ತುಮಕೂರು:ಎನ್ ಡಿ ಎ ಮೈತ್ರಿ ಅಭ್ಯರ್ಥಿ ಭಾರತೀಯ ಜನತಾ ಪಾರ್ಟಿ ಘೋಷಿಸಿದ ಹಿನ್ನೆಲೆಯಲ್ಲಿ ಇಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಸಿರಾ ತಾಲೂಕಿನ ಭುವನಹಳ್ಳಿ ಯಲ್ಲಿರುವ ಮಾಜಿ ಸಚಿವರು ಹಾಗೂ ಹಿರಿಯ ರಾಜಕೀಯ ಮುತ್ಸದಿಗಳಾದ ದಿವಂಗತ ಬಿ.ಸತ್ಯನಾರಾಯಣ್ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು.
ತದನಂತರ ಭುವನಹಳ್ಳಿಯಲ್ಲಿ ನ ತಾಲೂಕ್ ಜೆಡಿಎಸ್ ಅಧ್ಯಕ್ಷರು ಹಾಗೂ ದಿವಂಗತ ಬಿ ಸತ್ ನಾರಾಯಣ್ ರವರ ಪುತ್ರ ಬಿ.ಎಸ್ ಸತ್ಯ ಪ್ರಕಾಶ್ ರವರ ಮನೆಗೆ ಭೇಟಿ ನೀಡಿ ಬೆಂಬಲಿಸುವಂತೆ ಕೋರಿದರು.
ವರದಿ-ಕೊಟ್ಟ ಕರಿಯಣ್ಣ