ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಉಲ್ಲಾಸ್ ರಾಯ್ಕರ್ ರವರಿಗೆ ಸೇರಿದ ದಾಖಲೆ ಇಲ್ಲದ 1.63.000 ಸಾವಿರ ಹಣ ಮತ್ತು 2.70.000 ಸಾವಿರ ಬೆಲೆಬಾಳುವ
56.360 ಗ್ರಾಮ್ ಚಿನ್ನದ ಆಭರಣ ಜಪ್ತಿ
ಮಾಡಿಕೊಂಡ ಪೊಲೀಸ್ ಅಧಿಕಾರಿ ರವಿ ದಾಖಲೆ ಇಲ್ಲದಿದ್ದಲ್ಲಿ ಹಣವನ್ನು ಜಪ್ತಿ ಮಾಡಿ ತಾಲೂಕು ಟ್ರಜೂರಿಲ್ಲಿ ಇಡುತ್ತೇವೆ ಎಂದು ಹೇಳಿದರು.
ಹಣಕ್ಕೆ ಸಂಬಂಧಪಟ್ಟವರು ನಂತರ ಹಣದ ದಾಖಲೆಯನ್ನು ಕೊಟ್ಟಲ್ಲಿ ಅವರಿಗೆ ಮರುಪಾವತಿ ಮಾಡಲಾಗುವುದು ಹಾಗೆ ಯಾರೇ ಹಣ ತಂದರೂ ಅದಕ್ಕೆ ಅಗತ್ಯವಾದ ದಾಖಲೆಯನ್ನು ಇಟ್ಟುಕೊಂಡು ಬಂದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ.
ಸಾರ್ವಜನಿಕರು ಈ ಎಲ್ಲಾ ವಿಷಯಗಳನ್ನು ತಿಳಿದುಕೊಂಡು ಎಲ್ಲಾ ದಾಖಲೆಗಳೊಂದಿಗೆ ಹಣದ ವ್ಯವಹಾರಗಳನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್, ಪೋಲಿಸ್ ಸಿಬ್ಬಂದಿ ಚುನಾವಣಾ ಅಧಿಕಾರಿ ಸ್ಥಳದಲ್ಲಿ ಇದ್ದರು.
ವರದಿ ಪ್ರಭಾಕರ್ ಡಿ ಎಂ ಹೊನ್ನಾಳಿ