ಸುತ್ತಲೂ ಕತ್ತಲು…
ಬೆಳಕೆಂಬ ಭ್ರಮೆಯನು
ನೀರಾಗಿಸುವ ಕತ್ತಲು
ಬದುಕ ಬೇಗೆಯಲಿ
ಬೆಂದು ಬೆಳಕೆಂಬ
ಭಾವವೇ ಕತ್ತಲಾಗಿದೆ
ಬೆಳಕಿನ ಭರವಸೆ
ಪೇಗು ಬಂಧವನ್ನು
ಕಡಿದ್ಹಾಕುವ ಕತ್ತಲು
ಆಸರೆ ಒಲವಿಗಾಗಿರದೆ
ಅವಶ್ಯಕತೆಗಾದಾಗ
ಜೀವನವೇ ಕತ್ತಲಾದ ಭಾವ….
ಕತ್ತಲಿನಿಂದ ಬೆಳಕಿನೆಡೆಗಿನ
ದಾರಿ ಬಹುದೂರ
ಸಾವಿನಾಚೆ ಕೈಬೀಸಿ ಕರೆಯುತಿದೆ….
ಕತ್ತಲು ಬೆಳಕಿನ ನಡುವೆ
ಜೀವನವೇ ನಶ್ವರವೆನಿಸಿ
ಕತ್ತಲಾವರಿಸಿದೆ….
-ಲೋಹಿತೇಶ್ವರಿ ಎಸ್ ಪಿ