ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಓನಕೆ ಓಬವ್ವ ಉತ್ಸವಕ್ಕೆ ಚಾಲನೆ:ತಡರಾತ್ರಿವರೆಗೂ ಕಲೆಗಳನ್ನುವೀಕ್ಷಿಸಿ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದ ಶಾಸಕ-ಡಾ.ಶ್ರೀನಿವಾಸ್.ಎನ್.‌ಟಿ.‌

ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ದಿ. 24-2-24 ರಂದು ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರದ ಮಟ್ಟದಲ್ಲಿ ಓನಕೆ ಓಬವ್ವ ಉತ್ಸವದ  ಮೆರವಣಿಗೆಗೆ ಮಾನ್ಯ ಶಾಸಕರು ಚಾಲನೆ ನೀಡಿದರು. ಶಾಸಕರು ಮತ್ತು ಜಿಲ್ಲಾ ಅಧಿಕಾರಿಗಳು ಎತ್ತಿನ ಬಂಡಿ ಮೂಲಕ ವಿವಿಧ ಓಣಿ-ಕೇರಿಗಳಲ್ಲಿ ತೆರಳಿ ಅಪಾರ ಜನರೊಂದಿಗೆ ನಾಡಿನ ವಿವಿಧ ಮೂಲೆಯಿಂದ ಬಂದ  ನೆಲ ಮೂಲ ಸೊಗಡಿನ ಕಲೆ,ಕುಣಿತ,ಬಣ್ಣ ಬಣ್ಣದ ಕಲರವ ಸಂಭ್ರಮದ ನಗು ಮುಖದೊಂದಿಗೆ ಮುಖ್ಯ ವೇದಿಕೆ ತಲುಪಿದರು.ಬಳಿಕ ಶಾಸಕರು ಜನರನ್ನು ಉದ್ದೇಶಿಸಿ ಮಾತನಾಡಿದರು.ಕಳೆದ ವರ್ಷ ಈ ನೆಲದಲ್ಲಿ ನಾನು ಒಂದು ಮಾತು ಕೊಟ್ಟಿದ್ದೆ.ನಾನು  ಶಾಸಕನಾದರೇ,ಓನಕೆ ಓಬವ್ವ ಉತ್ಸವವನ್ನು ಸರ್ಕಾರ ಮಟ್ಟದಲ್ಲಿ ನಡೆಸಿಕೊಡುತ್ತೇನೆ.ನನಗೆ ಒಂದು ಅವಕಾಶ ಕೊಡಿ ಎಂದೂ ತಮ್ಮಲ್ಲಿ ಮನವಿ ಮಾಡಿಕೊಂಡಿದ್ದೆ.ನಾನು ಶಾಸಕ ಆದಾಗಿನಿಂದಲೂ ಸರ್ಕಾರದ ಮಟ್ಟದ ಪ್ರತಿಯೊಂದು ಹಂತದ ಹಬ್ಬದ ರೀತಿಯಲ್ಲಿ ಮೂವತ್ತು ಲಕ್ಷ ಹಣ ತಂದು ವಿಜೃಂಭಣೆಯಿಂದ ಓನಕೆ ಓಬವ್ವ ಉತ್ಸವನ್ನು ಆಚರಿಸಲು ಕಾರಣವಾಯಿತು.ಇಲ್ಲಿನ ಸಂತಸ ಕ್ಷಣಗಳನ್ನು ನೋಡಿದಾಗ ನನ್ನಲ್ಲಿಯೂ ಮಾತೇ ಬರುತ್ತಿಲ್ಲ.”ನಾನು ಮಾತುಗಾರನಲ್ಲ,ಕೆಲಸಗಾರ,ಕೆಲಸ ಮಾಡಿ ತೋರಿಸುತ್ತೇನೆ.”ಎಂದು ಹೇಳಿ,ನಮ್ಮ ಘನ ಸರ್ಕಾರ ನುಡಿದಂತೆ ನಡೆದಿದೆ ಎಂದರು.‌ಇಲ್ಲಿ ಬಡತನ- ಸಿರಿತನ,ಹಸಿವು-ಅನಕ್ಷರತೆ ಇದೆ.ಪ್ರತಿಯೊಂದು ವಿಚಾರಗಳನ್ನು ಸೂಕ್ಷ್ಮವಾಗಿ ನೋಡುತ್ತಲೇ ಅಭಿವೃದ್ಧಿ ವಿಚಾರದಲ್ಲಿ ಎಚ್ಚರಿಕೆಯಿಂದ ಪ್ರತಿಯೊಂದು ಹೆಜ್ಜೆ ಇಡುತ್ತೇನೆ.ನಮ್ಮ ನೆಲದಲ್ಲಿ ಪಾಳೆಯಗಾರರ ಸಾಹಸ ಮತ್ತು ಶೌರ್ಯದ ಭಾವನೆಗಳು ಇಂದಿಗೂ ಇವೆ. ಸರ್ಕಾರದಿಂದ ಕೋಟೆ ಅಭಿವೃದ್ಧಿಗಾಗಿ ಮೂರು ಕೋಟಿಯನ್ನು ತಂದಿರುವೆ.ಬರಗಾಲ ನಡುವೆ ಓನಕೆ ಓಬವ್ವ ಉತ್ಸವ ಅಂಗವಾಗಿ ನಾವು ಇಲ್ಲಿ ಸೇರಿದ್ದೇವೆ‌. ಇಲ್ಲಿನ ಪ್ರತಿಯೊಂದು ಸುಂದರ ಕ್ಷಣಗಳನ್ನು ಎಲ್ಲರೂ ಕಣ್ಣು ತುಂಬಿಕೊಂಡು ಸಂತೋಷ ಮತ್ತು ನೆಮ್ಮದಿಯಿಂದ ಇರೋಣ ಎಂದೂ ಹೇಳಿದರು.  ಹಾಗೆಯೇ ತಡರಾತ್ರಿವರೆಗೂ ಶಾಸಕರು ಪ್ರತಿಯೊಂದು ಕಲೆಯನ್ನು ವೀಕ್ಷಿಸಿ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿ ಪ್ರೋತ್ಸಾಹ ನೀಡಿದರು. ಈ ಇದೇ ವೇಳೆ ಮಾನ್ಯ ಜಿಲ್ಲಾಧಿಕಾರಿಗಳಾದ ಎಂ.ಎಸ್.‌ದಿವಾಕರ,ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ  ಹರಿಬಾಬು ಬಿ.ಎಲ್,ಮಾನ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳಾದ ಶ್ರೀ ಸದಾ ಶಿವ ಪ್ರಭು,ಮಾನ್ಯ ಉಪ ವಿಭಾಗ ಅಧಿಕಾರಿಗಳಾದ ಶ್ರೀ ನೊಂಗ್ಜಾಯ್ ಮೊಹಮದ್ ಅಲಿ ಅಕ್ರಮ್ ಶಾ,ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ,ಕಾನಾಮಡುಗು ಶ್ರೀ ಶರಣ ಬಸವೇಶ್ವರ ದಾಸೋಹ ಮಠದ ಶ್ರೀ ಶರಣ ಬಸವೇಶ್ವರ ಸ್ವಾಮಿ,ಪದ್ಮಶ್ರೀ ಪುರಸ್ಕೃತರು ಮಾತಾ ಶ್ರೀ ಮಂಜಮ್ಮ ಜೋಗತಿ,ಓನಕೆ ಓಬವ್ವ ವಂಶಸ್ಥರು ರಾಜಣ್ಣ,ಕೂಡ್ಲಿಗಿ ತಾಲೂಕಿನ ಮತ್ತು ಗುಡೇಕೋಟೆಯ ವಿವಿಧ ಇಲಾಖೆಯ ಅಧಿಕಾರಿಗಳ ಸಮಸ್ತ ಸಿಬ್ಬಂದಿ ವರ್ಗ,ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಉಗ್ರಪ್ಪ ಇನ್ನೂ ಅನೇಕ ಗಣ್ಯಮಾನ್ಯರು,ಮುಖಂಡರು,ಕಲಾವಿದರು, ಸಾರ್ವಜನಿಕರು,ಪತ್ರಕರ್ತರು ಉಪಸ್ಥಿತರಿದ್ದರು.

ವರದಿ ಅಂಗಡಿ ಶಶಿಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ