ಹನೂರು ತಾಲೂಕಿನ ರಾಮಪುರ ಬ್ಲಾಕ್ ಗೆಜ್ಜಲನತ್ತ ಗ್ರಾಮದಲ್ಲಿ ನೂತನವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮವು ಭಾನುವಾರ ರಾಮಪುರ ಬ್ಲಾಕ್ ಗೆಜ್ಜಲನತ್ತ ಗ್ರಾಮದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮೈಸೂರು ವಿಭಾಗೀಯ ಸಂಚಾಲಕರಾದ ಸಿದ್ದರಾಜು ಮಾತನಾಡಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ ಹಾಗೆ ಶಿಕ್ಷಣ ಸಂಘಟನೆ ಹೋರಾಟ ನಾವು ಏನೇ ಕೆಲಸ ಮಾಡಿದರು ಸಂಘಟನೆಯ ಮುಖಾಂತರ ಹೋದರೆ ಅದಕ್ಕೆ ಒಂದು ಬೆಲೆ ಸಿಗುತ್ತದೆ.ನಮ್ಮ ಸಮಸ್ಯೆಗಳನ್ನು ಏನೇ ಇದ್ದರೂ ಸಂಘಟನೆಯ ಮುಖಾಂತರ ಬಗೆಹರಿಸಿಕೊಳ್ಳೋಣ ಹಾಗೂ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಶುಭ ಕೋರಿದರು ನಂತರ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಚುನಾವಣಾ ಪ್ರಚಾರಕ್ಕೆ ಬಂದು ಪ್ರತಿನಿಧಿಗಳು ಯಾವುದೇ ಆಮಿಷಕ್ಕೆ ಒಡ್ಡಿದರು ಅವರ ಆಮಿಷಕ್ಕೆ ಒಳಗಾಗಬಾರದೆಂದು ಕಿವಿಮಾತು ಹೇಳಿದರು.
ಈ ಸಂಧರ್ಭದಲ್ಲಿ ಸೇರ್ಪಡೆಯಾದ ಪದಾಧಿಕಾರಿಗಳು
ಪೂವಯ್ಯ,ಚಿನ್ನಾರಾಜು,ಸಂತೋಷ್,ಸತ್ಯ ,ಕುಮಾರ, ಗುರುಮೂರ್ತಿ,ಕೃಷ್ಣ,ಸಲೀಂ,ಮಾದೇವ,ಚಿತ್ರ,ರಾಜೇಶ್ವರಿ,ಈಶ್ವರಿ,ಸೌಂದರ್ಯ,ಪಳನಿಯಮ್ಮ,ಮಹದೇವಮ್ಮ,ಕಂದಮ್ಮ,ರಫೀಕ್,ಹರೀಶ್,ಸಂಪತ್,ಮಹೇಶ್, ಸೇರ್ಪಡೆಗೊಂಡರು.
ಈ ಸಂಧರ್ಭದಲ್ಲಿ ಸಿದ್ದರಾಜು ಮೈಸೂರು ವಿಭಾಗೀಯ ಸಂಚಾಲಕರು ಕೆ.ವೀರ ಚಾಮರಾಜನಗರ ಜಿಲ್ಲಾ ಸಂಚಾಲಕರು,ಮಾದೇಶ್ ಹನೂರು ತಾಲೂಕು ಸಂಚಾಲಕರು,ನಾಗಣ್ಣ ಜಿಲ್ಲಾ ಸಂಘಟನಾ ಸಂಚಾಲಕರು ಚಾಮರಾಜನಗರ,ಭಾಗ್ಯಮ್ಮ ಮಹಿಳಾ ಘಟಕ ಜಿಲ್ಲಾ ಸಂಚಾಲಕರು, ಗಣೇಶ್,ಮುರುಗೇಶ್,ಮರಿಯಪ್ಪ,ತಾಲೂಕು ಸಂಘಟನಾ ಸಂಚಾಲಕರು ರಾಮಪುರ ಬ್ಲಾಕ್, ಹಾಗೂ ಹಿಂಡಯ್ಯ ಇದ್ದರು.
ವರದಿ:ಉಸ್ಮಾನ್ ಖಾನ್