ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಂಬೇಡ್ಕರ್ ಪುತ್ಥಳಿ ಅನಾವರಣ : ಅದ್ಧೂರಿಯಾಗಿ ಭಾವಚಿತ್ರ ಮೆರವಣಿಗೆ

ಕಂಪ್ಲಿ: ಡಾ.ಬಿ.ಆರ್.ಅಂಬೇಡ್ಕರ್, ಬಸವ ಜಯಂತ್ಯೋತ್ಸವ ಅಂಗವಾಗಿ ಪಟ್ಟಣದಲ್ಲಿ ಛಲುವಾದಿ ಮಹಾಸಭಾದಿಂದ ಭಾವಚಿತ್ರ ಮೆರವಣಿಗೆ ಇಂದು ಅದ್ಧೂರಿಯಾಗಿ ಜರುಗಿತು.
ಇಲ್ಲಿನ 4ನೇ ವಾರ್ಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದ ಮುಖ್ಯ ರಸ್ತೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಲಾಯಿತು. ನಂತರ ಶಾಸಕ ಜೆ. ಎನ್. ಗಣೇಶ್ ಇವರು ಪುತ್ಥಳಿ ಅನಾವರಣಗೊಳಿಸಿದ ನಂತರ ಮಾತನಾಡಿ, ಅಂಬೇಡ್ಕರ್ ಅವರ ಆದರ್ಶಗಳನ್ನು ಯುವಕರು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು, ಶರಣ, ಸಂತರ ಹಾಗೂ ಮಹಾನೀಯರ ತತ್ವಾದರ್ಶಗಳು ದಾರಿಪೀಪವಾಗಿವೆ ಎಂದರು. ಶಾಲೆ ಬಳಿಯಲ್ಲಿ ಆರಂಭಗೊಂಡ ಮೆರವಣಿಗೆ ಪಟ್ಟಣದ ನಡುವಲ ಮಸೀದಿ, ಡಾ.ರಾಜಕುಮಾರ ಮುಖ್ಯರಸ್ತೆ, ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ, ದಿ.ಪುನೀತ್ ರಾಜಕುಮಾರ್ ವೃತ್ತದ ಮೂಲಕ ನಾಲ್ಕನೇ ವಾರ್ಡ್ ಶಾಲೆ ಬಳಿಯಲ್ಲಿ ಸಮಾವೇಶಗೊಂಡಿತು.
ಈ ಮೆರವಣಿಗೆ ತಾಷಾರಾಂಡೋಲ್, ಧ್ವನಿ ವರ್ಧಕದ ಹಾಡುಗಳಿಗೆ ಯುವಕರು ಹೆಜ್ಜೆ ಹಾಕಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಛಲುವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಸಿ.ಆರ್.ಹನುಮಂತ, ತಾಲೂಕು ಅಧ್ಯಕ್ಷ ಬಿ.ನಾಗೇಂದ್ರ, ಮುಖಂಡರಾದ ಎಂ.ಸಿ.ಮಾಯಪ್ಪ, ಡಾ.ಎ.ಸಿ.ದಾನಪ್ಪ, ಬಿ.ದೇವೇಂದ್ರ, ಸಿ.ಎಚ್.ವಿರುಪಾಕ್ಷಿ, ಮಾನ್ವಿ ಮಹೇಶ, ಹಬೀಬ್ ರೆಹಮಾನ್, ಕರಡಿ ರಘು, ಶಿವು, ಕೆ.ಚನ್ನ, ಎ.ಬಸುವ, ಟಿ.ವಿರುಪಣ್ಣ, ಶಶಿ ದಾಸರ ಅಂಜಿನಿ ಸೇರಿದಂತೆ ಛಲವಾದಿ ಸಮಾಜದವರು ಪಾಲ್ಗೊಂಡಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!