ವೀಳ್ಯದೆಲೆ ಬೆಲೆ ಇಳಿಕೆಯಾಗಿದೆ.ಅಡಿಕೆ ಬೆಲೆಯೂ ಸ್ವಲ್ಪ ಇಳಿಕೆಯಾಗಿದೆ.ಅಡಿಕೆ ಸವಿಯಲು ಅಷ್ಟೇ ಅಲ್ಲದೆ ಯಾವುದೇ ಧಾರ್ಮಿಕ ಪೂಜಾ ಕಾರ್ಯಗಳು,ಶುಭ, ಸಮಾರಂಭಗಳು,ಮದುವೆ,ನಡೆಯಬೇಕಾದರೂ ವೀಳ್ಯದೆಲೆ ಅಡಿಕೆ ಬೇಕೇ ಬೇಕು.ಈ ಹಿಂದೆ ವೀಳ್ಯದೆಲೆ ಬಾರಿ ಬೆಲೆ ಏರಿಕೆ ಕಂಡಿತ್ತು.ಈ ಹಿಂದೆ ಚಿಲ್ಲರೆ ದರದಲ್ಲಿ ಒಂದು ಎಲೆ 3-4 ರೂ.ಗೆ ಮಾರಾಟವಾಗಿದೆ.ಈಗ ಒಂದು ಎಲೆ ಸಣ್ಣ ಎಲೆ 1 ರೂ ದೊಡ್ಡದು 2 ರೂ. ಗೆ ಗ್ರಾಹಕರಿಗೆ ಸಿಗುತ್ತಿದೆ.ಈಗ ವೀಳ್ಯದೆಲೆ ಮತ್ತು ಅಡಿಕೆ ಎರಡೂ ಬೆಲೆ ಇಳಿಕೆಯಿಂದಾಗಿ ಎಲೆ ಅಡಿಕೆ ಪ್ರಿಯರಿಗೆ ಬಾಯಿ ಸಿಹಿಯಾಗಿದೆ.
ನೆರೆಯ ರಾಜ್ಯಗಳಿಂದ ವಿಲೇದೆಲೆ ಕರ್ನಾಟಕಕ್ಕೆ ಲಗ್ಗೆ ಇಟ್ಟಿದೆ.ಈ ಹಿನ್ನೆಲೆಯಲ್ಲಿ ರಾಜ್ಯದ ವೀಳ್ಯದೆಲೆ ದರ ಇಳಿಕೆ ಕಾರಣವಾಗಿದೆ ಎನ್ನುತ್ತಾರೆ ಬೆಂಗಳೂರು ಕೆ ಆರ್ ಮಾರುಕಟ್ಟೆ ಎಲೆ ವ್ಯಾಪಾರಿ ನಜಿರ್ ಸಾಬ್
ಕೇರಳ,ಆಂಧ್ರ ಪ್ರದೇಶ,ತೆಲಂಗಾಣ ಸೇರಿದಂತೆ ಇತರೆಡೆ ಉತ್ತಮ ಮಳೆ ಆಗಿದ್ದರಿಂದ ಈ ಬಾರಿ ಉತ್ತಮ ವೀಳ್ಯದೆಲೆ ಫಸಲು ಬಂದಿದೆ ಬೆಲೆ ಇಳಿಕೆಗೆ ಇದು ಕಾರಣವಾಗಿದೆ.
ಇದರಿಂದ ಬರ ಎದುರಿಸುತ್ತಿರುವ ರಾಜ್ಯದ ರೈತರಿಗೆ ಅಂತಾರಾಜ್ಯ ವೀಳ್ಯದೆಲೆ ಬೆಲೆಯ ಪೈಪೋಟಿಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ ಎನ್ನುತ್ತಾರೆ ಬನ್ನಟ್ಟಿ ವಿಲೇದೆಲೆ ಬೆಳೆಗಾರ ನಾಗೇಂದ್ರಪ್ಪ ಹಲವು ವರ್ಷಗಳಿಂದ ಇದೇ ಬೆಳೆಯನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿರುವರಾಜ್ಯದ ವೀಳ್ಯದೆಲೆ ರೈತರು ಕಂಗಾಲಾಗಿದ್ದಾರೆ.
ಕರ್ನಾಟಕದ ರಬಕವಿ,ಬನಹಟ್ಟಿ,ಬಾಗಲಕೋಟೆ, ಪ್ರದೇಸದಲ್ಲಿ ವೀಳ್ಯದೆಲೆ ಬೆಳೆಯಲಾಗಿದೆ.ಹಾಗೆಯೇ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನಲ್ಲಿ ಪಕ್ಕದ ಜಿಲ್ಲೆಯಾದ ಹಾವೇರಿ ಜಿಲ್ಲೆ ರಟ್ಟೇಹಳ್ಳಿ ತಾಲೂಕಿನ ಅಣಜಿ ಗುಡ್ಡದ ಮಾದಾಪುರ ನಾಗವಂದ ಹೊನ್ನಾಳಿ ತಾಲೂಕು ಗೋಪನಹಳ್ಳಿ ಮಾದೇನಹಳ್ಳಿ ಮಲ್ಲಾಪುರ ಬಲಮೂರಿ ಕೋಟೆ ಮಾಲ್ಲೂರು ಈ ಊರುಗಳಲ್ಲಿ ವೀಳ್ಯದೆಲೆ ತೋಟಗಳಲ್ಲಿ ಹೊನ್ನಾಳಿಯು ಕರ್ನಾಟಕದ ಮಧ್ಯಭಾಗ ಆಗಿರುವುದರಿಂದ ನಾನಾ ಜಿಲ್ಲೆಗಳಿಗೆ ಈ ಎಲೆ ಮಾರಾಟವಾಗುತ್ತದೆ ಎನ್ನುತ್ತಾರೆ ಈಗ ಎಲೆ ಮಾರುವುದು ತುಂಬಾ ಕಷ್ಟವಾಗಿದೆ ಎನ್ನುತ್ತಾರೆ ವ್ಯಾಪಾರಿ ಶಾರದಮ್ಮ.
ಬರದ ಮಧ್ಯೆಯೂ ಬೆಳೆ ತೆಗೆದ ವೀಳ್ಯದೆಲೆ ಬೆಳೆಗಾರರಿಗೆ ಈ ಬಾರಿ ತೀವ್ರ ಹೊಡೆತ ಬಿದ್ದಿದೆ.5 ರಿಂದ 7 ಸಾವಿರ ರೂಪಾಯಿವರೆಗೆ ಮಾರಾಟವಾಗುತ್ತಿದ್ದ 10,000 ವೀಳ್ಯದೆಲೆ ಕಟ್ಟಿನ ಬೆಲೆ ದಿಢೀರ್ 2000-ರಿಂದ 3000 ಸಾವಿರ ರೂ.ಗೆ ಕುಸಿದಿದೆ.ಈ ದರ ಪೈಪೋಟಿಗೆ ರಾಜ್ಯದ ರೈತರು ಕಂಗಾಲಾಗಿದ್ದಾರೆ.ಈಗಿನ ಬೆಳೆಗೆ ಬೆಳೆಗೆ ಮಾಡಿದ ಖರ್ಚು ಕೂಡಾ ವಾಪಸ್ ಬರುವುದಿಲ್ಲ ಎಂದು ಹೇಳುತ್ತಾರೆ ಬನ್ನಟ್ಟಿ ವೀಳ್ಯದೆಲೆ ರೈತ ಶಿವಕುಮಾರ್.
ವರದಿ-ಪ್ರಭಾಕರ ಡಿ ಎಂ,ಹೊನ್ನಾಳಿ