೇಶಪಾಂಡೆ, ಹುಬ್ಬಳ್ಳಿ

· ಆಸ್ತಿ 15. ನಿಮ್ಮ ತಂದೆಯವರು ತಮ್ಮ ಅಣ್ಣನಿಗೆ ದುಡ್ಡು ಕಳಿಸಿದ್ದು ಅತ್ಯಂತ ಸಮಂಜಸವಾಗಿದೆ. ನಮ್ಮ ತಂದೆಯವರು ತಮ್ಮ ಅಣ್ಣನಿಗೆ ದುಡ್ಡು ಕಳಿಸುತ್ತಿರುವುದು ನನಗೆ ಈಗಲೂ ನೆನಪಿದೆ. ಇದು ಹಿರಿಯರಿಗೆ ತೋರುವ ಗೌರವವಾಗಿದೆ.

  • ಎಸ್ ಕೆ ರಮೇಶ್ ,ನಿವೃತ್ತ ಡಿ.ಜಿ.ಎಂ,.
    ಬೆಂಗಳೂರು–೬೧.

ಹೌದು . ನಾನು ಮದುವೆಯಾಗಿ ಬಂದ ನಂತರ , ಹಾಡಿದ ಪ್ರಥಮ ಕಾರ್ಯಕ್ರಮದಲ್ಲಿ ಬಂದ ಅಷ್ಟೂ ಹಣವನ್ನು ನನ್ನ ಅತ್ತೆಯವರಿಗೆ ಕೊಟ್ಟೆ. ನನ್ನ ಮೊಮ್ಮಗಳು , ಅವಳಿಗೆ ಬಂದ ಮೊದಲ ಸಂಬಳದ ಹಣದಲ್ಲಿ ನನಗೆ ರೇಷ್ಮೆ ಸೀರೆ ಶಂಕರ್ ಅವರಿಗೆ ಪ್ಯಾಂಟ್ ಶರ್ಟ್ ಬಟ್ಟೆ , ನಮ್ಮ ಮದುವೆಯ ದಿನದಂದು ಅಂದರೇ ವಿಜಯ ದಶಮಿಯಂದು ಕೊಟ್ಟಳು. ಆದರೆ ಇದು ಸಂಪ್ರದಾಯ ಎಂದು ನನಗೂ ,ಅವಳಿಗೂ ತಿಳಿದಿಲ್ಲ. ಒಟ್ಟಿನಲ್ಲಿ ಹಿರಿಯರಿಗೆ ಕೊಟ್ಟು ಆಶೀರ್ವಾದ ಪಡೆಯಬೇಕೇಂಬುದು ಮನದಲ್ಲಿ ಹೊಳೆದದ್ದು.

  • Smt Kasturi Shankar, ಪ್ರಸಿದ್ಧ ಗಾಯಕಿ Bangalore-6.

· ಬಹಳೇ ಚೆನ್ನಾಗಿ ಬಂದಿದೆ. ಆಗಿನವರು ಆಸ್ತಿ ಮತ್ತು ಹಣ ದಲ್ಲಿ ನಿರಾಸಕ್ತಿ. ಅವರಿಗೆ ಸಂತೃಪ್ತಿ ಮತ್ತು ಮೊಸರಹಿತ ಜೀವನ ಶ್ರೇಷ್ಠ ಎನಿಸಿತ್ತು.

  • Srinivas gangur

· Asset 15 Nange yestu kushi aagide andre ಆಸ್ತಿ ಅಂದಾಕ್ಷಣ ಎಲ್ಲರೂ ಹೊಲ ಮನೆ ಪಾಲುದಾರಿಕೆ ಅಂತ ದ್ವೇಷ ಅಸುಯ್ಯ ವೆ ಇತ್ತು ಆದರೆ ಆಸ್ತಿ ಅಪ್ಪ ಅಮ್ಮ ಅಂತ ನವೀನ ಮಾದರಿಯ ಪುಸ್ತಕ ಮನಸ್ಸಿಗೆ ಶಾಂತಿ ಸಂತೋಷ ದ ಜೊತೆ ಸಂಬ್ರಮ ಅನಿಸುತ್ತಾ ಇದೆ Sir beautiful aasti 10. ಆಗಲೇ ನಲಿಕಲಿ ಇದೆ Sir yestu Jana ಪಾಲು ಗೊಂಡಿದ್ದಾರೆ ಸೂಪರ್ Sir yestu ದುಡ್ಡು ಕೊಟ್ಟರೂ ಸಿಗದು ಬಾಲ್ಯ ಅದು ಅಂತ ಅಪ್ಪ ಅಮ್ಮನ ಜೊತೆ Wow ಎಕ್ಸಲೆಂಟ್ ಎಂಥಾ ಭಾವನಾತ್ಮಕ ಚಿಂತನೆ.

  • By Smt Sridevi Prabhakar, Teacher, Zaheerabad, Raichur

· Asset 15 ಗುರು ಹಿರಿಯರಿಗೆ ತೋರು ನೀ ಆದರವ ಬೆಳಗುವುದು ಅದು ನಿನ್ನಿಳಿ ಸಂಜೆಯನು.- ಗೀತಾ ಇದ್ದಲಗಿ, Hungund

  • ಪ್ರಮೋದ್ ಕುಲಕರ್ಣಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!