ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಸ್ ಎಸ್ ಎಲ್ ಸಿ ಯಲ್ಲಿ ಅರಳಿದ ಗ್ರಾಮೀಣ ಪ್ರತಿಭೆ ಕೆ. ತನುಶ್ರೀ : ಸಾಧನೆಗೆ ಬಡತನ ಅಡ್ಡಿಯಲ್ಲ ಎಂಬುದನ್ನ ತೋರಿಸಿದ ವಿದ್ಯಾರ್ಥಿನಿ

ಬಳ್ಳಾರಿ / ಕಂಪ್ಲಿ : ಸಾಧನೆಗೆ ಬಡತನ ಅಡ್ಡಿಯಲ್ಲ ಆತ್ಮವಿಶ್ವಾಸವೊಂದಿದ್ದರೆ ಎಂತಹ ಕಾರ್ಯವನ್ನು ಸಾಧಿಸಬಹುದು ಎನ್ನುವುದಕ್ಕೆ ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದು ಎಸ್ ಎಸ್ ಎಲ್ ಸಿ ಯಲ್ಲಿ ಕೋರಿ ತನುಶ್ರೀ ಅತ್ಯುತ್ತಮ ಸಾಧನೆಯೊಂದಿಗೆ ಶಿಕ್ಷಣ ಪ್ರೇಮಿಗಳ ಮನಗೆದ್ದಿದ್ದಾಳೆ.
ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬ ನಾಣ್ಣುಡಿಯಂತೆ ಸತತ ಪ್ರಯತ್ನದಿಂದ ಬಡತನದಲ್ಲೂ ಹತ್ತನೇಯ ತರಗತಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿರುವ ಗ್ರಾಮೀಣ ಪ್ರತಿಭೆ ಕೋರಿ ತನುಶ್ರೀ ಪಾಲಕರ ಮತ್ತು ಕಲಿತ ಮೊರಾರ್ಜಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾಳೆ.
ಹೌದು, ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದ ಕೋರಿ ಬಸವರಾಜ ಮಹಾದೇವಿ ದಂಪತಿಯ ಮಗಳಾದ ತನುಶ್ರೀ ರಾಮಸಾಗರ ಬಳಿಯಲ್ಲಿರುವ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಾಂಗದ ಮೂಲಕ 2025ರ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ 625ಕ್ಕೆ 615 (ಶೇ.98.4) ಅಂಕಗಳಿಸಿ ಶಾಲೆಗೆ ಪ್ರಥಮ ತೃತೀಯ ಸ್ಥಾನಗಳಿಸಿದ್ದಾಳೆ, ಅಲ್ಪಸ್ವಲ್ಪ ಓದಿದ ತಂದೆ-ತಾಯಿಯ ಕನಸು ನನಸು ಮಾಡಿದ್ದಾಳೆ, ಶಾಲೆಯಲ್ಲಿ ಪ್ರಾಚಾರ್ಯ ಮರಿಯಪ್ಪ ಹಾಗೂ ಸಹ ಶಿಕ್ಷಕರ ಪಾಠ, ಪ್ರವಚನ ಕೇಳಿ 625ಕ್ಕೆ 615 ಅಂಕ ಪಡೆದಿದ್ದಾಳೆ.
ಶಾಲೆಗೆ ರಜಾ ಇದ್ದ ಸಮಯದಲ್ಲಿ ತಾಯಿ ಜತೆ ಹೊಲಕ್ಕೆ ಹೋಗಿ ಮೆಕ್ಕೆತೆನೆ ಬಿಡಿಸುವುದು, ಮನೆಯಲ್ಲಿ ಅಮ್ಮನ ಕೆಲಸದಲ್ಲಿ ಸಹಕಾರಿಯಾಗಿ ನಿಲ್ಲುವ ಮೂಲಕ ತನುಶ್ರೀ ತಂದೆಯು ರೈತಾಪಿತನದಲ್ಲಿ ಕೆಲಸ ಮಾಡುತ್ತಾ ಸಂಸಾರ ಗಾಡಿ ಸಾಗಿಸುತ್ತಾರೆ. ತಾಯಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಇವರ ಕಷ್ಟವನ್ನು ಅರಿತು, ಕಷ್ಟವನ್ನು ಮೆಟ್ಟಿನಿಲ್ಲಬೇಕೆಂಬ ಶಿಕ್ಷಣ ಅತಿ ಮುಖ್ಯ ಎಂಬುದನ್ನ ಅರಿತ ತನುಶ್ರೀ, ಶಾಲೆಯಲ್ಲಿ ಪಾಠ, ಪ್ರವಚನ ಆಲಿಸಿ, ನಂತರ ಮನದಟ್ಟು ಮಾಡಿಕೊಂಡು, ಇಂದು ಸಾಧನೆ ಮಾಡಿದ್ದಾಳೆ.
ಎಸ್ ಎಸ್ ಎಲ್ ಸಿ ಯಲ್ಲಿ ಕನ್ನಡ 124, ಇಂಗ್ಲೀಷ್ 99, ಹಿಂದಿ 100, ಗಣಿತ 96, ವಿಜ್ಞಾನ 98, ಸಮಾಜ ವಿಜ್ಞಾನ 98 ಸೇರಿದಂತೆ ಒಟ್ಟಾರೆ 615 ಅಂಕಗಳ ಸಾಧನೆ ತನ್ನಾದಾಗಿಸಿಕೊಂಡಿದ್ದಾಳೆ. ಈ ಸಾಧನೆಗೆ ಪಾಲಕ ಪೋಷಕರು, ಶಾಲೆಯ ಪ್ರಾಚಾರ್ಯ ಹಾಗೂ ಸಹ ಶಿಕ್ಷಕರು ಪ್ರಶಂಸೆ ವ್ಯಕ್ತಪಡಿಸುವ ಜತೆಗೆ ಮುಂದಿನ ಶಿಕ್ಷಣದ ಭವಿಷ್ಯವು ಉಜ್ವಲವಾಗಿರಲೆಂದು ಹಾರೈಯಿಸಿದ್ದಾರೆ.

1ರಿಂದ 5ರವೆಗೆ ಸುಗ್ಗೇನಹಳ್ಳಿ ವಿದ್ಯಾಭಾರತಿ ಶಾಲೆಯಲ್ಲಿ ವ್ಯಾಸಾಂಗ ಮಾಡಿ, ನಂತರ ಪರೀಕ್ಷೆ ಮೂಲಕ ರಾಮಸಾಗರ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಗೊಂಡಿರುವೆ, ಇಲ್ಲಿನ ಶಾಲೆಯಲ್ಲಿ ಪ್ರಾಚಾರ್ಯ ಮರಿಯಪ್ಪ ಹಾಗೂ ಸಹ ಶಿಕ್ಷಕರ ಮಾರ್ಗದರ್ಶನ ಮತ್ತು ಪಾಠ, ಪ್ರವಚನ ಆಲಿಸಿ, ನಂತರ ಮನದಟ್ಟು ಮಾಡಿಕೊಂಡು, ನಿರಂತರವಾಗಿ ವಿದ್ಯಾಭ್ಯಾಸ ಮಾಡಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಪಿಯುಸಿಯಲ್ಲಿ ಪಿಸಿಎಂಬಿ (ಸೈನ್ಸ್) ಮಾಡುತ್ತೇನೆ ಮತ್ತು ಮುಂದಿನ ದಿನದಲ್ಲಿ ಕೆಎಎಸ್ ಮತ್ತು ಐಎಎಸ್ ಮಾಡುವ ಗುರಿಯಿದೆ. ಎಸ್ ಎಸ್ ಎಲ್ ಸಿ ಗೆ ಬರುವ ವಿದ್ಯಾರ್ಥಿಗಳು ಗುರುಗಳ ಆದೇಶವನ್ನು ಪರಿಪಾಲಿಸಿ, ನಿರಂತರವಾಗಿ ಕಲಿತರೆ ಸಾಧನೆ ಮಾಡಲು ಸಾಧ್ಯ.
ಕೆ.ತನುಶ್ರೀ, ವಿದ್ಯಾರ್ಥಿನಿ, ದೇವಲಾಪುರ.

ಮಕ್ಕಳ ಭವಿಷ್ಯ ಶಿಕ್ಷಣದಲ್ಲಿ ಅಡಗಿದ್ದು, ಗುರುಗಳ ಮಾರ್ಗದರ್ಶನದೊಂದಿಗೆ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದ್ದು, ಹೆಚ್ಚಿನ ಆಸಕ್ತಿವಹಿಸಿ, ಒಳ್ಳೆಯ ಸರ್ಕಾರಿ ಹುದ್ದೆಗಳನ್ನು ಪಡೆಯಬೇಕು.

  • ಕೋರಿ ಬಸಪ್ಪ, ಲಿಂಗಮ್ಮ, ಅಜ್ಜ ಅಜ್ಜಿ.

ಏನೇ ಕಷ್ಟವಾದರೂ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಗುಣಮಟ್ಟದ ಶಿಕ್ಷಣ ಕೊಡಿಸುವುದು ಪಾಲಕರ ಜವಾಬ್ದಾರಿಯಾಗಿದೆ. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಶಿಕ್ಷಣದ ಆಸ್ತಿಯನ್ನಾಗಿ ರೂಪಿಸಿದರೆ, ತಮ್ಮ ಕಾಲಮೇಲೆ ನಿಂತುಕೊಳ್ಳಲು ಸಾಧ್ಯ.

  • ಕೆ.ಬಸವರಾಜ ತಂದೆ ದೇವಲಾಪುರ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!