ವಿದ್ಯೆ ಜೊತೆಗೆ ವಿನಯವ ಕಲಿಸಿ
ಜ್ಞಾನ ಮಾರ್ಗದಲ್ಲಿ ನಡೆಸಿದಾತ
ಅಜ್ಞಾನ ಎಂಬ ಕತ್ತಲೆಯನ್ನು ಅಳಿಸಿ
ಸುಜ್ಞಾನ ಎಂಬ ಬೆಳಕನ್ನು ಕರುಣಿಸಿದಾತ
ಭಯದ ಜೊತೆ ಭಕ್ತಿಯ ತುಂಬಿ
ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳುವಂತೆ ಮಾಡಿದಾತ
ಎಲ್ಲರೊಡನೆ ಬೆರೆತು ಕಲಿಕೆಯಲ್ಲಿ ತೊಡಗುವಂತೆ ಮಾಡಿದನು ಈತ
ಸಮಯದ ಜೊತೆಗೆ ಸಂಸ್ಕಾರ ಕಲಿಸಿ
ಗುಣಮಟ್ಟದ ಶಿಕ್ಷಣವನ್ನು ನೀಡಿದಾತ
ಗುರು ಹಿರಿಯರೆಂಬ ಭಾವನೆಯನ್ನು ಮೂಡಿಸಿದಾತ
ಎಲ್ಲರ ಭವಿಷ್ಯಕ್ಕೆ ಕಾರಣವಾದ ಗುರುವೇ ಈತ
-ಚಂದ್ರಶೇಖರಚಾರಿ ಎಂ,ಶಿಕ್ಷಕರು