ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ದಲಿತ ಮುಖಂಡರನ್ನು ರಾಜ್ಯದಲ್ಲಿ ಉಳಿಸಿಕೊಳ್ಳಲು ಮನವಿ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಪ್ರವಾಸಿ ಮಂದಿರದಲ್ಲಿ ದಲಿತ ಒಕ್ಕೂಟಗಳಿಂದ ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್ ಸಿ ಮಹಾದೇವಪ್ಪ ಇವರನ್ನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿಕ್ಕೆ ಒತ್ತಡ ಹೇರುತ್ತಿರುವುದನ್ನು ತಡೆಗಟ್ಟುವ ಬಗ್ಗೆ ಸುದ್ದಿಗೋಷ್ಠಿ ನಡೆಸಿದರು.
ಇಡೀ ರಾಜ್ಯದ ಶೋಷಿತ ಹಾಗೂ ತುಳಿತಕ್ಕೆ ಒಳಪಟ್ಟಿರುವ ದಮನಿತರ ಸಮುದಾಯಗಳ ನಾಯಕರು ಪ್ರತಿ ಬಾರಿ ಕೂಡಾ ಮುಖ್ಯಮಂತ್ರಿ ಸ್ಥಾನದವರೆಗೆ ದಲಿತ ಮುಖಂಡರುಗಳು ದುಡಿಯುತ್ತಾರೆ ಇನ್ನೇನು ಮುಖ್ಯಮಂತ್ರಿ ಸ್ಥಾನ ದೊರೆಯುತ್ತದೆ ಎಂದು ಆಶಯ ಹೊತ್ತ ದಲಿತರಿಗೆ ನಿರಾಶೆ ಉಂಟಾಗುತ್ತದೆ ಈ ಹಿಂದೆ ಸನ್ಮಾನ್ಯ ಶ್ರೀ ಕೆಪಿಸಿಸಿ ರಾಷ್ಟ್ರಾಧ್ಯಕ್ಷರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಅವರು ಮುಖ್ಯಮಂತ್ರಿ ಆಗುವ ಕನಸು ಹೊತ್ತ ದಲಿತರಿಗೆ ನಿರಾಶೆಯ ಭಾವನೆ ಉಂಟುಮಾಡಿದೆ ಅವರನ್ನು ದಿಢೀರನೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದು ಸಂತೋಷದ ಸಂಗತಿ ಆದರೆ ಮುಖ್ಯಮಂತ್ರಿ ಆಗಲಿಲ್ಲ ಎಂಬ ಕೊರಗು ದಲಿತರನ್ನು ಇಂದಿಗೂ ಕಾಡುತ್ತದೆ ಇದಕ್ಕೆ ಅವಕಾಶ ಏಕೆ ತಪ್ಪುತ್ತದೆ ಎಂಬ ಕೊರಗು ಇಂದಿಗೂ ಇದೆ ಎಂದು ಅಜ್ಜಯ ಹೊಟ್ಟೇರ್ ತಿಳಿಸಿದರು.
ನಾನು ಮತ್ತು ನಮ್ಮ ದಲಿತರು ಕೆಪಿಸಿಸಿ ಅಧ್ಯಕ್ಷರಲ್ಲಿ ಹಾಗೂ ಡಿಕೆ ಶಿವಕುಮಾರ್ ಮತ್ತು ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಕೇಳಿಕೊಳ್ಳುವುದೇನೆಂದರೆ ದಯಮಾಡಿ ತಾವುಗಳು ಅರ್ಹತೆ ಇರುವ ದಲಿತ ನಾಯಕರಿಗೆ ಒಂದು ಬಾರಿಯಾದರೂ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕೇಳುತ್ತಾ ಹೆಚ್ ಸಿ ಮಹಾದೇವಪ್ಪ,ಜಿ ಪರಮೇಶ್ವರ್ ಹಾಗೂ ಕೆ ಎಚ್ ಮುನಿಯಪ್ಪ ಇವರನ್ನು ಲೋಕಸಭೆ ಚುನಾವಣೆ ಸ್ಪರ್ಧೆಯಿಂದ ದೂರವಿರಿಸಿ ರಾಜ್ಯದಲ್ಲಿಯೇ ಅವರನ್ನು ಅತ್ಯಂತ ಎತ್ತರಕ್ಕೆ ಬೆಳೆಸಬೇಕು ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಎಂದು ಹನುಮಂತಪ್ಪ ಟಿ ವಕೀಲರು ತಿಳಿಸಿದರು.
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಪತ್ರಕರ್ತ ಮಾರೇಶ್ ರಾಜ್ಯದಲ್ಲಿರುವ ದಲಿತ ನಾಯಕರನ್ನು ಪದೇಪದೇ ಲೋಕಸಭೆ ಚುನಾವಣೆ ಸ್ಪರ್ಧಿಸಿ ಕೇಂದ್ರ ಸ್ಥಾನಕ್ಕೆ ಕಳಿಸುವುದರಿಂದ ರಾಜ್ಯದಲ್ಲಿ ದಲಿತ ನಾಯಕರ ಕೊರತೆ ಎದ್ದು ಕಾಣುತ್ತದೆ ಎಂದು ಇದಕ್ಕೆ ಅವಕಾಶ ನೀಡಬೇಡಿ ಎಂದು ತಿಳಿಸಿದರು.
ಎಸ್ ಸಿ ಮಾದೇವಪ್ಪ,ಕೆಎಚ್ ಮುನಿಯಪ್ಪ ಹಾಗೂ ಜಿ ಪರಮೇಶ್ವರ್ ಇವರನ್ನು ಹೊರತುಪಡಿಸಿ ದಲಿತ ಯುವ ದಲಿತ ಯುವ ಮುಖಂಡರಿಗೆ ಲೋಕಸಭೆ ಚುನಾವಣೆಯಲ್ಲಿ ಅವಕಾಶ ನೀಡಬೇಕೆಂದು ಹೊಸಪೇಟೆ ತಾಲೂಕು ಅಧ್ಯಕ್ಷರಾದ ರಮೇಶ್ ರವರು ನಮ್ಮ ಸುದ್ದಿ ಮಾಧ್ಯಮದೊಂದಿಗೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ಹನುಮನ ಗೌಡ ಸಿ ಎಂ, ಮಂಜುನಾಥ ಮತ್ತಳ್ಳಿ,ಕೆಂಚಪ್ಪ ಆರ್‌ಟಿಐ ಕಾರ್ಯಕರ್ತರು ಪರಶುರಾಮ್ ಕೊಲ್ಲರಪ್ಪ ಜಿ ಕೊಟ್ರೇಶ್ ಮತ್ತು ಭರಮಪ್ಪ ಮತ್ತಿತರು ಉಪಸ್ಥಿತರಿದ್ದರು.

ವರದಿ:ವೈ.ಮಹೇಶ್ ಕುಮಾರ್,ಕೊಟ್ಟೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ