ಯಾದಗಿರಿ/ ಶಹಾಪುರ: ಶ್ರೀಮದ್ ರಂಭಾಪುರಿ ವೀರ ಸಿಂಹಾಸನ ಮಹಾಸಂಸ್ಥಾನದ ಶಾಖಾ ನಾಗಠಾಣ ಹಿರೇಮಠದಲ್ಲಿ ಶ್ರೀ ಷ.ಬ್ರ. ಲಿಂಗೈಕ್ಯ ಮಹಾಂತೇಶ್ವರ ಶಿವಾಚಾರ್ಯರ 11ನೇ ವರ್ಷದ ಪುಣ್ಯಸ್ಮರಣೋತ್ಸವದ ಅಂಗವಾಗಿ ಕರ್ತೃಗದ್ದುಗೆಗೆ ಮಹಾರುದ್ರಾಭಿಷೇಕ ಅಷ್ಟೋತ್ತರ ಶತನಾಮಾವಳಿ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮವು ಇಂದು ನಾಗಠಾಣ ಶ್ರೀ ಮಠದ ಶ್ರೀ ಗಳಾದ ಶ್ರೀ ಷ.ಬ್ರ.ಸೋಮೇಶ್ವರ ಶಿವಾಚಾರ್ಯರ ಸಮ್ಮುಖದಲ್ಲಿ ನೆರವೇರಿತು.
ಶ್ರೀಮಠದ ಶಾಸ್ತ್ರಿಗಳಾದ ಶ್ರೀ ವೇ. ಮೂ.ಶಂಕ್ರಯ್ಯ ಶಾಸ್ತ್ರಿಗಳು ಹಿರೇಮಠ್ ಗೊಂದೇನೂರ್ ಹಾಗೂ
ಶ್ರೀ.ಸೂಗಯ್ಯ ಶಾಸ್ತ್ರಿಗಳು ಹಿರೇಮಠ ಗುಂಡಗುರ್ತಿ ಪೂಜಾ ಕಾರ್ಯ ನೆರವೇರಿಸಿದರು, ಮಠದ ಭಕ್ತರು ಪುಣ್ಯ ಸ್ಮರಣೆಯಲ್ಲಿ ಭಾಗವಹಿಸಿದರು.
ವರದಿ: ಜಗದೀಶ್ ಕುಮಾರ್ ಭೂಮಾ




















