ಸಿರಿವಂತಿಕೆ ಸರಿಸಿ
ಸರಳತೆಯ ಮೆರಸಿ
ಸ್ವಾರ್ಥ ಅಳಿಸಿ
ಬಣ್ಣ ಹಚ್ಚೋಣ
ಕೀಳಾಗಿ ನೋಡದೇ
ಹಿಂಸೆಯ ಮಾಡದೇ
ಮೌಲ್ಯವ ಮರೆಯದೇ
ಬಣ್ಣ ಹಚ್ಚೋಣ
ಬಾಂಧವ್ಯ ಗಳಿಸಿ
ಸಂಸ್ಕಾರ ಕಲಿಸಿ
ಸಂಸ್ಕೃತಿ ಉಳಿಸಿ
ಬಣ್ಣ ಹಚ್ಚೋಣ
ಭಾವೈಕ್ಯತೆ ಸಾರುತ
ಹಾಡಿ ಕುಣಿಯುತ
ನಕ್ಕು ನಗಿಸುತ
ಬಣ್ಣ ಹಚ್ಚೋಣ
ದುಷ್ಟ ಚಟಗಳ ಸುಟ್ಟು
ದ್ವೇಷ ಅಸೂಹೆ ಬಿಟ್ಟು
ಪ್ರೀತಿಗೆ ಪಣ ತೊಟ್ಟು
ಬಣ್ಣ ಹಚ್ಚೋಣ
ರಚನೆ-ಶ್ರೀಮತಿ ಭಾಗ್ಯ ಶ್ರೀ ಗವಿಶಿದ್ಧಯ್ಯ ಹಳ್ಳಿಕೇರಿಮಠ